ದಕ್ಷಿಣ ಭಾರತದ ಸಿನಿಮಾ ಮೇಕರ್ಗಳ ಕಥಾವಸ್ತು, ಮೇಕಿಂಗ್ ಶೈಲಿ ಇಡೀ ಭಾರತೀಯ ಚಿತ್ರರಂಗವನ್ನು ಬೆರಗುಗೊಳುಸುತ್ತಿದೆ. ಬಾಲಿವುಡ್ ಚಿತ್ರರಂಗ ಸೌತ್ ಸಿನಿಮಾಗಳಿಂದ ಸ್ಫೂರ್ತಿಗೊಳ್ತಿದೆ. ಇಲ್ಲಿನ ಚಿತ್ರಗಳ ಡಬ್ಬಿಂಗ್, ರಿಮೇಕ್ ಮಾಡೋದಿಕ್ಕೆ ಮುಗಿಬಿದ್ದಿದೆ. ಇಂತಹ ಹೊತ್ತಲ್ಲೇ ಕನ್ನಡದ ಖ್ಯಾತ ನಿರ್ದೇಶಕ, ಲವ್ ಸ್ಟೋರಿಗಳ ಫಿಲಂ ಮೇಕರ್ ಹರಿಸಂತು ಬಾಲಿವುಡ್ನಲ್ಲಿ ಸಿನಿಮಾ ಮಾಡೋ ಅವಕಾಶ ಪಡೆದಿದ್ದಾರೆ.
ಲವ್ ಜಾನರ್ ಸಿನಿಮಾಗಳ ನಿಪುಣ ಹರಿಸಂತು ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಲವ್ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಪಪ್ಪಿ ಲವ್ ಅನ್ನೋ ಮುದ್ದಾದ ಟೈಟಲ್ ಕೂಡ ಇಟ್ಟಿದ್ದಾರೆ. ವೆಬ್ ಸೀರಿಸ್ಗಳಿಂದ ಖ್ಯಾತಿ ಗಳಿಸಿರುವ ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಪಬ್ಬಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.