ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್: ವೇದಿಕೆಯಲ್ಲೇ ಕಿಚ್ಚನ ಕಿಚ್ಚು - ಮುಖ್ಯದ್ವಾರ ತೆರೆದ ಸುದೀಪ್​; ಹೋಗೋರ‍್ಯಾರು? - Bigg Boss weekend episode

Kannada Bigg Boss: ಬಿಗ್​ ಬಾಸ್ ಪ್ರೋಮೋ ಅನಾವರಣಗೊಂಡಿದ್ದು, ವೇದಿಕೆಯಲ್ಲೇ ಕಿಚ್ಚ ಸುದೀಪ್​​ ಗರಂ ಆಗಿದ್ದಾರೆ.

Kannada Bigg Boss
ಕನ್ನಡ ಬಿಗ್​ ಬಾಸ್

By ETV Bharat Karnataka Team

Published : Oct 21, 2023, 4:45 PM IST

Updated : Oct 21, 2023, 5:03 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್' ಎರಡನೇ ವಾರಾಂತ್ಯ ತಲುಪಿದೆ. ವಾರದ ಕಥೆ ಕಿಚ್ಚನ ಜೊತೆ ಅಥವಾ ವೀಕೆಂಡ್​ ಎಪಿಸೋಡ್ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿರುತ್ತಾರೆ. ಇಂದು ರಾತ್ರಿ ವೀಕೆಂಡ್​ ಎಪಿಸೋಡ್ ಪ್ರಸಾರ ಆಗಲಿದ್ದು, ಮನೆಯಿಂದ ಒಬ್ಬರು ಹೊರ ನಡೆಯಲಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ: ಬಹುನಿರೀಕ್ಷಿತ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನ ಪ್ರೋಮೋ ರಿಲೀಸ್​ ಆಗಿದೆ. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿಯೂ ಕಲರ್ಸ್ ಕನ್ನಡ ವಾಹಿನಿ ಇಂದಿನ ಪ್ರೋಮೋ ಶೇರ್ ಮಾಡಿದ್ದು, ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ''ಗರಂ ಆದ್ರು ಕಿಚ್ಚ (ಫೈಯರ್ ಎಮೋಜಿಯೊಂದಿಗೆ), ಓಪನ್ ಆಯ್ತು ಮುಖ್ಯದ್ವಾರ! ವಾರದ ಕಥೆ ಕಿಚ್ಚನ ಜೊತೆ'' ಎಂಬ ಶೀರ್ಷಿಕೆ ಕೊಟ್ಟು ಶೇರ್ ಮಾಡಿರುವ ಪ್ರೋಮೋದಲ್ಲಿ, ನಿರೂಪಕ - ನಟ ಅಭಿನಯ ಚಕ್ರವರ್ತಿ ಸುದೀಪ್​ ಅಸಮಾಧಾನಗೊಂಡಿರುವುದನ್ನು ಕಾಣಬಹುದು.

ಬಿಗ್​ ಬಾಸ್ ಪ್ರೋಮೋ:ಪ್ರೋಮೋದಲ್ಲಿ, ಸುದೀಪ್ ಸಖತ್​ ಸ್ಟೈಲಿಶ್​ ಆಗಿ​ ವೇದಿಕೆಗೆ ಎಂಟ್ರಿ ಕೊಡುತ್ತಾರೆ. ಮನೆಯ ಸ್ಪರ್ಧಿಗಳೊಂದಿಗೆ ಮಾತು ಆರಂಭಿಸುತ್ತಾರೆ. ವಿನಯ್​ ಹಾಗೂ ಕಾರ್ತಿಕ್ ಅವರನ್ನು ಬಿಟ್ಟು ಉಳಿದವರು ಸೋಫಾ ಹಿಂದೆ ಹೋಗಿ ನಿಲ್ಲಿ ಎಂದ ಸುದೀಪ್, ಕಂಟೆಸ್ಟೆಂಟ್ ಬಳಿ ಪ್ರಶ್ನೆಗಳನ್ನು ಕೇಳುತ್ತಾರೆ. ಎರಡು ಟೀಮ್​ ಲೀಡರ್​​ ಚೂಸ್ ಮಾಡಿ ಅಂತಾರೆ, ಆಯ್ಕೆಗೆ ಯಾರೂ ಕೂಡ 20 ಸೆಕೆಂಡ್ಸ್ ಕೂಡ ತೆಗೆದುಕೊಳ್ಳಲಿಲ್ಲ. ನಾನ್ಯಾಕೆ ಕ್ಯಾಪ್ಟನ್​ ಆಗಬಾರದು ಎಂದು ಯಾರಿಗೂ ಬರ್ಲಿಲ್ವಾ? ಎಂಬ ಸುದೀಪ್ ಪ್ರಶ್ನೆಗೆ ಸ್ಪರ್ಧಿಗಳು ನಾನಾ ಕಾರಣಗಳನ್ನು ಕೊಡುತ್ತಾರೆ.

ಗೇಟ್​ ಓಪನ್​ ಪ್ಲೀಸ್....ಈ ರೀತಿಯ ಭಯ ಇರುವವರು ಮನೆ ಒಳಗಡೆ ಯಾಕಿದ್ದೀರಾ? ಎಂದು ಸುದೀಪ್​ ಮರು ಪ್ರಶ್ನಿಸುತ್ತಾರೆ. 'ನಾನು ನೋಡಿದ್ದು ನನಗೆ ಇಷ್ಟ ಆಗಿಲ್ಲ'​​ ಎಂದು ಕಿಚ್ಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಇರ್ತೀರಾ ಅಂದ್ರೆ ನಾನು ಈ ಕೂಡಲೇ ಬಾಗಿಲು ತೆರೆಯುತ್ತೇನೆ. ಖಂಡಿತ ಇರಬೇಡಿ. ಗೇಟ್​ ಓಪನ್​ ಪ್ಲೀಸ್​ ಎಂದು ಸುದೀಪ್​ ಹೇಳಿದ ಕೂಡಲೇ ಬಿಗ್​ ಬಾಸ್ ಮನೆಯ ಮುಖ್ಯದ್ವಾರ ತೆರೆದಿದೆ. ಈ ಪ್ರೋಮೋ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಏನಾಗಬಹುದೆಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಎಸ್.​ಎಲ್​​ ಭೈರಪ್ಪ ಅವರ 'ಪರ್ವ' ತೆರೆಮೇಲೆ: ಸಿನಿಮಾ ಘೋಷಿಸಿದ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ಇಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿರುವ ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಸಾಕಷ್ಟು ಕುತೂಹಲಭರಿತರಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ತಮ್ಮ ಮೆಚ್ಚಿನ ಸ್ಪರ್ಧಿಗಳ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಸ್ಪರ್ಧಿಗಳ ವೀಕ್ನೆಸ್ - ಸ್ಟ್ರೆಂತ್ ಬಗ್ಗೆ ಆನ್​​ಲೈನ್​ನಲ್ಲಿ ಚರ್ಚೆ ಆಗುತ್ತಿದೆ. ಪ್ರೋಮೋ ವಿಡಿಯೋ ವೈರಲ್​ ಆಗುತ್ತಿದೆ. ಇನ್ನೂ 'ರೋಚಕ ವಾರದ ಸಾರಾಂಶ ಹೇಗಿರಬಹುದು?' ಎಂಬ ಶೀರ್ಷಿಕೆಯಡಿ ಒಂದು ವಿಡಿಯೋವನ್ನೂ ವಾಹಿನಿ ಹಂಚಿಕೊಂಡಿದ್ದು, ಪ್ರೇಕ್ಷಕರು ಕುತೂಹಲರಾಗಿದ್ದಾರೆ.

ಇದನ್ನೂ ಓದಿ:ಟೈಗರ್ 3: ಕತ್ರಿನಾ ಕೈಫ್ ಸ್ಟೈಲಿಶ್ ಫೋಟೋ ಹಂಚಿಕೊಂಡ ಸಲ್ಮಾನ್​ ಖಾನ್

ಕಿಚ್ಚನ ಲುಕ್​ ಶೀರ್ಷಿಕೆಯಡಿ ಅಭಿನಯ ಚಕ್ರವರ್ತಿ ಸುದೀಪ್​ ಅವರ ಒಂದು ನೋಟವನ್ನು ಹಂಚಿಕೊಳ್ಳಲಾಗಿದೆ. 'ಬ್ಲೂ ಔಟ್ ಫಿಟ್ಟಲ್ಲಿ ಕೂಲ್ ಕಿಚ್ಚ... ಬಿರುಗಾಳಿ ಬೀಸೋ ಮುಂಚಿನ ನಗೂನಾ ಇದು?' ಎಂಬ ಕ್ಯಾಪ್ಷನ್​ ಕೊಡಲಾಗಿದೆ. ಇಂದಿನ ಸಂಚಿಕೆಯಲ್ಲಿ ಕಿಚ್ಚ ಗರಂ ಆಗಲಿದ್ದಾರೆಂಬುದು ಈಗಾಗಲೇ ಅನಾವರಣಗೊಂಡಿರುವ ಪ್ರೋಮೋದಲ್ಲಿ ಗೊತ್ತಾಗಿದೆ. ಸುದೀಪ್​ ಸ್ಟೈಲಿಶ್​ ಫೋಟೋಗೆ ಕೊಟ್ಟ ಈ ಕ್ಯಾಪ್ಷನ್​ ಕೂಡ ಅಭಿಮಾನಿಗಳ ಗಮನ ಸೆಳೆದಿದೆ.

Last Updated : Oct 21, 2023, 5:03 PM IST

ABOUT THE AUTHOR

...view details