ನಟಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗಲು ಕರಣ್ ಜೋಹರ್ ಕಾರಣ ಎಂದು ಕಂಗನಾ ರಣಾವತ್ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಮತ್ತು ಕರಣ್ ಭೇಟಿಯಾಗಿರುವ ವಿಡಿಯೋ ವೈರಲ್ ಆಗಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಉದ್ಘಾಟನೆ ಕಾರ್ಯಕ್ರಮವು ಶುಕ್ರವಾರ ರಾತ್ರಿ ನಡೆಯಿತು.
ಸಮಾರಂಭದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ನ ಅನೇಕ ತಾರೆಯರು ಭಾಗಿಯಾಗಿದ್ದರು. ಜೊತೆಗೆ ನಿನ್ನೆ ತಾನೇ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ಪತಿ, ಅಮೆರಿಕನ್ ಗಾಯಕ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಚೋಪ್ರಾಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಪ್ರಿಯಾಂಕಾ ಚೋಪ್ರಾ ಮತ್ತು ಕರಣ್ ಜೋಹಾರ್ ಒಟ್ಟಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಜೊತೆಗೆ ಇಬ್ಬರು ಪರಸ್ಪರ ಆಲಿಂಗನ ಮಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ನಟಿ ಕಂಗನಾ ರಣಾವತ್ ಅವರು "ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗಲು ಕರಣ್ ಜೋಹರ್ ಕಾರಣ" ಎಂಬುದಾಗಿ ಆರೋಪಿಸಿದ್ದರು. ಕರಣ್ ಜೋಹರ್ ಪ್ರಿಯಾಂಕಾರನ್ನು ನಿಷೇಧಿಸಿದ್ದರು ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂಬಂತೆ ಕರಣ್ ಮತ್ತು ಪ್ರಿಯಾಂಕಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಜಯ್ ದೇವಗನ್ ನಟನೆಯ 'ಭೋಲಾ'ಗೆ ಮಿಶ್ರ ಪ್ರತಿಕ್ರಿಯೆ: ಮೊದಲ ಕಲೆಕ್ಷನ್ ಎಷ್ಟು ಗೊತ್ತಾ?
ಪ್ರಿಯಾಂಕಾ ಚೋಪ್ರಾ ತಮ್ಮ ಬೋಲ್ಡ್ ಸ್ಟೈಲ್ನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಕರಣ್ ಜೋಹರ್ ಡ್ಯಾಪರ್ ಲುಕ್ನಲ್ಲಿ ಕೂಲ್ ಆಗಿ ಕಾಣಿಸುತ್ತಿದ್ದರು. ಇಬ್ಬರೂ ಜೊತೆಯಾಗಿಯೇ ನಿಂತುಕೊಂಡು ಮಾತನಾಡುವ ವಿಡಿಯೋವನ್ನು ಪಾಪರಾಜಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು, "ಯಾರಾದ್ರೂ ಪ್ಲೀಸ್, ಕಂಗನಾ ರಣಾವತ್ ಅವರನ್ನು ಕರೆಯಿರಿ" ಎಂಬುದಾಗಿ ಕಮೆಂಟ್ ಮಾಡುತ್ತಿದ್ದಾರೆ. ಬಳಿಕ ಪ್ರಿಯಾಂಕಾ ಅವರು ದೀಪಿಕಾ ಪಡುಕೋಣೆ ಜೊತೆಯೂ ಮಾತನಾಡಿದ್ದಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಕರಣ್ ಜೋಹರ್ ಮೊದಲಿಗೆ ದೀಪಿಕಾ ಪಡುಕೋಣೆ ಜೊತೆ ಮಾತನಾಡುವುದನ್ನು ಕಾಣಬಹುದು. ಅದಾಗಿ ರಣವೀರ್ ಸಿಂಗ್ ಜೊತೆ ಮಾತನಾಡಿ, ತದನಂತರ ಪತಿ ನಿಕ್ ಜೋನಾಸ್ ಜೊತೆ ಬಂದಿದ್ದ ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿಯಾದರು. ಇಬ್ಬರೂ ಮೊದಲು ಒಬ್ಬರನೊಬ್ಬರು ಅಪ್ಪಿಕೊಂಡು ನಗುತ್ತಾ ಮಾತನಾಡುವುದನ್ನು ದೃಶ್ಯದಲ್ಲಿ ನೋಡಬಹುದು.
ತವರಿಗೆ ಬಂದ ಪ್ರಿಯಾಂಕಾ: ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಜೊತೆ ನಿನ್ನೆಯಷ್ಟೇ ಭಾರತಕ್ಕೆ ಬಂದಿದ್ದಾರೆ. 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದ ನಂತರ ಪುತ್ರಿ ಜೊತೆಗೆ ನಿಕ್ ಮತ್ತು ಪ್ರಿಯಾಂಕಾ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ತಮ್ಮ ಹೇರ್‌ಕೇರ್ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುವ ಸಲುವಾಗಿ ದೇಶಕ್ಕೆ ಬಂದಿದ್ದರು. ಆದ್ರೆ ಪುತ್ರಿಯೊಂದಿಗೆ ಬಂದಿರುವುದು ಅವರ ಮೊದಲ ಭೇಟಿ ಆಗಿದೆ.
ಇದನ್ನೂ ಓದಿ:ಅಂಬಿ ಸ್ಮಾರಕ ನಿರ್ಮಾಣ ಕುರಿತು ಚೇತನ್ ಹೇಳಿಕೆ; ನಟನ ವಿರುದ್ಧ ಫಿಲ್ಮ್ ಚೇಂಬರ್ ಆಕ್ರೋಶ