ಸ್ಯಾಂಡಲ್ವುಡ್ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ 'ಕಾಂತಾರ' ಅಬ್ಬರ ಮುಂದುವರಿದಿದೆ. ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದರೂ ಕಾಂತಾರ ಕ್ರೇಜ್ ಕಡಿಮೆ ಆಗಿಲ್ಲ. ಪ್ರತಿ ಶೋಗಳು ಹೌಸ್ಫುಲ್. ಕಲೆಕ್ಷನ್ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಹಿಂದಕ್ಕೆ ತಳ್ಳಿ ಗೆಲುವಿನ ಓಟ ಮುಂದುವರಿಸಿದೆ.
ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಕಂಡು 15 ದಿನಗಳಲ್ಲಿ ಹಿಂದಿ, ಮಲೆಯಾಳಂ, ತೆಲುಗು, ತಮಿಳಿಗೆ ಡಬ್ ಆಗಿ ಪರಭಾಷೆ ಚಿತ್ರರಂಗದಲ್ಲೂ ಹೆಸರು ಮಾಡಿದ ಕಾಂತಾರ ಇದೀಗ ಮತ್ತೊಂದು ದಾಖಲೆ ಮಾಡಿದೆ. ಹೌದು, ಗಳಿಕೆ ವಿಚಾರದಲ್ಲಿ ಈಗಾಗಲೇ ಹತ್ತು ಹಲವು ರೆಕಾರ್ಡ್‌ಗಳನ್ನು ತನ್ನ ತೆಕ್ಕೆಗೆ ಪಡೆದಿರುವ ಕಾಂತಾರ, ಹಿಂದಿ ಭಾಷೆಯಲ್ಲಿಯೂ ಅಲ್ಲಿನ ಸಿನಿಮಾಗಳನ್ನೂ ಮೀರಿ ನಿಂತಿದೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ಚಿತ್ರಗಳಿಗೂ ಟಕ್ಕರ್ ಕೊಟ್ಟಿದೆ. ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಕಾರ್ತಿಕೇಯ 2 ರೆಕಾರ್ಡ್ ಅನ್ನು ಹಿಂದಕ್ಕೆ ತಳ್ಳಿದೆ ಕಾಂತಾರ.