ಕನ್ನಡ ಚಿತ್ರರಂಗದ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ 10 ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿವೆ. ನಾಳೆ ಧನಂಜಯ್ ಅಭಿನಯದ ಟ್ವೆಂಟಿ ಒನ್ ಅವರ್ಸ್, ಮನುರಂಜನ್ ರವಿಚಂದ್ರನ್ ನಟನೆಯ ಪ್ರಾರಂಭ, ಗರುಡ, ಸಕುಟುಂಬ ಸಮೇತ, ದಾರಿ ಯಾವುದಾಯ್ಯ ವೈಕುಂಠಕ್ಕೆ, ಕಟ್ಟಿಂಗ್ ಶಾಪ್, ಸಾರಾವಜ್ರ, ಆ್ಯಂಗರ್, ಕಂಡ್ಹಿಡಿ ನೋಡನ , ಪ್ರೀತ್ಸು ಹೀಗೆ ಬರೋಬ್ಬರಿ 10 ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ.
ಪ್ರಾರಂಭ ಮತ್ತು ಕಟ್ಟಿಂಗ್ ಶಾಪ್ ಸಿನಿಮಾಗಳು ನಾಳೆ ಬಿಡುಗಡೆ ಬಡವ ರಾಸ್ಕಲ್ ಬಳಿಕ ಧನಂಜಯ್ ಅಭಿನಯದ, ಕ್ಯಾಚೀ ಟೈಟಲ್ನ ಟ್ವೆಂಟಿ ಒನ್ ಅವರ್ಸ್ ಚಿತ್ರದಲ್ಲಿ, ಧನಂಜಯ್ ವಿಭಿನ್ನ ಪಾತ್ರ ಮಾಡಿದ್ದಾರಂತೆ. ಡಾಲಿ ಬಳಿಕ ಸ್ವಲ್ಪ ಮಟ್ಟಿಗೆ ಗಮನ ಸೆಳೆಯುತ್ತಿರೋ ಚಿತ್ರ ಪ್ರಾರಂಭ. ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ ಕೆರಿಯರ್ಗೆ ತುಂಬಾನೇ ಮುಖ್ಯವಾದ ಸಿನಿಮಾ ಆಗಿದೆ. ಶ್ರೀನಗರ ಕಿಟ್ಟಿ ಅಭಿನಯದ ಗರುಡ, ದಾರಿ ಯಾವುದಯ್ಯಾ ವೈಕುಂಠಕ್ಕೆ, ಕಟ್ಟಿಂಗ್ ಶಾಪ್, ಸಕುಟುಂಬ ಸಮೇತ ಚಿತ್ರಗಳು ಸ್ವಲ್ಪ ಮಟ್ಟಿಗೆ ಗಮನ ಸೆಳೆದಿವೆ.
ಸಕುಟುಂಬ ಸಮೇತ ನಾಳೆ ಬಿಡುಗಡೆ ಈ ಹಿಂದೆ ಶುಕ್ರವಾರ ಬಂತು ಅಂದ್ರೆ, ಗಾಂಧಿನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತಿತ್ತು. ಅಷ್ಟೇ ಯಾಕೆ ಸಿನಿಮಾ ನಿರ್ಮಾಪಕರು, ಕೆ.ಜಿ ರಸ್ತೆಯಲ್ಲಿರೋ ಚಿತ್ರಮಂದಿರಗಳಲ್ಲಿ ಯಾವ ಸಿನಿಮಾ ರಿಲೀಸ್ ಮಾಡಬೇಕು ಅಂತಾ ಪ್ಲಾನ್ ಮಾಡಿ, ಸಿನಿಮಾ ಬಿಡುಗಡೆ ಮಾಡುವುದರ ಜೊತೆಗೆ ಒಂದು ಮಟ್ಟದ ಕಲೆಕ್ಷನ್ ನೋಡುತ್ತಿದ್ದರು. ಆದರೆ ಇಂದು ನಿರ್ಮಾಪಕರು ಜಿದ್ದಿಗೆ ಬಿದ್ದವರಂತೆ, ಒಂದೇ ದಿನ 10 ಸಿನಿಮಾಗಳನ್ನ ಬಿಡುಗಡೆ ಮಾಡಿ ಸಿನಿಮಾ ಪ್ರೇಕ್ಷಕರನ್ನ ಗೊಂದಲ ಪಡಿಸುತ್ತಿದ್ದಾರೆ.
ಕಂಡ್ಹಿಡಿ ನೋಡನ ಸಿನಿಮಾ ನಾಳೆ ಬಿಡುಗಡೆ ಕೆಲ ಸಿನಿಮಾ ಪಂಡಿತರು ಹೇಳುವ ಪ್ರಕಾರ, ಈ ಹಿಂದೆ ವಾರದಲ್ಲಿ ಮೂರು ಅಥವಾ ನಾಲ್ಕು ಸಿನಿಮಾ, ಒಂದೇ ದಿನ ಬಿಡುಗಡೆ ಆಗುತ್ತಿದ್ದವು. ಆಗ ಸಿನಿಮಾ ನಿರ್ಮಾಪಕರು, ಸಿನಿಮಾ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ಒಳ್ಳೆ ಕಲೆಕ್ಷನ್ ನೋಡುತ್ತಿದ್ದರು. ಆದ್ರೆ ಇವತ್ತು ಶುಕ್ರವಾರ ರಿಲೀಸ್ ಆದ ಸಿನಿಮಾ ಮೂರು ದಿನ ಚಿತ್ರಮಂದಿರದಲ್ಲಿ ಉಳಿಯೋದು ಕಷ್ಟವಾಗಿದೆ ಅಂತಾರೆ. ಹೀಗೆ ಒಂದೇ ದಿನ 10 ಸಿನಿಮಾಗಳು ಬಿಡುಗಡೆ ಆದ್ರೆ, ನಿರ್ಮಾಪಕರು ತಮ್ಮ ಸಿನಿಮಾಗೆ ಹಾಕಿರುವ ಬಂಡವಾಳವನ್ನ, ಹೇಗೆ ರಿಟರ್ನ್ಸ್ ಪಡೆಯುತ್ತಾನೆ ಅನ್ನೋದು ತಿಳಿದಿಲ್ಲ.
ಇದನ್ನೂ ಓದಿ:ಕಿರುತೆರೆ ನಟಿ ಚೇತನಾಗೆ ಫ್ಯಾಟ್ ಸರ್ಜರಿ ನಡೆಸಿ ಸಾವಿಗೆ ಕಾರಣವಾಗಿದ್ದ ಆಸ್ಪತ್ರೆ ಬಂದ್!
ಇದರ ಜೊತೆಗೆ ದೊಡ್ಡ ಸಿನಿಮಾಗಳ ನಿರ್ಮಾಪಕರು ಹಾಗೂ ಸಣ್ಣ ಬಜೆಟ್ ಸಿನಿಮಾಗಳ ನಿರ್ಮಾಪಕರು ಕೂತು ಚರ್ಚೆ ಮಾಡಿಕೊಂಡು, ಈ ವಾರದಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆ ಮಾಡಿದ್ರೆ ನಿರ್ಮಾಪಕ ಸೇಫಾಗುತ್ತಾನೆ ಅನ್ನೋದನ್ನ ಚರ್ಚೆ ಮಾಡಬೇಕಿದೆ. ಹೀಗೆ ಒಂದು ವಾರಕ್ಕೆ ಹತ್ತು ಸಿನಿಮಾಗಳು ಬಿಡುಗಡೆ ಆದರೆ, ಸಿನಿಮಾ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳೋದು ಗ್ಯಾರಂಟಿ ಎನ್ನಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ, ಒಂದು ದಿನೇ ಆರು ಅಥವಾ ಏಳು ಸಿನಿಮಾಗಳು ಮಾತ್ರ ಬಿಡುಗಡೆ ಆಗಿದ್ವು. ಆದರೆ ಇದೀಗ ಆ ಅಂಕಿ ಅಂಶಗಳನ್ನ, ಸೈಡಿಗೆ ಸರಿಸಿ ಇದೇ ಮೊದಲ ಬಾರಿಗೆ 10 ಸಿನಿಮಾಗಳು ಬಿಡುಗಡೆ ಆಗುತ್ತಿರೋದು ದಾಖಲೆ ಎನ್ನಲಾಗುತ್ತಿದೆ.
ಗರುಡ, ದಾರಿ ಯಾವುದಾಯ್ಯ ವೈಕುಂಠಕ್ಕೆ ಸಿನಿಮಾಗಳು ನಾಳೆ ಬಿಡುಗಡೆ