ತಾಯಂದಿರ ದಿನದ ಚಾರಿಟಿಗಾಗಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಹಿಂದಿ ಕಾಮಿಡಿ ಕಾರ್ಯಕ್ರಮದಲ್ಲಿ ಖ್ಯಾತಿ ಪಡೆದ ಕಪಿಲ್ ಶರ್ಮಾ ಮತ್ತು ಭಾರ್ತಿ ಸಿಂಗ್ ತಮ್ಮ ಮುದ್ದು ಮಕ್ಕಳೊಂದಿಗೆ ಮಾಡಿದ ರ್ಯಾಂಪ್ ವಾಕ್ ಮಾಡಿ ಸಂತಸಪಟ್ಟರು. ಭಾರ್ತಿ ತಮ್ಮ ಮಗು ಲಕ್ಷ್ ಜೊತೆಗೆ ಹೆಜ್ಜೆ ಹಾಕಿದರೆ, ಕಪಿಲ್ ಮಗಳು ಅನಯ್ರಾ ಕೈ ಹಿಡಿದು ವಾಕ್ ಮಾಡಿದರು.
ಅನಯ್ರಾ ಅಪ್ಪನಿಗೆ ಧಿರಿಸಿಗೆ ಹೊಂದಿಕೆಯಾಗುವಂತೆ ಕಪ್ಪು ಬಣ್ಣದ ಬಟ್ಟೆ ತೊಟ್ಟು ಮಿಂಚಿದಳು. ರ್ಯಾಂಪ್ ಮೇಲೆ ಸಾಗಿದಾಗ ನೆರೆದ ಜನರಿಗೆ ಗಾಳಿಯಲ್ಲಿ ಮುತ್ತನ್ನು ತೇಲಿ ಬಿಟ್ಟಲು. ಅಪ್ಪನೊಂದಿಗೆ ಆಕೆ ಕೈ ಹಿಡಿದು ಹೆಜ್ಜೆ ಹಾಕಿದ ಪರಿಗೆ ಜನರು ಕೂಡ ಚಪ್ಪಾಳೆಯ ಮಳೆಗರೆದರು.
ಭಾರ್ತಿ ಕೂಡ ಕೃಷಣ್ ಕೈ ಹಿಡಿದು ಹೆಜ್ಜೆ ಹಾಕಿದರು. ಆಕೆಯ ಮಗ ಲಕ್ಷ್ಯ ಜೊತೆಯಾದಾಗ ಜನರ ಹುಮ್ಮಸ್ಸು ಹೆಚ್ಚಿತು. ಕೃಷಣ್ ಕೂಡ ಹೆಂಡತಿ ಭಾರ್ತಿ ಜೊತೆಗೆ ಮಗ ಲಕ್ಷ್ ಕೈ ಹಿಡಿದು ಇಡೀ ಕುಟುಂಬ ವಾಕ್ ಮೂಲಕ ಗಮನ ಸೆಳೆದರು. ಇದಾದ ಬಳಿಕ ಮತ್ತೊಮ್ಮೆ ಕಪಿಲ್ ಶರ್ಮಾ ಮತ್ತು ಭಾರ್ತಿ ಒಟ್ಟಾಗಿ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡರು. ಕಪ್ಪು ಬಣ್ಣದ ಮೂಲಕ ಉಡುಗೆ ಮ್ಯಾಚ್ ಮಾಡಿದ ಭಾರ್ತಿ ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಪ್ರಶಂಸೆಯನ್ನು ಕಪಿಲ್ ಶರ್ಮಾ ನೀಡಿದರು. ಇದೇ ಕಾರ್ಯಕ್ರಮದಲ್ಲಿ ಕಿರುತೆರೆ ನಟ ನಿಯಾ ಶರ್ಮಾ ಕೂಡ ಭಾರ್ತಿ ಜೊತೆಗೆ ಹೆಜ್ಜೆ ಹಾಕಿ ಆಕೆಯ ಮಗನೊಂದಿಗೆ ಆಟವಾಡಿದರು.