ಬಾಲಿವುಡ್‌ನ ಜನಪ್ರಿಯ ಡಿಯೋಲ್ ಫ್ಯಾಮಿಲಿಗೆ ಇಂದು ವಿಶೇಷ ದಿನ. ಫೇಮಸ್ ನಟ ಸನ್ನಿ ಡಿಯೋಲ್ ಅವರ ಹಿರಿಮಗ ಕರಣ್ ಡಿಯೋಲ್ (Karan Deol) ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ. ಕೆಲವೇ ಗಂಟೆಗಳಲ್ಲಿ ತಮ್ಮ ಬಹುಕಾಲದ ಗೆಳತಿ ದ್ರಿಶಾ ಆಚಾರ್ಯ (Drisha Acharya) ಅವರ ಕೈ ಹಿಡಿಯಲಿದ್ದಾರೆ. ಇದೀಗ ಶಾಸ್ತ್ರಗಳು ಜರುಗುತ್ತಿವೆ. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್‌ಗೆ ವರ ಮತ್ತು ಅವರ ಕುಟುಂಬಸ್ಥರು ಈಗಾಗಲೇ ಆಗಮಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪಾಪರಾಜಿಗಳ ಖಾತೆಯಿಂದ ಮದುವೆ ಕಾರ್ಯಕ್ರಮದ ಫೋಟೋ, ವಿಡಿಯೋ ಶೇರ್ ಆಗುತ್ತಿವೆ. ಪ್ರತಿ ಫೋಟೋಗಳು ಸದ್ಯ ಟ್ರೆಂಡ್ ಆಗಿವೆ. ಇಡೀ ಡಿಯೋಲ್ ಕುಟುಂಬ ಮದುವೆಯಲ್ಲಿ ಭಾಗಿ ಆಗಿದ್ದಾರೆ. ಕುದುರೆ ಏರಿ ಬಂದ ವರನ ಮೊಗ ಬಹಳ ಸಂತೋಷದಿಂದ ಹೊಳೆಯುತ್ತಿತ್ತು. ಮದುವೆಗೆ ಅತಿಥಿಗಳು ಆಗಮಿಸುತ್ತಿದ್ದಾರೆ. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ.
ವರನ ತಂದೆ ಸನ್ನಿ ಡಿಯೋಲ್ ಹಸಿರು ಬಣ್ಣದ ಕುರ್ತಾ ಮತ್ತು ಕೆಂಪು ಪೇಟದಲ್ಲಿ ಕಾಣಿಸಿಕೊಂಡಿದ್ದಾರೆ. ಸನ್ನಿ ಡಿಯೋಲ್ ಸಹೋದರ ಬಾಬಿ ಡಿಯೋಲ್ ಕೂಡ ವೈರಲ್ ಆಗುತ್ತಿರುವ ಫೋಟೋ, ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಕೆಂಪು ಪೇಟ, ನೀಲಿ ಶೆರ್ವಾನಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅವರ ಪತ್ನಿ ತಾನ್ಯಾ ಡಿಯೋಲ್ ಸೂಟ್‌ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ವರನ ಅಜ್ಜ ಹಾಗೂ ಹಿರಿಯ ನಟ ಧರ್ಮೇಂದ್ರ ಕೂಡ ಸ್ಥಳಕ್ಕೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ನೀಡಿದರು. ಅವರು ಅತ್ಯಂತ ಸಂತೋಷದಿಂದಿರುವಂತೆ ಕಾಣುತ್ತಿದ್ದರು.