ಕರ್ನಾಟಕ

karnataka

ETV Bharat / entertainment

ಕನ್ನಡ ಸಿನಿಮಾಗಳು ರಿ ರಿಲೀಸ್: ಪಿವಿಆರ್, ಐನಾಕ್ಸ್ ಬಂಪರ್ ಆಫರ್! - PVR Inox offer

ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ PVR - Inox ಸಿನಿಮಾ ಮಂದಿರಗಳು ಕನ್ನಡದ ಸೂಪರ್​ ಹಿಟ್​ ಚಿತ್ರಗಳನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಿವೆ.

Kannada hit movies re release
ಕನ್ನಡ ಸಿನಿಮಾಗಳು ರೀ ರಿಲೀಸ್

By

Published : May 18, 2023, 7:23 AM IST

ದೇಶಾದ್ಯಂತ ಪಿವಿಆರ್, ಐನಾಕ್ಸ್ ಥಿಯೇಟರ್​​​ಗಳಿಗೆ ಹೆಚ್ಚಿನ ಸಂಖ್ಯೆಯ ಸಿನಿ‌ಪ್ರಿಯರು ಬರುತ್ತಿಲ್ಲ ಎಂಬ ಮಾತುಗಳಿವೆ. ಇದರ ಬೆನ್ನಲ್ಲೇ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ‌ಮಲ್ಟಿಪ್ಲೆಕ್ಸ್​​​ಗಳು ಭರ್ಜರಿ ಆಫರ್ ನೀಡಲು ತೀರ್ಮಾನಿಸಿವೆ.

'ಕನ್ನಡ ಸ್ಪೆಷಲ್': ಮಲ್ಟಿಪ್ಲೆಕ್ಸ್​​​ಗಳಲ್ಲಿ ಸಿನಿಮಾ ನೋಡುವುದು ಒಂದು ಅದ್ಭುತ ಅನುಭವ. ಆದರೆ ಪಿವಿಆರ್ ಐನಾಕ್ಸ್​​​ಗಳಂಥ ಸಿನಿಮಾ ಮಂದಿರಗಳು ಕೊಡುವ ಸೇವೆಗಿಂತಲೂ ಹೆಚ್ಚು ಶುಲ್ಕ ಪಡೆಯುತ್ತವೆ ಎಂಬುದು ಗ್ರಾಹಕರ ದೂರು. ಇದೀಗ ಪಿವಿಆರ್ ಹಾಗೂ ಐನಾಕ್ಸ್ ಜಂಟಿಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಂಪರ್ ಆಫರ್ ಕೊಟ್ಟಿವೆ. ಈ ಎರಡೂ ಸಿನಿಮಾ ಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ವೀಕ್ಷಿಸಿ ಸಂಭ್ರಮಿಸುವ ಸುವರ್ಣಾವಕಾಶ ನೀಡಲಾಗಿದೆ. ಇದಕ್ಕಾಗಿ 'ಕನ್ನಡ ಸ್ಪೆಷಲ್' ಎಂಬ ವಿಶೇಷ ಆಫರ್ ನೀಡಿದೆ. ಅಂದರೆ, ಕನ್ನಡ ಇಂಡಸ್ಟ್ರಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಇವುಗಳು ರೀ ರಿಲೀಸ್ ಮಾಡುತ್ತಿವೆ. ಅದೂ ಕಡಿಮೆ ಬೆಲೆಯಲ್ಲಿ. ಕೇವಲ 99 ರೂಪಾಯಿಯಿಂದ ಟಿಕೆಟ್‌ಗಳು ಸಿಗಲಿವೆ.

ಕನ್ನಡ ಸಿನಿಮಾಗಳು ರಿ ರಿಲೀಸ್

ರಿ ರಿಲೀಸ್ ಆಗಲಿರುವ ಚಿತ್ರಗಳು: ಪಿವಿಆರ್, ಐನಾಕ್ಸ್​ಗಳಲ್ಲಿ ಮತ್ತೊಮ್ಮೆ ರಿಲೀಸ್ ಆಗಲಿರುವ ಸೂಪರ್​ ಹಿಟ್​ ಚಿತ್ರಗಳು- ರಾಜಕುಮಾರ, ಕೆಜಿಎಫ್ 1, ಮಫ್ತಿ, ಮಾಸ್ಟರ್ ಪೀಸ್, ಗಂಧದಗುಡಿ, ಗರುಡ ಗಮನ ವೃಷಭ ವಾಹನ.

ದಿ.ಪವರ್ ಸ್ಟಾರ್‌ ಪುನೀತ್ ರಾಜ್​ಕುಮಾರ್ ನಟನೆಯ ಫ್ಯಾಮಿಲಿ ಎಂಟರ್ ಟೈನರ್ ಸೂಪರ್ ಹಿಟ್ ಸಿನಿಮಾ 'ರಾಜಕುಮಾರ' ಇದೇ ಶುಕ್ರವಾರದಂದು (ನಾಳೆ, 19/5/23) ರಿ ರಿಲೀಸ್ ಆಗ್ತಿದೆ. ಶನಿವಾರದಂದು ಯಜಮಾನ, ಭಾನುವಾರ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ - 1, ಸೋಮವಾರ ಶಿವಣ್ಣ ಶ್ರೀಮುರಳಿ ನಟನೆಯ ಮಫ್ತಿ, ಮಂಗಳವಾರ ಯಶ್ ನಟನೆಯ ಮಾಸ್ಟರ್ ಪೀಸ್, ಬುಧವಾರ ಅಪ್ಪು ಕನಸಿನ ಕೂಸು ಗಂಧದಗುಡಿ ಹಾಗೂ ಗುರುವಾರ ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಸಿನಿಮಾ ಬಿಡುಗಡೆ ಆಗಲಿವೆ.

ಕನ್ನಡ ಸಿನಿಮಾಗಳು ರಿ ರಿಲೀಸ್

ಇದನ್ನೂ ಓದಿ:ನ್ಯಾಚುರಲ್​ ಬ್ಯೂಟಿಗೆ ನಗುವೇ ಆಭರಣ.. ವೈಷ್ಣವಿ ಗೌಡ ಸೌಂದರ್ಯಕ್ಕೆ ಮನಸೋಲದವರಾರು

ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡದ ಸೂಪರ್​ ಹಿಟ್​ ಚಿತ್ರಗಳನ್ನು ವೀಕ್ಷಿಸಿ ಸಂಭ್ರಮಿಸುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಿದೆ. ಮೇ 19 ರಿಂದ 25ರವರೆಗೆ ಸ್ಯಾಂಡಲ್​ವುಡ್​ನ ಬ್ಲಾಕ್ ಬಸ್ಟರ್​ ಸಿನಿಮಾಗಳು ರಿ ರಿಲೀಸ್ ಆಗುತ್ತಿದೆ.‌ ಈ‌ ಮ‌ೂಲಕ ಸಿನಿ ಪ್ರಿಯರು ತಮ್ಮ ಮೆಚ್ಚಿನ ಸಿನಿಮಾವನ್ನು ಮಲ್ಟಿಪ್ಲೆಕ್ಸ್​​ನಲ್ಲಿ ಕಡಿಮೆ ದರದಲ್ಲಿ ನೋಡುವ ಅವಕಾಶ ಒದಗಿ ಬಂದಿದೆ. ಹೆಚ್ಚಿನ ಮಾಹಿತಿಗಾಗಿ www.pvrcinemas.com ಭೇಟಿ ನೀಡಿ ಹಾಗೂ ಬುಕ್ ಮೈ ಶೋ ನಲ್ಲಿ ಟಿಕೆಟ್ಸ್ ಲಭ್ಯವಿದೆ.

ಇದನ್ನೂ ಓದಿ:Cannes Film Festival: ಭಾರತವನ್ನು ಪ್ರತಿನಿಧಿಸಿದ ಸೆಲೆಬ್ರಿಟಿಗಳಿವರು, ಇವರ ಚೆಲುವಿಗೆ ಸಾಟಿ ಯಾರು!

PVR - Inox ಇತ್ತೀಚೆಗೆ 333 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ವರದಿಯಾಗಿತ್ತು. ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಚಲನಚಿತ್ರ ಪ್ರದರ್ಶನ ಕಂಪನಿಯು ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದೇಶದೆಲ್ಲೆಡೆ ಅವಲೋಕಿಸಿ, ಎಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇದೆಯೋ ಅಲ್ಲಿ PVR - Inox ಮುಚ್ಚುವ ನಿರ್ಧಾರ ಮತ್ತು ಉತ್ತಮ ಲಾಭವಿರುವ ಪ್ರದೇಶಗಳಲ್ಲಿ ಹೊಸ ಥಿಯೇಟರ್​ ಓಪನ್​ ಮಾಡುವ ನಿರ್ಧಾರಕ್ಕೆ ಬಂದಿದೆ. ಮುಂದಿನ ಆರು ತಿಂಗಳಲ್ಲಿ 50 ಸ್ಕ್ರೀನ್​ಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ABOUT THE AUTHOR

...view details