ಕರ್ನಾಟಕ

karnataka

ETV Bharat / entertainment

ಕಾಂತಾರ 2 ಕಥೆ ಕೆಲಸ ಚುರುಕು.. ಫೋನ್ ಸ್ವಿಚ್​​ ಆಫ್ ಮಾಡಿಕೊಂಡ ಡಿವೈನ್ ಸ್ಟಾರ್ - rishab shetty Kantara

ಪ್ರೀಕ್ವೆಲ್​ ಕಥೆ ಹೆಣೆಯೋ ಸಲುವಾಗಿ ಕಾಂತಾರ ತಂಡ ಬ್ಯುಸಿಯಾಗಿದೆ.

Kantara 2
ಕಾಂತಾರ 2

By

Published : Mar 2, 2023, 12:50 PM IST

'ಕಾಂತಾರ' ಕನ್ನಡ ಚಿತ್ರರಂಗದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೊಯ್ದ ಚಿತ್ರ. ದೇಶ ವಿದೇಶಗಳಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾ. ಪ್ರೇಕ್ಷಕರ ಬಹು ಬೇಡಿಕೆ ಮೇರೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗೆ ಡಬ್​ ಆಗಿ ಎಲ್ಲೆಡೆ ಅಬ್ಬರಿಸಿದ ಈ ಚಿತ್ರದ ಮತ್ತೊಂದು ಭಾಗ ಸಿದ್ಧ ಆಗ್ತಿದೆ.

ನೀವು ನೋಡಿದ್ದು ಕಾಂತಾರ 2, ಇನ್ನು ಬರುವುದು ಕಾಂತಾರ ಪ್ರೀಕ್ವೆಲ್​ ಎಂದ ರಿಷಬ್​ ಶೆಟ್ಟಿ ಅವರೀಗ ಕಥೆ ಹೆಣೆಯೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಪ್ರೀಕ್ವೆಲ್​ ಕಥೆ ಹೆಣೆಯೋ ಸಲುವಾಗಿ ಮಾರ್ಚ್​​ನಿಂದ ಫೋನ್ ಆಫ್​ ಮಾಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಶೆಟ್ರು ತಮ್ಮ ತಂಡದ ಜೊತೆ ಬರವಣಿಗೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಪ್ರೀಕ್ವೆಲ್​ ಕಥೆಗಾಗಿ ಹೊಸಬರನ್ನು ತಂಡಕ್ಕೆ ಸ್ವಾಗತಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಕಾಂತಾರ 2 ಕಥೆ ಕೆಲಸ ಚುರುಕು

ಕೆಜಿಎಫ್ 2 ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಕೆಜಿಎಫ್ ನಂತರ ಬಂದ ಹಲವು ಚಿತ್ರಗಳು ಯಶಸ್ವಿ ಆದವು. ಸ್ಯಾಂಡಲ್​ವುಡ್​ನ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಿತ್ರ ಮಾತ್ರ ಕನ್ನಡ ಸಿನಿಮಾಗಳನ್ನು ಕಡೆಗಣಿಸುವ ಮಂದಿಯ ಹುಬ್ಬೇರುವಂತೆ ಮಾಡಿತು. ಇಂದಿಗೂ ಕಾಂತಾರ ಕುರಿತ ಚರ್ಚೆ ಕಡಿಮೆ ಆಗಿಲ್ಲ ಅನ್ನೋದು ಈ ಚಿತ್ರದ ವಿಶೇಷತೆ.

ಕಾಂತಾರ ಗೆಲುವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಜೊತೆ ಕಾಂತಾರ ಪ್ರೀಕ್ವೆಲ್ ಮಾಡಲು ಪ್ಲಾನ್ ಮಾಡಿರುವ ಹೊಂಬಾಳೆ ಫಿಲ್ಮ್​​ ತಂಡ ರಿಷಬ್ ಬಳಗಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಟ್ಟಿದೆ. ವಿಶೇಷ ಅಂದ್ರೆ ಕಳೆದ ಎರಡು ತಿಂಗಳಿನಿಂದಲೇ ರಿಷಬ್ ತಂಡ ಕಥೆಯಲ್ಲಿ ನಿರತವಾಗಿದೆ. ಅದ್ರೆ ಆ ಕಥೆ ಫೈನಲ್ ಆಗಿಲ್ಲ. ಸ್ಟೋರಿಯನ್ನು ಫೈನಲ್ ಮಾಡಿಕೊಂಡು ಆದಷ್ಟು ಬೇಗ ಶೂಟಿಂಗ್ ಶುರು ಮಾಡುವ ಸಲುವಾಗಿ ತಮ್ಮ ತಂಡದ ಜೊತೆ ಸೇರಿದ್ದಾರೆ ರಿಷಬ್ ಶೆಟ್ರು.

ಕಾಂತಾರ ಯಾವಾಗ ನಿರೀಕ್ಷೆ ಮೀರಿ ಗೆಲುವು ಕಂಡಿತೋ ಆ ಕ್ಷಣದಲ್ಲೇ ರಿಷಬ್ ಅವರ ಜವಾಬ್ದಾರಿ ದುಪ್ಪಟ್ಟಾಗಿದೆ. ಇದನ್ನರಿತ ರಿಷಬ್ ಕಾಂತಾರ ಸೀಕ್ವೆಲ್​ಗಿಂತ ಪ್ರೀಕ್ವೆಲ್​​ ಮಾಡಿದ್ರೆ ಮತ್ತೊಂದು ಹಿಟ್ ನೋಡಬಹುದು ಅನ್ನೋ ಭರವಸೆಯಲ್ಲಿ ಪ್ರೀಕ್ವೆಲ್​ ಕಥೆ ರೆಡಿ ಮಾಡುತ್ತಿದ್ದಾರೆ. ಖುಷಿಯ ವಿಚಾರ ಅಂದ್ರೆ ರಿಷಬ್ ಆರಂಭದ ದಿನಗಳಲ್ಲಿ ಜೊತೆಗಿದ್ದವರು ಈಗಲೂ ಇದ್ದಾರೆ. ಅಲ್ಲದೇ ದೇವರನಾಡು, ಮಾಲಿವುಡ್​​ನಿಂದ ಸ್ಕ್ರಿಪ್ಟ್ ರೈಟರ್ ಒಬ್ಬರು ರಿಷಬ್ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ. ರಿಷಬ್ ಅವರು ಮೊದಲ ಬಾರಿಗೆ ಕೇರಳದ ಕಥೆಗಾರನ ಜೊತೆ ಕೆಲಸ ಮಾಡಲಿದ್ದು, ಆ ಕಥೆಗಾರನ ಬಗ್ಗೆ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ:'ಕಾಂತಾರ 2 ಕೆಲಸ ಶುರು, ಮಾರ್ಚ್​​​ನಿಂದ ಫೋನ್ ಆಫ್': ಫಾಲ್ಕೆ ಪ್ರಶಸ್ತಿ ಬಗ್ಗೆ ರಿಷಬ್​ ಶೆಟ್ಟಿ ಹೀಗಂದ್ರು!

ಆದಷ್ಟು ಬೇಗ ಕಾಂತಾರ ಪ್ರೀಕ್ವೆಲ್, ಪ್ರೀ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿ, ಜೂನ್ ವೇಳೆಗೆ ಶೂಟಿಂಗ್ ಶುರು ಮಾಡಿ, ಇದೇ ವರ್ಷದಲ್ಲಿ ಕಾಂತಾರ ಪ್ರೀಕ್ವೆಲ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿಯಾಗಿ ರಿಲೀಸ್ ಮಾಡಲು ಪ್ಲಾನ್​​ ಮಾಡಲಾಗ್ತಿದೆ. ಅದ್ರೆ ಈ ಚಿತ್ರದ ಟೈಟಲ್, ಪಾತ್ರಧಾರಿಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ರಹಸ್ಯದ ಬಗ್ಗೆ ತಿಳಿಯಬೇಕಾದ್ರೆ ಪ್ರೇಕ್ಷಕರು ಮತ್ತೊಂದಿಷ್ಟು ದಿನ ಕಾಯಬೇಕಿದೆ.

ಇದನ್ನೂ ಓದಿ:'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ಮಾತು

ABOUT THE AUTHOR

...view details