'ಕಾಂತಾರ' ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಸಿನಿಮಾ. ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಬಂದ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿ, ಈಗಲೂ ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾ ಆಗಿದೆ. ಕಾಂತಾರ ಪ್ರೀಕ್ವೆಲ್ ಅದ್ಧೂರಿಯಾಗಿ ನಿರ್ಮಾಣಗೊಳ್ಳಲಿದ್ದು, ಭರ್ಜರಿ ಸಿದ್ಧತೆ ನಡೆಯುತ್ತಿದೆ. 'ಕಾಂತಾರ ಒಂದು ದಂತಕಥೆ ಅಧ್ಯಾಯ-1'ರ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿರುವ ಚಿತ್ರತಂಡವೀಗ ಸಿನಿಪ್ರಿಯರಿಗೆ, ನಟ ನಟಿಯಾಗಬೇಕೆಂಬ ಕನಸು ಹೊತ್ತವರಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ.
ಹೊಂಬಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಪೋಸ್ಟ್:ಹೌದು, ಬಹುನಿರೀಕ್ಷಿತ ಪ್ರಾಜೆಕ್ಟ್ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಆ ಪೋಸ್ಟ್ ಪ್ರಕಾರ, ನೀವೂ ಕೂಡ ಕಾಂತಾರ ಪ್ರೀಕ್ವೆಲ್ನಲ್ಲಿ ನಟಿಸಬಹುದಾಗಿದೆ. ಪೋಸ್ಟ್ನಲ್ಲಿ, ''ಕಾಂತಾರ. ಕಲಾವಿದರು ಬೇಕಾಗಿದ್ದಾರೆ. ಪುರುಷರು: ವಯಸ್ಸು 30 ರಿಂದ 60. ಮಹಿಳೆಯರು: ವಯಸ್ಸು 18 ರಿಂದ 60. ನೋಂದಣಿಗಾಗಿ kantara.film ಅನ್ನು ಒತ್ತಿ. ಈ ಡಿಸೆಂಬರ್ 14ರವರೆಗೆ ಚಾಲ್ತಿಯಲ್ಲಿರುತ್ತದೆ''.
ದಯವಿಟ್ಟು ಗಮನಿಸಿ: ''ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸಲಾಗುವುದಿಲ್ಲ'' ಎಂದು ಬರೆಯಲಾಗಿದೆ. ಆನ್ಲೈನ್ ಆಡಿಶನ್ ಬಳಿಕ ವೈಯಕ್ತಿಕ ಆಡಿಷನ್ ನಡೆಯಲಿದೆ. ಶಾರ್ಟ್ಲಿಸ್ಟ್ಗೆ ಆಯ್ಕೆ ಆದ ಪ್ರತಿಭೆಗಳನ್ನು ವೈಯಕ್ತಿಕವಾಗಿ ಆಡಿಷನ್‌ಗೆ ಕರೆಯಲಾಗುವುದು ಎಂದು ನಿರ್ದೇಶಕ ಮತ್ತು ನಿರ್ಮಾಪಕರು ತಿಳಿಸಿದ್ದಾರೆ.