ಬ್ಲಾಕ್‌ಬಸ್ಟರ್ ಮೂವಿ 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರತಂಡ ಕಳೆದ ವಾರ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದ ಟೀಸರ್ ಅನ್ನು ಅನಾವರಣಗೊಳಿಸಿದ್ದು, ಮಾತ್ರವಲ್ಲದೇ ಪ್ರಮುಖ ತಾರೆಯರಾದ ದೀಪಿಕಾ, ಹೃತಿಕ್ ಮತ್ತು ಅನಿಲ್ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿತ್ತು. ಚಿತ್ರದಲ್ಲಿ ಕರಣ್ ಸಿಂಗ್ ಗ್ರೋವರ್ ಕೂಡ ನಟಿಸಿದ್ದು, ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಹಿರಂಗಗೊಂಡಿದೆ.
ತಾಜ್ ಎಂದೂ ಕರೆಯಲ್ಪಡುವ ಸ್ಕ್ವಾಡ್ರನ್ ಲೀಡರ್ ಸರ್ತಾಜ್ ಗಿಲ್ ಪಾತ್ರದಲ್ಲಿ ನಟ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಳ್ಳಲಿದ್ದು, ಅವರ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ. ಸಿನಿಮಾದ ಹಿಂದಿರುವ ಪ್ರೊಡಕ್ಷನ್ ಹೌಸ್ ಮಾರ್ಫ್ಲಿಕ್ಸ್ ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಿದೆ. ಪೋಸ್ಟರ್‌ನಲ್ಲಿ ಕರಣ್ ಸಿಂಗ್ ಗ್ರೋವರ್ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಏರ್ಫೋರ್ಸ್ ಯೂನಿಫಾರ್ಮ್, ಡಾರ್ಕ್ ಸನ್ ಗ್ಲಾಸ್ ಧರಿಸಿ ಖಡಕ್ ನೋಟ ಬೀರಿದ್ದಾರೆ. ಪೋಸ್ಟ್‌ನ ಕ್ಯಾಪ್ಷನ್ನಲ್ಲಿ ನಟನ ಪಾತ್ರದ ಬಗ್ಗೆ ಪ್ರೊಡಕ್ಷನ್ ಹೌಸ್ ಮಾಹಿತಿ ಕೊಟ್ಟಿದೆ. "ಸ್ಕ್ವಾಡ್ರನ್ ಲೀಡರ್ ಸರ್ತಾಜ್ ಗಿಲ್, ಕಾಲ್ ಸೈನ್: ತಾಜ್, ಡೆಸಿಗ್ನೇಶನ್: ಕ್ವಾಡ್ರನ್ ಪೈಲಟ್, ಯುನಿಟ್: ಏರ್ ಡ್ರ್ಯಾಗನ್ಸ್, ಫೈಟರ್ ಫಾರೆವರ್, ಫೈಟರ್ ಜನವರಿ 25 ರಂದು ತೆರೆಗೆ" ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ:'ಕಾಂತಾರ'ದಲ್ಲಿ ನೀವೂ ನಟಿಸಬಹುದು; ಆಸಕ್ತರು ಆಡಿಶನ್ ಅವಕಾಶ ಸದುಪಯೋಗಪಡಿಸಿಕೊಳ್ಳಿ