ಕರ್ನಾಟಕ

karnataka

ETV Bharat / entertainment

ಅಂಬುಜ ಮೂವಿ: ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದ 'ಅಂಬುಜ'.. ಜುಲೈ 21ಕ್ಕೆ ರಿಲೀಸ್​ - ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ

ಶುಭಾ ಪೂಂಜಾ ಹಾಗು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ನಟನೆಯ ಅಂಬುಜ ಸಿನಿಮಾ ಜುಲೈ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ambuja team
ಅಂಬುಜ ಚಿತ್ರ ತಂಡ

By

Published : Jul 10, 2023, 1:01 PM IST

Updated : Jul 10, 2023, 2:09 PM IST

ಸ್ಯಾಂಡಲ್​ವುಡ್​ನಲ್ಲಿ ಅದ್ಧೂರಿ ಮೇಕಿಂಗ್ ಚಿತ್ರಗಳ ಮಧ್ಯೆ ಮಹಿಳಾ ಪ್ರಧಾನ ಸಿನಿಮಾಗಳು ಸಿನಿ ಪ್ರೇಮಿಗಳನ್ನು ಎಂಟರ್​ಟೈನ್ ಮಾಡ್ತಾ ಇವೆ.‌ ಈ ಸಾಲಿಗೆ ಈಗ ಅಂಬುಜ ಸಿನಿಮಾ ಕೂಡ ಒಂದು. ನಟಿ ಶುಭಾ ಪೂಂಜಾ ಹಾಗು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿರೋ ಅಂಬುಜ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೈಜ ಘಟನೆ ಆಧಾರಿತ ಕುತೂಹಲ ಭರಿತ ಟ್ರೇಲರ್ ಹಾಗು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ನಿರ್ದೇಶಕ ಶ್ರೀನಿ ಹನುಮಂತರಾಜು ಮಾತನಾಡಿ, ನಾನು ಶುಭಾ ಪೂಂಜಾ ಈ ಮೊದಲು ಒಂದು ಸಿನಿಮಾ ಮಾಡಿದ್ದೆವು. ಆ ಚಿತ್ರ ಯಶಸ್ಸು ಖಂಡಿತ್ತು. ನಾನು ಗ್ಯಾರಂಟಿ ನೀಡುತ್ತೇನೆ. ಈ ಕಥೆ ನೀವೆಲ್ಲೂ ನೋಡಿರಲ್ಲ, ಕೇಳಿರಲ್ಲ, ಖಂಡಿತಾ ಚಿತ್ರ ನೋಡುವಾಗ ಬೆಚ್ಚಿ ಬೀಳುತ್ತೀರಾ. ನಾವೂ ಸುಮ್ಮನೇ ಹೇಳುತ್ತಿಲ್ಲ, ಭರವಸೆ ನೀಡುತ್ತಿದ್ದೇವೆ. ಚಿತ್ರ ನೋಡಿದ‌ ಮೇಲೆ‌ ನೀವೇ ಶಾಕ್ ಆಗುತ್ತೀರಾ ಎಂದು ಚಿತ್ರದ ಕುರಿತಾದ ಧನಾತ್ಮಕ ಮಾತುಗಳನ್ನಾಡಿದ್ದಾರೆ.

ಮುಂದುವರೆದು, ಶುಭಾ ಪೂಂಜಾ, ರಜಿನಿ ಆಯ್ಕೆಯಾಗಿದ್ದೇ ವಿಚಿತ್ರ. ಸಿನಿಮಾನ ಒಂದಷ್ಟು ಜನರಲ್ ಆಡಿಯನ್ಸ್​​ ನೋಡಿದ್ದು, ಅವರ ಕೈಕಾಲೇ ವೈಬ್ರೇಷನ್ ಆಗಿತ್ತು ಎಂದಿದ್ದಾರೆ.‌ ಮತ್ತು ಚಿತ್ರದ ಕಥಾಹಂದರ ನೋಡಿ ಒಂದಷ್ಟು ಚರ್ಚೆ‌ ಮಾಡಿದ್ದಾರೆ ಎಂದರು.

ಬಳಿಕ ಶುಭಾ ಪೂಂಜಾ ಮಾತನಾಡಿ, ನನ್ನ ಪಾತ್ರ ಒಂದು ಕ್ರೈಂ ರಿಪೋರ್ಟರ್ ಪಾತ್ರ. ತುಂಬಾ ಶೇಡ್ ಇದೆ. ನನಗೆ ತುಂಬಾ ಇಷ್ಟವಾದ ಪಾತ್ರ. ಸಿನಿಮಾನ ನಾನು ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಶ್ರೀನಿ ಜೊತೆಗೆ ಇದು ಎರಡನೇ ಸಿನಿಮಾ. ಕ್ರೈಮ್, ಹಾರರ್, ಸಸ್ಪೆನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶವನ್ನು ಸಿನಿಮಾದಲ್ಲಿ ಇದೆ. ಫ್ಯಾಮಿಲಿ ಕುಳಿತು ನೋಡುವಂತಹ ಸಿನಿಮಾ ಎಂದು ಹೇಳಿದರು.

ಶುಭಾ ಪೂಂಜಾ‌ ನಂತರ ಚಿತ್ರದ ಕುರಿತು ರಜಿನಿ ಮಾತನಾಡಿ, ಇದು ನನ್ನ ಮೊದಲನೇ ಚಿತ್ರ, ಮೊದಲನೇ ಚಿತ್ರದಲ್ಲಿ ಅದ್ಭುತವಾದ ಪಾತ್ರ ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಪಾತ್ರ ಎಲ್ಲರನ್ನೂ ಕಾಡುವಂತೆ ಮೂಡಿ ಬಂದಿದೆ. ನಾನು ಹೇಳೋದಕ್ಕಿಂತ ಜನ ನೋಡಿ, ಮೆಚ್ಚಿಕೊಂಡರೆ ಖುಷಿಯಾಗುತ್ತದೆ ಎಂದು ತಿಳಿಸಿದರು.

ಇನ್ನು ಚಿತ್ರದ ನಾಯಕನಾಗಿ ದೀಪಕ್ ಸುಬ್ರಮಣ್ಯ ಮಾತನಾಡಿ, ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ನನ್ನ ಪಾತ್ರಕ್ಕೆ ವಿಶೇಷ ಸ್ಕೋಪ್ ಇದೆ ಎಂದರು. ಇವರ ಜೊತೆ ಪದ್ಮಜಾರಾವ್, ಜಗದೀಶ್ ಹಲ್ಕುಡೆ, ಶರಣಯ್ಯ, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಸಂದೇಶ್ ಶೆಟ್ಟಿ, ನಿಶಾ ಹೆಗಡೆ, ಆಶಾರಾಣಿ, ಗುರುದೇವ ನಾಗಾರಾಜ, ಬೇಬಿ ಆಕಾಂಕ್ಷ, ಮೋಹನ್ ಮಾಸ್ಟರ್, ಕ್ಯಾಮರಾಮನ್ ಮುರಳೀಧರ್, ಎಡಿಟರ್ ವಿಜಯ್ ಎಂ. ಕುಮಾರ್, ಹಿನ್ನೆಲೆ ಸಂಗೀತ ನಿರ್ದೇಶಕ ತ್ಯಾಗರಾಜ್ ಎಂ. ಎಸ್, ಎಲ್ಲರೂ ಚಿತ್ರದ ಬಗ್ಗೆ ಉತ್ಸುಕರಾಗಿ ಮಾತನಾಡಿದರು.

ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಮಾತನಾಡಿ, ನಾನು ಕಥೆ ಬರೆದಾಗ ಇಷ್ಟೊಂದು ಚೆನ್ನಾಗಿ ಬರುತ್ತೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಶ್ರಮ ಹಾಕಿದ್ದಾರೆ. ರಜಿನಿ ಮೇಡಂಗೆ ಕಾಲು ನೋವಿದ್ದರೂ 25 ಕೆಜಿ ತೂಕದಷ್ಟು ಕಾಸ್ಟ್ಯೂಮ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಶುಭಾ ಮೇಡಂಗೆ ಎತ್ತರದ ಭಯ ಇದ್ದರು. 3 ಕಿಲೋ ಮೀಟರ್ ಬೆಟ್ಟವನ್ನು ಹತ್ತಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಈ ಸಿನಿಮಾಗಾಗಿ ಎಲ್ಲರೂ ಎಫರ್ಟ್ ಹಾಕಿದ್ದಾರೆ. ವಿಶೇಷವಾಗಿ ನಿರ್ದೇಶಕ ಶ್ರೀನಿ ಅವರು ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಅಂಬುಜ ಚಿತ್ರವನ್ನು ಎಲ್ಲರಿಗೂ ಇಷ್ಟವಾಗುವಂತೆ ಮಾಡಿದ್ದಾರೆ. ನಿಮಗೂ ಸಿನಿಮಾ ಖಂಡಿತ ಇಷ್ಟವಾಗುತ್ತೆ ಎಂದಿದ್ದಾರೆ.

ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡ ಅಂಬುಜ ಸಿನಿಮಾಗೆ ಕಾಶಿನಾಥ್ ಡಿ ಮಡಿವಾಳರ್ ಬಂಡವಾಳ ಹೂಡಿದ್ದಾರೆ. ಮೊದಲ ಬಾರಿಗೆ ನಿರ್ಮಾಣಕ್ಕಿಳಿದಿರುವ ಇವರು, ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಂಮತರಾಜು ಎರಡನೇ ಸಿನಿಮಾ ಇದಾಗಿದೆ. ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಮಾಡಿದ್ದು, ಲಾಲಿ ಹಾಡನ್ನು ನಿರ್ಮಾಪಕ ಕಾಶಿನಾಥ್ ಮಗಳು, ಆಕಾಂಕ್ಷ ಅದ್ಭುತವಾಗಿ ಹಾಡಿದ್ದಾರೆ. ಚಿತ್ರದ ಸಹ ನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆಯುತ್ತಿರುವ ಅಂಬುಜ ಜುಲೈ 21ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ:Bawaal trailer: ವರುಣ್ ಧವನ್- ಜಾಹ್ನವಿ ಕಪೂರ್ ನಟನೆಯ 'ಬವಾಲ್' ಟ್ರೇಲರ್​ ಔಟ್​

Last Updated : Jul 10, 2023, 2:09 PM IST

ABOUT THE AUTHOR

...view details