ಮುಂಬೈ :ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಶೂಟಿಂಗ್ ವೇಳೆ ಹಣೆಗೆ ತಾಗಿಸಿಕೊಂಡಿದ್ದು, ಹಣೆ ಉಬ್ಬಿಕೊಂಡಿದೆ. ಊದಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದು, ಗಾಯಗೊಂಡ ಜಾಗಕ್ಕೆ ಗೆಳೆಯ, ಬಿಗ್ ಬಾಸ್ 15ರ ವಿನ್ನರ್ ಕರಣ್ ಕುಂದ್ರಾ ಅವರು ಐಸ್ ಇಟ್ಟು, ಉಪಚರಿಸುತ್ತಿರುವ ವಿಡಿಯೋವನ್ನು ಶನಿವಾರ ತೇಜಸ್ವಿ ಪ್ರಕಾಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗಾಯಗೊಂಡ ಹಣೆಗೆ ಐಸ್ ಇಟ್ಟ ಕರಣ್ ಕುಂದ್ರಾ.. ಇವ್ರೇ ಬೆಸ್ಟ್ ಬಾಯ್ಫ್ರೆಂಡ್ ಎಂದ ನಟಿ ತೇಜಸ್ವಿ ಪ್ರಕಾಶ್ - ಕರಣ್ ಕುಂದ್ರಾ
ಶೂಟಿಂಗ್ ವೇಳೆ ಗಾಯಗೊಂಡ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಹಣೆಗೆ ಗೆಳೆಯ ಕರಣ್ ಕುಂದ್ರಾ ಐಸ್ ಹಚ್ಚಿ ಸಾಂತ್ವನ ಗೊಳಿಸುತ್ತಿರುವ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತೇಜಸ್ವಿಯನ್ನು ಸಾಂತ್ವನಗೊಳಿಸುತ್ತಿರುವ ಕರಣ್ ಕುಂದ್ರಾ
ಕರಣ್ ಕುಂದ್ರಾ ಅವರು ಒಬ್ಬ ಕಾಳಜಿಯುಳ್ಳ ಪ್ರಿಯಕರ ಎಂಬುದನ್ನು ತೇಜಸ್ವಿ ಅವರು ಹಂಚಿಕೊಂಡಿರುವ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ. ಇದರೊಂದಿಗೆ ಈ ಜೋಡಿಯ ಬಾರಿಶ್ ಆಯಿ ಹೈ ಮ್ಯೂಸಿಕಲ್ ವಿಡಿಯೋ ವೀಕ್ಷಕರಿಂದ ಹೆಚ್ಚಿನ ಪ್ರಶಂಸೆಯನ್ನೂ ಪಡೆಯುತ್ತಿದೆ.
ಇದನ್ನೂ ಓದಿ :ರಣವೀರ್ ಸಿಂಗ್ ಬೆತ್ತಲೆ ಫೋಟೋ ಪ್ರಕರಣ: ಮುಂಬೈ ಪೊಲೀಸರಿಂದ ನಟನಿಗೆ ಸಮನ್ಸ್