ಭಾರತೀಯ ಚಿತ್ರರಂಗದಲ್ಲೀಗ ಕಾಂತಾರದ್ದೇ ಮಾತು. ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಿ ಬಳಿಕ ದೇಶಾದ್ಯಂತ ಕ್ರೇಜಿ ಹೆಚ್ಚಿಸುತ್ತಿದೆ.
ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಸಿನಿಮಾ ಕೇವಲ 15 ದಿನಗಳಲ್ಲಿ ಹಿಂದಿ, ತೆಲುಗು, ತಮಿಳಿಗೆ ಡಬ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಮಲಯಾಳಂ ಭಾಷೆಯಲ್ಲೂ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕಾಂತಾರವನ್ನು ಮಲಯಾಳಂನಲ್ಲಿ ಪ್ರಸ್ತುತಪಡಿಸಿದ್ದಾರೆ.