ಮುಂಬೈ (ಮಹಾರಾಷ್ಟ್ರ):ಕಾಫಿ ವಿತ್ ಕರಣ್ನ ಏಳನೇ ಸೀಸನ್ಗೆ ಕರಣ್ ಜೋಹರ್ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ಅವರು ತಮ್ಮ ಆಪ್ತೆ ಮತ್ತು ನಟಿ ಆಲಿಯಾ ಭಟ್ ಗರ್ಭಿಣಿಯಾಗಿರುವ ಸುದ್ದಿಯನ್ನು ಕೇಳಿ ಕಣ್ಣೀರು ಹಾಕಿದ್ದಾರೆ. ಇನ್ನು ಕೆಲವರು ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಆಲಿಯಾ ಗರ್ಭಿಣಿ ಆದ್ರಾ ಎಂದು ಆಶ್ಚರ್ಯವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಆಲಿಯಾ ನನ್ನ ಕಚೇರಿಗೆ ಬಂದು ಈ ವಿಷಯವನ್ನು ಹೇಳಿದಾಗ ನಾನು ಅತ್ತುಬಿಟ್ಟೆ. ಅದುವೇ ನನ್ನ ಮೊದಲ ರಿಯಾಕ್ಷನ್ ಆಗಿತ್ತು. ನನಗೆ ನೆನಪಿದೆ ಆ ದಿನ ನಾನು ಕೆಟ್ಟದಾಗಿ ಕೂದಲು ಬಿಟ್ಟಿದ್ದೆ. ನಾನು ಕ್ಯಾಪ್ ಧರಿಸಿ ಕುಳಿತುಕೊಂಡಿದ್ದೆ, ಆಗ ಆಲಿಯಾ ನನಗೆ ಈ ವಿಷಯ ಹೇಳಿದಳು. ನೀನು ತಾಯಿ ಆಗುತ್ತಿದ್ದೀಯಾ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಇದು ತುಂಬಾ ಭಾವನಾತ್ಮಕ ವಿಷಯ ಎಂದು ಕರಣ್ ಹೇಳಿದರು.