ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಬಾಲಿವುಡ್ ಹೆಸರಾಂತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಶೂಟಿಂಗ್ಗಾಗಿ ಚಿತ್ರತಂಡದ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಚಿತ್ರದ ನಿರ್ದೇಶಕರು ಕಾಶ್ಮೀರದಲ್ಲಿ ನಡೆಯುವ ಚಿತ್ರದ ಶೂಟಿಂಗ್ 10 ದಿನಗಳ ವೇಳಾಪಟ್ಟಿ ಹೊಂದಿದ್ದರು. ಈಗ ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿದಿದೆ ಎಂದು ತಿಳಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರೀಕರಣವನ್ನು ಪೂರ್ಣಗೊಳಿಸಿರುವುದರ ಬಗ್ಗೆ ಘೋಷಿಸಲು ಕರಣ್ ಜೋಹರ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಮೇರಿ ಪರ್ಫಾರ್ಮೆನ್ಸ್ ಪೆ ಮತ್ ಜಾವೋ, ಮೇರಿ ಫೀಲಿಂಗ್ಸ್ ಕೊ ಸಮ್ಜಾವೋ. ಕ್ಯಾಮರಾಮ್ಯಾನ್ @ಶೌನಗೌತಮ್!" ಎಂದು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಮುಂದಿನ ತಿಂಗಳೂ ಏಪ್ರಿಲ್ 28ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗ ಬೇಕಿದ್ದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರವು ಈಗ ಚಿತ್ರವು ಜುಲೈ 28ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಮಾರ್ಚ್ 1ರಂದು ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಆಗಮಿಸಿದ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಬಿಗಿ ಭದ್ರತಾ ಕ್ರಮಗಳ ನಡುವೆ ಗುಲ್ಮಾರ್ಗ್ ಪ್ರದೇಶದಲ್ಲಿ ಚಿತ್ರೀಕರಿಸಿದ್ದಾರೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಜೊತೆಗೆ ಶಬಾನಾ ಅಜ್ಮಿ, ಜಯಾ ಬಚ್ಚನ್ ಮತ್ತು ಧರ್ಮೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
‘ತೂ ಜೂಟಿ ಮೇ ಮಕ್ಕರ್’ ಚಿತ್ರ ಬಿಡುಗಡೆ: ಬಾಲಿವುಡ್ ಬೇಡಿಕೆ ತಾರೆಯರಾದ ರಣ್ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ‘ತೂ ಜೂಟಿ ಮೇ ಮಕ್ಕರ್’ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಈ ಚಿತ್ರ ಇಂದು ತೆರೆಕಂಡಿದೆ. ಕಲೆಕ್ಷನ್ ವಿಚಾರದಲ್ಲಿ ಪ್ರೇಕ್ಷಕರ ಸ್ಪಂದನೆ ಸಕಾರಾತ್ಮಕವಾಗಿದೆ. ಮೊದಲ ದಿನ ಕುಟುಂಬಸ್ಥರು, ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಿದ್ದು, ಮೊದಲ ವಾರದಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಆರಂಭಿಕ ಟ್ರೆಂಡ್‌ಗಳ ಆಧಾರದ ಮೇಲೆ ಚಿತ್ರವು ಈ ವರ್ಷ ಪಠಾಣ್ ಸಿನಿಮಾ ನಂತರ ಎರಡನೇ ಅತಿ ಹೆಚ್ಚುಗಳಿಕೆ ಮಾಡುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ತೂ ಜೂಟಿ ಮೇ ಮಕ್ಕರ್ ಸಿನಿಮಾ ಸುಮಾರು 3,302 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದು, ಇಂದು ಸಂಜೆ 7 ಗಂಟೆವರೆಗಿನ ಶೋಗಳ 84,000 ಟಿಕೆಟ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ. ಈ ಟಿಕೆಟ್ಗಳು ಸುಮಾರು 2.50 ಕೋಟಿ ರೂ. ಮೌಲ್ಯದ್ದಾಗಿದೆ.
ಇದನ್ನೂ ಓದಿ:ಶಾರುಖ್ ಖಾನ್ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್ ಬ್ಯೂಟಿ ನಯನತಾರಾ