ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ಜಿಯೋ ಸಿನಿಮಾಗೆ ಸಂದರ್ಶನ ನೀಡಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
''ಹಾಯ್ ನನ್ನ ಹೆಸರು ಪವಿ ಪೂವಪ್ಪ. ನಾನು ಮಾಡೆಲ್. ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿದ್ದೇನೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ಬಹಳ ಖುಷಿಯ ವಿಷಯ. ಎಕ್ಸೈಟ್ಮೆಂಟ್ ತುಂಬಾನೇ ಇದೆ. ಭಯ ಇಲ್ಲ. ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರೋದನ್ನು ಕೇಳಿ ಮನೆಯಲ್ಲಿ ಅಮ್ಮ ಅಣ್ಣನಿಗೆ ಬಹಳ ಖುಷಿಯಾಯ್ತು. ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್ನಲ್ಲಿ ನೋಡಿದ್ದಾರೆ. ಇಲ್ಲಿ ನನ್ನ ನಡೆ ನುಡಿಯನ್ನು ಕರ್ನಾಟಕದ ಜನರು ನೋಡಬಹುದು. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ'' - ಪವಿ ಪೂವಪ್ಪ.
''ನಾನು ಶಾರ್ಟ್ ಟೆಂಪರ್ಡ್. ಆದರೆ ಎಲ್ಲವೂ ಆಯಾ ಸಂದರ್ಭದ ಮೇಲೆ ಡಿಪೆಂಡ್. ಸುಮ್ಮನೇ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಕೋಪ ಬರಲ್ಲ. ಹೆಚ್ಚಾಗಿ ನಾನು ಖುಷಿ ಖುಷಿಯಾಗಿರುತ್ತೇನೆ. ಕೋಪ ಬಂದರೆ ಕಷ್ಟ ಅಷ್ಟೇ. ನಾನು ನನ್ನ ಮುದ್ದು ಶ್ವಾನಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವುಗಳೇ ನನ್ನ ಜಗತ್ತು. ನನ್ನ ಬಳಿ 12 ನಾಯಿಗಳಿವೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ಹೋದಾಗ ಹಳೇ ಸ್ಪರ್ಧಿಗಳು ಡಾಮಿನೇಟ್ ಮಾಡ್ತಾರೆ ಅಂತೆಲ್ಲ ಕೇಳದ್ದೇನೆ. ಆದರೆ ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೇ. ಅಲ್ಲಿ ಹೋದ ಮೇಲೆ ಯಾರು ಯಾವ ತರಹ ಬಿಹೇವ್ ಮಾಡ್ತಾರೆ ಅನ್ನೋದರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ'' - ಪವಿ ಪೂವಪ್ಪ.