ಜೂನಿಯರ್ ಪವರ್ಸ್ಟಾರ್ ಯುವ ರಾಜ್ಕುಮಾರ್ ಚಂದನವನಕ್ಕೆ ಎಂಟ್ರಿ ಆಗಿದ್ದಾರೆ. ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಂತೆ ಪವರ್ಫುಲ್ ಲುಕ್ನಲ್ಲಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. 'ಯುವ' ಎಂಬ ಶೀರ್ಷಿಕೆ ಇಟ್ಟುಕೊಂಡಿರುವ ಸಿನಿಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ 'ಯುವ' ರಾಜ್ಕುಮಾರ್ ಅಭಿನಯಿಸುತ್ತಿದ್ದಾರೆ. ಅಪ್ಪು ಮಾಡಬೇಕಾಗಿದ್ದ ಚಿತ್ರದಲ್ಲಿ ಯುವ ನಟಿಸ್ತಿದ್ದಾರೆ ಅಂತಾ ಗೊತ್ತಾದ ಘಳಿಗೆಯಿಂದ ದೊಡ್ಮನೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.
ಈ ಯುವರಾಜನಿಗೆ ಯಾರು ರಾಣಿ ಯಾರು ಆಗ್ತಾರೆ ಅಂತಾ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಆಗಿತ್ತು. ಬಾನದಾರಿಯಲ್ಲಿ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಯುವ ಸಿನಿಮಾಗೆ ಹೀರೋಯಿನ್ ಅಂತಾ ಮಾತುಗಳು ಕೇಳಿ ಬಂದಿದ್ವು. ಆದರೆ, ರುಕ್ಮಿಣಿ "ನಾನು ಯುವ ರಾಜ್ ಕುಮಾರ್ ಜೊತೆ ನಟಿಸುತ್ತಿಲ್ಲ" ಎಂಬುದಾಗಿ ಸ್ಪಷ್ಟನೆ ನೀಡಿದ್ದರು. ಹಾಗಾದರೆ ಯುವರಾಜ್ ಕುಮಾರ್ ಜೋಡಿ ಯಾರಾಗ್ತಾರೆ? ಅಂತಾ ಗಾಂಧಿನಗರದ ಹೊಂಬಾಳೆ ಫಿಲ್ಮ್ ಸಂಸ್ಥೆಯಿಂದ ಹಿಡಿದು ದೊಡ್ಮನೆ ತನಕ ಚರ್ಚೆ ಆಗುತ್ತಿತ್ತು. ಈ ಪ್ರಶ್ನೆಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಧಿಕೃತವಾಗಿ ಉತ್ತರ ಕೊಟ್ಟಿದೆ.
ಹೌದು. ಹೊಂಬಾಳೆ ಫಿಲ್ಮ್ಸ್ ಅಧಿಕೃತ ಟ್ವಿಟರ್ ಪೇಜ್ನಲ್ಲಿ 'ಯುವ' ನಾಯಕಿ ಗೊಂದಲಕ್ಕೆ ತೆರೆ ಎಳೆದಿದೆ. ಮೂಗುತಿ ಸುಂದರಿ ಸಪ್ತಮಿ ಗೌಡ ಅವರ ಫೋಟೋವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, "ಯುವರಾಜನ ಅರಸಿಗೆ ಆದರದ ಸ್ವಾಗತ" ಎಂದು ಬರೆದು ಕೊಂಡಿದೆ. ಜೊತೆಗೆ 'ಯುವ' ಸಿನಿಮಾಗೆ ಸಪ್ತಮಿ ಗೌಡ ಪರ್ಫೆಕ್ಟ್ ನಾಯಕಿ ಎಂದು ಹೇಳಿದೆ. ಈ ಮೂಲಕ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿಯಾಗಿ ಫೈನಲ್ ಆಗಿದ್ದಾರೆ.