ಪ್ರಕೃತಿ ಸೌಂದರ್ಯವನ್ನು ಬಹಳ ಅದ್ಭುತವಾಗಿ ವೈಭವೀಕರಿಸಿರುವ ಗಂಧದ ಗುಡಿ ಟ್ರೈಲರ್ ಇಂದು ರಿಲೀಸ್ ಆಗಿದ್ದು, ಬಹಳ ಮೆಚ್ಚುಗೆ ವ್ಯಕ್ತವಾಗ್ತಿದೆ. ಕನ್ನಡ ಚಿತ್ರರಂಗದ ಕಲಾವಿದರು ಸಹ ದಿ. ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ ಟ್ರೈಲರ್ ಮೆಚ್ಚಿಕೊಂಡಿದ್ದಾರೆ.
ನಮ್ಮ ಕರ್ನಾಟಕವನ್ನು ಶುದ್ಧ ವಿಸ್ಮಯದಿಂದ ವೀಕ್ಷಿಸಲು ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಗಂಧದಗುಡಿ ಉನ್ನತ ದರ್ಜೆಯದ್ದಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ. ಗಂಧದಗುಡಿ ಟ್ರೈಲರ್ ಬಹಳ ಇಷ್ಟವಾಯಿತು ಎಂದು ಮೋಹಕ ತಾರೆ ರಮ್ಯಾ ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಪಡಿಸುತ್ತಿದ್ದೇವೆ ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ ಎಂದು ರಾಜರತ್ನನ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.