ಕರ್ನಾಟಕ

karnataka

ETV Bharat / entertainment

ಪಂಜಾಬ್​ ಸಿಎಂ ಭಗವಂತ್​ ಮಾನ್​ ಭೇಟಿಯಾದ ಕಾಮಿಡಿಯನ್​ ಕಪಿಲ್​ ಶರ್ಮಾ, ಅರ್ಚನಾ - ಇನ್ಸ್​​ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ

ಈ ಹಿಂದೆ ಪ್ರಸಾರವಾಗುತ್ತಿದ್ದ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​ನಲ್ಲಿ ಸ್ಪರ್ಧಿಯಾಗಿದ್ದ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ

ಪಂಜಾಬ್​ ಸಿಎಂ ಭಗವಂತ್​ ಮಾನ್​ ಭೇಟಿಯಾದ ಕಾಮಿಡಿಯನ್​ ಕಪಿಲ್​ ಶರ್ಮಾ, ಅರ್ಚನಾ
kapil-sharma-archana-met-punjab-cm-bhagwant-mann-in-mumbai

By

Published : Jan 23, 2023, 1:28 PM IST

ಚಂಡೀಗಢ:ಕಾಮಿಡಿಯನ್​ ಕಪಿಲ್​ ಶರ್ಮಾ ಮತ್ತು ಅರ್ಚನಾ ಪುರಾನ್​ ಸಿಂಗ್​ ಪಂಜಾಬ್​​​ ಮುಖ್ಯಮಂತ್ರಿ ಭಗವತ್​ ಮನ್​ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಭಾನುವಾರ ಅಂದರೆ ಜನವರಿ 22ರಂದು ಕಪಿಲ್​ ಶರ್ಮಾ ಪಂಜಾಬ್​ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು, ಈ ಸಂಬಂಧ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಇನ್ನು ಈ ಫೋಟೋದಲ್ಲಿ ದಿ ಕಪಿಲ್​ ಶರ್ಮಾ ಶೋ ನ ತೀರ್ಪುಗಾರರಾಗಿರುವ ಅರ್ಚನಾ ಪುರನ್​ ಸಿಂಗ್​ ಕೂಡಾ ಕಂಡು ಬಂದಿದ್ದಾರೆ.

'ಹಿಂದಿನ ದಿನದ ಸಂಜೆ ಮುಂಬೈನಲ್ಲಿ ಬಳಹಣ ದಿನಗಳ ಬಳಿಕ ಸಿಎಂ ಭಗವಂತ್​ ಮನ್​ ಅವರನ್ನು ಭೇಟಿಯಾದೆ ಎಂದು ಮಾಹಿತಿ ನೀಡಿರುವ ಕಪಿಲ್​, ಪಂಜಾಬ್​ ಸಿಎಂ ಅನ್ನು ದೊಡ್ಡ ಅಣ್ಣ ಎಂದು ಉಲ್ಲೇಖಿಸಿರುವುದು ಪೋಸ್ಟ್​ನಲ್ಲಿ ಕಾಣಬಹುದಾಗಿದೆ. ಹೀರೋ ಮತ್ತು ಗೌರವಯುತ ಪಂಜಾಬ್​ ಸಿಎಂ ಸರ್ದರ್​ ಭಗವಂತ್​ ಸಿಂಗ್​ ಮಾನ್​ ಅವರನ್ನು ಬಹು ದಿನಗಳ ಬಳಿಕ ಭೇಟಿಯಾದೆ. ಇದೊಂದು ಪ್ರೀತಿ ಪೂರ್ವಕ ಭೇಟಿ. ನಿಮ್ಮ ಪ್ರೀತಿಗೆ ಗೌರವಕ್ಕೆ ಧನ್ಯವಾದಗಳು' ಎಂದಿದ್ದಾರೆ.

ಪಂಜಾಬ್​ನಲ್ಲಿ ಫಿಲ್ಮ್​ ಸಿಟಿ: ತಮ್ಮ ರಾಜ್ಯಕ್ಕೆ ಬಂಡವಾಳ ಆಕರ್ಷಣೆಗಾಗಿ ಅವರು ಮುಂಬೈಗೆ ಎರಡು ದಿನದ ಪ್ರವಾಸವನ್ನು ನಡೆಸಿದ್ದಾರೆ. ಮುಂಬೈನಲ್ಲಿ ಅವರು ಫಿಲ್ಮ್​ ಸಿಟಿ ತೆರೆಯುವ ಯೋಜನೆ ಹೊಂದಿರುವ ಕುರಿತು ಹಂಚಿಕೊಂಡಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಭಗವಂತ್​ ಸಿಂಗ್​ ಮಾನ್​ ಅವರು, ಮುಂಬೈನಲ್ಲಿ ನೆಲೆಸಿರುವ ಚಿತ್ರೋದ್ಯಮದಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ಈ ಹಿನ್ಲೆ ಪಂಜಾಬ್​ನಲ್ಲಿ ತಮ್ಮ ಉದ್ಯಮ ಆರಂಭಕ್ಕೆ ನಾನು ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಪಂಜಾಬ್​ ಸಿನಿಮೋದ್ಯಮದ ಬಗ್ಗೆ ಮಾತನಾಡಿರುವ ಅವರು, ಪಂಜಾಬಿ ಸಿನಿಮೋದ್ಯಮ ಈಗಾಗಲೇ ದೊಡ್ಡದಿದೆ. ಫಿಲ್ಮ್​ ಸಿಟಿ ಅವರಿಗೆ ದೊಡ್ಡ ವಿಸ್ತರಣೆಗೆ ಅವಕಾಶ ನೀಡಲಿದೆ ಎಂದರು.

ಕಪಿಲ್​ ಶರ್ಮ ತಮ್ಮ ಪ್ರಖ್ಯಾತ ಕಾರ್ಯಕ್ರಮ ದಿ ಕಪಿಲ್​ ಶರ್ಮಾ ಶೋನಿಂದ ದೇಶದೆಲ್ಲೆಡೆ ಚಿರಪರಿಚಿತರಾಗಿದ್ದಾರೆ. ಪಂಜಾಬ್​ ಅಮೃತ್​ಸರ್​ ಮೂಲದ ಶರ್ಮ ತಮ್ಮ ಸ್ವ ಪ್ರಯತ್ನದಿಂದ ಟಿವಿ ರಿಯಾಲಿಟಿ ಶೋನಲ್ಲಿ ಹೆಸರು ಸಂಪಾದಿಸಿದ್ದಾರೆ. ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಟಿವಿ ರಿಯಾಲಿಟಿ ಶೋನಲ್ಲಿ 10 ಲಕ್ಷ ಬಹುಮಾನ ಗೆಲ್ಲುವ ಮೂಲಕ ಇವರು ತಮ್ಮ ಹಾದಿ ಪ್ರಾರಂಭಿಸಿದರು. ಈ ಹಿಂದೆ ಕಪಿಲ್​ ಶರ್ಮಾ, ಫ್ಯಾಮಿಲಿ ಟೈಮ್​ ವಿಥ್​ ಕಪಿಲ್​, ಕಾಮಿಡಿ ನೈಟ್​ ವಿಥ್​ ಕಪಿಲ್​ ನಂತಹ ಕಾರ್ಯಕ್ರಮ ನಡೆಸಿದ್ದಾರೆ.

ಕಾಮಿಡಿ ಶೋನೊಂದಿಗೆ ಪಂಜಾಬ್​ ಸಿಎಂ ಸಂಬಂಧ: ಪಂಜಾಬ್​ ಸಿಎಂ ಭಗವಂತ್​ ಮಾನ್​ ಕೂಡ ಕಾಮಿಡಿ ಶೋಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​ನಲ್ಲಿ ಕೂಡ ಪಂಜಾಬ್​ ಮುಖ್ಯಮಂತ್ರಿಗಳು ಸ್ಪರ್ಧಿಸಿ, ಇದರಿಂದ ಹೆಸರು ಪಡೆದಿದ್ದರು. ಆ ದಿನಗಳಿಂದ ಕಪಿಲ್ ಶರ್ಮಾ ಮತ್ತು ಭಗವಂತ್ ಮಾನ್ ಬಹಳ ವಿಶೇಷ ಹಾಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಭಗವಂತ್ ಮಾನ್ ಸಿಎಂ ಆದಾಗ ಅವರ ಯಶಸ್ಸಿಗೆ ಕಪಿಲ್ ಶರ್ಮಾ ಅಭಿನಂದಿಸಿದ್ದರು.

ಇದನ್ನೂ ಓದಿ: 5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ

ABOUT THE AUTHOR

...view details