ಕರ್ನಾಟಕ

karnataka

ETV Bharat / entertainment

ಹೊಸ ಪ್ರತಿಭೆಗಳ ವಿಭಿನ್ನ ಕಥೆಯುಳ್ಳ 'ಆರ' ಚಿತ್ರದ ಟೀಸರ್​​ ರಿಲೀಸ್​ - etv bharat kannada

ಅಶ್ವಿನ್​ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ 'ಆರ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

aura
ಆರ

By

Published : Mar 26, 2023, 6:04 PM IST

ಚಂದನವನದಲ್ಲಿ ಹೊಸ ಪ್ರತಿಭೆಗಳ ಸಿನಿಮಾಗಳು ತೆರೆ ಮೇಲೆ ಅಬ್ಬರಿಸುತ್ತಿವೆ. ಆ ಸಾಲಿಗೆ ಅಶ್ವಿನ್​ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ 'ಆರ' ಚಿತ್ರ ಸೇರಿಕೊಳ್ಳಲಿದೆ. ದೈವ ಮತ್ತು ದುಷ್ಟ ಶಕ್ತಿಯ ಸಂಘರ್ಷದ ಕಥಾಹಂದರ ಒಳಗೊಂಡ ಥ್ರಿಲ್ಲರ್​ ಸಿನಿಮಾ ಇದಾಗಿದೆ. ಟೈಟಲ್​ ಮತ್ತು ಪೋಸ್ಟರ್​ ಮೂಲಕವೇ ಕುತೂಹಲ ಹುಟ್ಟುಹಾಕಿರುವ 'ಆರ' ಚಿತ್ರತಂಡ ಇದೀಗ ಟೀಸರ್​ ಬಿಡುಗಡೆ ಮಾಡಿದೆ.

ಚಿತ್ರಕಥೆ ಹೀಗಿದೆ.. 'ಆರ' ಎಂಬ ಹುಡುಗನ ಸುತ್ತ ಈ ಚಿತ್ರಕಥೆ ಸುತ್ತುತ್ತದೆ. ವಿಧಿಯ ಜತೆ ಸೇರಿ ಕಾಡಿನ ಸಂರಕ್ಷಣೆಗಾಗಿ ಹೋರಾಡುವ ಹುಡುಗನ ಕಥೆ ಇದರಲ್ಲಿದೆ. ಬಹುತೇಕ ಚಿತ್ರೀಕರಣ ಉಡುಪಿಯಲ್ಲಿ ಆಗಿದ್ದು, ಚಿತ್ರವು ಉಡುಪಿ ಕನ್ನಡ ಭಾಷೆಯಲ್ಲಿ ಇರಲಿದೆ. ದೈವ ಮತ್ತು ದುಷ್ಟ ಶಕ್ತಿಯ ನಡುವಿನ ಸಂಘರ್ಷದ ಕಥಾಹಂದರ ಹೊಂದಿರುವ ಸ್ಪಿರಿಚ್ಯುಯಲ್​ ಡ್ರಾಮಾ ಮತ್ತು ಥ್ರಿಲ್ಲರ್​​ ಜಾನರ್​ ಸಿನಿಮಾ ಇದಾಗಿದೆ. ದುಷ್ಟ ಶಕ್ತಿಗಳು ಹೆಣ್ಣು, ಹೊನ್ನು, ಮಣ್ಣು ರೂಪದಲ್ಲಿ ನೀಡುವ ಸವಾಲುಗಳನ್ನು ಎದುರಿಸಿ 'ಆರ' ತನ್ನ ತಾತನಿಂದ ಬಳುವಳಿಯಾಗಿ ಬಂದ ಕಾಡನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನಾ? ಎಂಬುದೇ ಈ ಚಿತ್ರದ ಎಳೆ.

ಹೊಸ ಪ್ರತಿಭೆಗಳ ಸಿನಿಮಾ: ಈ ಚಿತ್ರದಲ್ಲಿ ಸಂಪೂರ್ಣ ಹೊಸ ಕಲಾವಿದರೇ ಇದ್ದಾರೆ. ಕಳೆದ ಎಂಟು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಶ್ವಿನ್​ ವಿಜಯ್​ ಮೂರ್ತಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇವರು ನನಗಿಷ್ಟ ಸಿನಿಮಾದಲ್ಲೂ ನಟಿಸಿದ್ದಾರೆ. ಜೊತೆಗೆ ಕಿನ್ನರಿ, ಸೇವಂತಿ ಸೇವಂತಿ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. 'ಆರ' ಅಶ್ವಿನ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಾಗಿದೆ. ರೋಹಿತ್​ ಮತ್ತು ದೀಪಿಕಾ ಆರಾಧ್ಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:'ಗರ್ಭಪಾತವಾಗಿದ್ರೂ ಮರುದಿನವೇ ಕೆಲಸಕ್ಕೆ ಬನ್ನಿ ಅಂದಿದ್ರು': ಸ್ಮೃತಿ ಇರಾನಿ ಹೇಳಿದ ಕಹಿ ಘಟನೆ

ಚಿತ್ರಕಥೆ, ಸಂಭಾಷಣೆಯನ್ನು ನಟ ರೋಹಿತ್​ ಬರೆದಿದ್ದು, ಆನಂದ್​ ನೀನಾಸಂ, ಸತ್ಯ ರಾಜ್​, ನಿಖಿಲ್​, ಶ್ರೀಪಾದ್​, ಪ್ರತೀಕ್​, ಲೋಕೇಶ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಎಆರ' ಫಿಲಂಸ್​ ಬ್ಯಾನರ್​ ಅಡಿ ಸುಜಾತ ಚಡಗ ಮತ್ತು ಚಂದ್ರಶೇಖರ್​ ಸಿ ಜಂಬಿಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯುವ ಪ್ರತಿಭೆ ಶ್ರೀ ಹರಿ ಛಾಯಾಗ್ರಹಣ, ಗಿರೀಶ್​ ಹೊತ್ತೂರ್​ ಸಂಗೀತ ನಿರ್ದೇಶನ, ಮಾದೇಶ್​ ಸಂಕಲನ, ದೇವಿ ಪ್ರಕಾಶ್​ ಕಲಾ ನಿರ್ದೇಶನ 'ಆರ' ಚಿತ್ರಕ್ಕಿದೆ. ಜೂನ್​ನಲ್ಲಿ ಸಿನಿಮಾ ತೆರೆ ಕಾಣಲು ಚಿತ್ರತಂಡ ಯೋಜಿಸಿದೆ.

ಇದನ್ನೂ ಓದಿ:'ಹ್ಯಾಪಿ ಬರ್ತ್‌ಡೇ ಅಮ್ಮಲು': ಪತ್ನಿಗೆ ವಿಶೇಷವಾಗಿ ಶುಭ ಕೋರಿದ RRR ಸ್ಟಾರ್ ಜೂ.ಎನ್​ಟಿಆರ್​​

ಭಾರತೀಯ ಚಿತ್ರರಂಗದಲ್ಲಿ ಸೂಪರ್​ಹಿಟ್​ ಆಗಿರುವ ಕಾಂತಾರ ಚಿತ್ರದಂತೆಯೇ ದೈವವನ್ನು ವಿಶೇಷವಾಗಿ 'ಆರ' ದಲ್ಲೂ ತೋರಿಸಲಾಗಿದೆ. ಟೀಸರ್​​ನಲ್ಲಿ ಇದು ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಈ ಸಿನಿಮಾದಲ್ಲಿ ದೈವದ ಜೊತೆಗೆ ದುಷ್ಟ ಶಕ್ತಿಯೂ ಇರಲಿದೆ. ಹೀಗಾಗಿಯೇ ಸಿನಿಮಾ ಮತ್ತೊಂದು ಲೋಕಕ್ಕೆ ನಮ್ಮನ್ನು ಕರೆದೊಯ್ಯಲಿದೆ. ಹೊಸ ಪ್ರತಿಭೆಗಳಿಗೆ ವೇದಿಕೆಯಾಗುತ್ತಿರುವ ಸ್ಯಾಂಡಲ್​ವುಡ್​ ಅದ್ಭುತ ಚಿತ್ರವೊಂದನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ.

ಇದನ್ನೂ ಓದಿ:'ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್​' ಸೇವೆ: ಪ್ರಕಾಶ್‌ ರಾಜ್‌ಗೆ ಸಾಥ್ ಕೊಟ್ಟ ಯಶ್​

ABOUT THE AUTHOR

...view details