ಮಂಗಳೂರು(ದಕ್ಷಿಣ ಕನ್ನಡ): ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪಂಜುರ್ಲಿ ದೈವಕ್ಕೆ ಡಿಸೆಂಬರ್ 8 ರಂದು ನಗರದ ಬಂದಲೆಯಲ್ಲಿ ನೇಮ ಸೇವೆಯನ್ನು ನೀಡಿದ್ದಾರೆ. ಇಲ್ಲಿ ದೈವನರ್ತಕರಾಗಿದ್ದ ಉಮೇಶ್ ಗಂಧಕಾಡು ಅವರು ಮಾತನಾಡಿ ನೇಮೋತ್ಸವದಲ್ಲಿ ಇತ್ತೀಚೆಗೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ತಂಡೊಂದಿಗೆ ಕಾಂತಾರ 2 ಸಿನಿಮಾಕ್ಕೆ ಅನುಮತಿ ಕೋರಿದ್ದರು. ದೈವ ಅನುಮತಿಯೂ ನೀಡಿದೆ ಎಂದು ತಿಳಿಸಿದ್ದಾರೆ.
ರಿಷಬ್ ಶೆಟ್ಟಿಯವರು ಕೆಲವು ದಿನಗಳ ಹಿಂದೆ ಅಣ್ಣಪ್ಪ ಪಂಜುರ್ಲಿ ಸೇವೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದಕ್ಕಾಗಿ ನಗರದ ಬಂದಲೆಯ ಮಡಿವಾಳಬೆಟ್ಟು ದೈವಸ್ಥಾನದಲ್ಲಿ ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿದ್ದೆ. ದೈವದ ನೇಮದ ವೇಳೆ ಹೇಳುವ ನುಡಿ ನರ್ತಕ ಹೇಳುವುದಲ್ಲ, ಬದಲಾಗಿ ದೈವವೇ ಹೇಳುವುದರಿಂದ ಅದು ದೈವ ನರ್ತಕರಾದ ನಮಗೆ ಗೊತ್ತಾಗುವುದಿಲ್ಲ ಎಂದರು.