ಕರ್ನಾಟಕ

karnataka

ETV Bharat / entertainment

ಕರಣ್ ಕುಂದ್ರಾ 20 ಕೋಟಿ ರೂಪಾಯಿ ಫ್ಲಾಟ್‌ನ ವಿಡಿಯೋಗೆ 'ಸೋ ಪ್ರೌಡ್'​ ಎಂದವರು ಯಾರು..? - ಕರಣ್ ಕುಂದ್ರಾ ಅವರ 20 ಕೋಟಿ ರೂಪಾಯಿ ಫ್ಲಾಟ್‌

ಬಿಗ್ ಬಾಸ್ 15 ಖ್ಯಾತಿಯ ಕರಣ್ ಕುಂದ್ರಾ ತಮ್ಮ ಕನಸಿನ ಮನೆಯನ್ನು ಮುಂಬೈ ಖರೀದಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Karan Kundrra flat priced Rs 20 cr
ಕರಣ್ ಕುಂದ್ರಾ ಅವರ 20 ಕೋಟಿ ರೂಪಾಯಿ ಫ್ಲಾಟ್‌

By

Published : May 14, 2022, 11:00 PM IST

ಮುಂಬೈ (ಮಹಾರಾಷ್ಟ್ರ): ಬಿಗ್ ಬಾಸ್ 15 ಖ್ಯಾತಿಯ ಕರಣ್ ಕುಂದ್ರಾ ಅವರು ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಿರುವುದರ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪಾರ್ಟ್ಮೆಂಟ್ ಬಾಂದ್ರಾ ರಿಕ್ಲಮೇಷನ್ ಪ್ರದೇಶಕ್ಕೆ ಹತ್ತಿರದಲ್ಲಿದೆ.

ಅವರ ಹೊಸ ಮನೆಯು ಸಮುದ್ರದ ಮುಖದ ನೋಟವನ್ನು ಹೊರತುಪಡಿಸಿ ಖಾಸಗಿ ಲಿಫ್ಟ್ ಮತ್ತು ಈಜುಕೊಳವನ್ನು ಹೊಂದಿದೆ. ಫ್ಲಾಟ್ ಮೌಲ್ಯವು 20 ಕೋಟಿ ರೂ ಆಗಲಿದೆ ಎಂದು ಅಂದಾಜಿಸಲಾಗಿದೆ.

ಪುರಸಭೆಯ ನೋಂದಣಿ ಕಚೇರಿಯ ಹೊರಗೆ ಕರಣ್ ಕುಂದ್ರಾರ ನಿಂತಿರುವ ಫೋಟೋ ವೈರಲ್ ಆಗಿದೆ. ಶನಿವಾರ, ಕರಣ್ ತಮ್ಮ ಮನೆಯ ವಿಡಿಯೋವನ್ನು ಸಾಮಾಜಿಕ ಜಾತಲಾಣದಲ್ಲಿ ಹಂಚಿಕೊಂಡಿದ್ದಾರೆ. ಕರಣ್ ವಿಡಿಯೋವನ್ನು ಹಂಚಿಕೊಂಡ ಕೂಡಲೇ, ಅವರ ಗೆಳತಿ ತೇಜಸ್ವಿ ಪ್ರಕಾಶ್ ಅವರು ತಮ್ಮ ಪೋಸ್ಟ್‌ನಲ್ಲಿ 'ಸೋ ಪ್ರೌಡ್​' ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ತಿಂಗಳ ಸಂಭ್ರಮ.. ಅಪರೂಪದ ಫೋಟೋಸ್​​ ಹಂಚಿಕೊಂಡ ಆಲಿಯಾ..

ABOUT THE AUTHOR

...view details