ಕರ್ನಾಟಕ

karnataka

ETV Bharat / entertainment

ಕಾಂತಾರ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ.. ಶಿವನ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ? - kantara movie characters

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವ ಎಂಬ ಪಾತ್ರ ಮಾಡುತ್ತಿದ್ದು, ಅವರ ಜೊತೆಗಿನ ಗ್ಯಾಂಗ್ ಬಗ್ಗೆ ಪರಿಚಯ ಮಾಡಿಕೊಳ್ಳುವ ಒಂದು ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

kantara movie team express experience about shooting
ಕಾಂತಾರ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

By

Published : Sep 23, 2022, 7:26 PM IST

ಒಂದು ದಂತ ಕಥೆ ಅಂತಾ ಟ್ಯಾಗ್ ಲೈನ್ ಹೊಂದಿರುವ ಸಿನಿಮಾ ಕಾಂತಾರ. ಟ್ರೈಲರ್ ಹಾಗೂ ಮೇಕಿಂಗ್ ವಿಡಿಯೋಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಕಾಂತಾರ ದಿನೇ ದಿನೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುತ್ತಿದೆ. ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿಷ್ಠಿತ, ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ, ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರೋ ಕಾಂತಾರ ಚಿತ್ರ ಸಿನಿಮಾ ಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವ ಎಂಬ ಪಾತ್ರ ಮಾಡುತ್ತಿದ್ದು, ಅವರ ಜೊತೆಗಿನ ಗ್ಯಾಂಗ್ ಬಗ್ಗೆ ಪರಿಚಯ ಮಾಡಿಕೊಳ್ಳುವ ಒಂದು ಮೇಕಿಂಗ್ ವಿಡಿಯೋವನ್ನು ಅನಾವರಣ ಮಾಡಲಾಗಿದೆ.

ಕಾಂತಾರ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ಚಿತ್ರತಂಡ

ಕಾಂತಾರ ಸಿನಿಮಾದಲ್ಲಿ ಒಂದು ಜನರೇಷನ್​ನಿಂದ ಹಿಡಿದು ಮತ್ತೊಂದು ಜನರೇಷನ್​​ವರೆಗೂ ಕಥೆ ಬದಲಾಗುಗ್ತಾ ಹೋಗುತ್ತದೆ. 17ನೇ ಶತಮಾನದಿಂದ ಹಿಡಿದು 19ನೇ ಶತಮಾನವರೆಗೂ ಈ ಸಿನಿಮಾ ಕಥೆ ಸಾಗುತ್ತದೆ. ಕಾಡಿನಲ್ಲಿ ಚಿತ್ರೀಕರಣ ಹೇಗೆ ಆಗುತ್ತೆ, ಶಿವನ ಗ್ಯಾಂಗ್​ನಲ್ಲಿ ಯಾರೆಲ್ಲಾ ಸ್ನೇಹಿತರು ಇದ್ದಾರೆ ಅನ್ನೋದನ್ನು ಈ ವಿಡಿಯೋದಲ್ಲಿ ಅನಾವರಣ ಮಾಡಲಾಗಿದೆ.

ರಿಷಬ್ ಶೆಟ್ಟಿ ಜೊತೆ ಯುವ ನಟ ರಂಜನ್, ಪ್ರಕಾಶ್ ತುಂಬಿನಾಡು, ಈ ಚಿತ್ರದ ಕಥೆಗಾರ ಶನೀಳ್ ಗುರು ಅಂತಾ ಮೂರು ಜನ ಕಲಾವಿದರು ಶೆಟ್ಟಿ ಸ್ನೇಹಿತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾದಲ್ಲಿ ಪ್ರವೀಣನ ಪಾತ್ರ ಮಾಡಿದ್ದ ರಂಜನ್ ಕಾಂತಾರ ಸಿನಿಮಾದಲ್ಲಿ ಉದ್ದ ಕೂದಲು ಬಿಟ್ಟುಕೊಂಡು ಲಚ್ಚು ಎಂಬ ಪಾತ್ರ ಮಾಡಿದ್ದಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬೇಡಿಕೆ ಹೊಂದಿರುವ ಪ್ರಕಾಶ್ ತುಂಬಿನಾಡು ಕೂಡ ಕಾಂತಾರ ಸಿನಿಮಾದಲ್ಲಿ ರಾಂಪ ಎಂಬ ಪಾತ್ರವನ್ನ ಮಾಡಿದ್ದು, ಆ ಕ್ಯಾರೆಕ್ಟರ್ ಈ ಚಿತ್ರದಲ್ಲಿ ಎಷ್ಟು ಪ್ರಾಮುಖ್ಯತೆ ಇದೆ ಅನ್ನೋದರ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮೈನವಿರೇಳಿಸುವಂತೆ ಕಂಬಳ ಕೋಣಗಳನ್ನು ಓಡಿಸಿದ ರಿಷಬ್ ಶೆಟ್ಟಿ.. ಮಾಹಿತಿ ಹಂಚಿಕೊಂಡ ಚಿತ್ರತಂಡ

ಇದೇ ಸೆಪ್ಟಂಬರ್ 30ಕ್ಕೆ ದೇಶಾದ್ಯಂತ ಕಾಂತಾರ ಸಿನಿಮಾ ರಿಲೀಸ್ ಆಗಲಿದೆ. ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ಜೋಡಿಯಾಗಿದ್ದು, ಬಹುಭಾಷಾ ನಟ ಕಿಶೋರ್ ಈ ಚಿತ್ರದಲ್ಲಿ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದಿನೇ ದಿನೇ ಕಾಂತಾರ ಸಿನಿಮಾದ ಹೈಲೆಟ್ಸ್ ಬಗ್ಗೆ ಚಿತ್ರತಂಡ ಒಂದೊಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಕಾಂತಾರ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುತ್ತಿದೆ.

ABOUT THE AUTHOR

...view details