ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್​​: ಡ್ರೋಣ್‌ ಪ್ರತಾಪ್‌ಗೆ ಕಳಪೆ ಪಟ್ಟ, ಸಿಕ್ತು ಜೈಲು ಶಿಕ್ಷೆ - Kannada Bigg Boss

BBK10: ಬಿಗ್​ ಬಾಸ್ ಲೇಟೆಸ್ಟ್‌​ ಪ್ರೋಮೋ ಅನಾವರಣಗೊಂಡಿದ್ದು, ಡ್ರೋಣ್‌ ಪ್ರತಾಪ್‌ಗೆ ಕಳಪೆ ಪಟ್ಟ ಸಿಕ್ಕಿದೆ.

Prathap
ಪ್ರತಾಪ್‌

By ETV Bharat Karnataka Team

Published : Dec 1, 2023, 12:57 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 10' ಕುತೂಹಲಕಾರಿ ಸನ್ನಿವೇಶಗಳೊಂದಿಗೆ ಮುಂದುವರಿಯುತ್ತಿದೆ. ಈ ವಾರದ ಎಲ್ಲಾ ಟಾಸ್ಕ್‌ಗಳಲ್ಲಿಯೂ 'ಮಣ್ಣಿನ ಮಕ್ಕಳು' ತಂಡ ಸೋತಿದೆ. ಈ ತಂಡದ ನಾಯಕತ್ವ ವಹಿಸಿದ್ದ ಡ್ರೋಣ್ ಪ್ರತಾಪ್‌ ಜೈಲುಪಾಲಾಗಿದ್ದಾರೆ. ಕಳಪೆ ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಅವರ ದೃಶ್ಯವನ್ನು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ನೋಡಬಹುದು.

ಬಿಗ್​ ಬಾಸ್​ ಪ್ರೋಮೋ​: ''ಈ ವಾರದ ಕಳಪೆ ಪ್ರತಾಪ್!'' ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್​​ ಮೀಡಿಯಾಗಳಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ವಾರದ ಕೊನೆಗೆ ಕಳಪೆ ಯಾರು? ಉತ್ತಮ ಯಾರು? ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಅವರ ಹೆಸರನ್ನೇ ಸೂಚಿಸಿದ್ದಾರೆ.

ಮನೆ ಮಂದಿ ಕೊಟ್ಟ ಕಾರಣಗಳಿವು..:ಪ್ರತಾಪ್ ಹೆಸರು ಸೂಚಿಸಿರುವ ಮನೆಯ ಸದಸ್ಯರು ತಮ್ಮ ಕಾರಣಗಳನ್ನೂ ಎದುರಿಟ್ಟಿದ್ದಾರೆ. "ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು" ಎಂದು ನಮ್ರತಾ ಕಾರಣ ಕೊಟ್ಟರೆ, "ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲಾ ಟಾಸ್ಕ್‌ಗಳಲ್ಲಿಯೂ ಸೋಲುವಂತಾಯ್ತು" ಎಂದು ವಿನಯ್ ಹೇಳಿದರು. "ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರವೂ ಅಗ್ರೆಶನ್‌ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ" ಎಂದು ತನಿಷಾ ತಿಳಿಸಿದರು. ವರ್ತೂರು ಸಂತೋಷ್​​ ಮತ್ತು ಸ್ನೇಹಿತ್‌ ಸಹ ಪ್ರತಾಪ್ ಹೆಸರನ್ನೇ ಹೇಳಿದರು.

ಡ್ರೋಣ್‌ ಪ್ರತಾಪ್​ ಅಸಮಾಧಾನ:ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯನ್ನೇನೋ ತೊಟ್ಟಿದ್ದಾರೆ. ಆದರೆ, ನಿರ್ಧಾರ ನನಗೆ ಸಮ್ಮತ ಎನಿಸಿಲ್ಲ ಎಂದು ಪ್ರತಾಪ್​​ ಗಟ್ಟಿಯಾಗಿ ಹೇಳಿದ್ದಾರೆ. "ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇದ್ದವು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನ್ನ ಸಮ್ಮತಿ ಇಲ್ಲ" ಎಂದರು.

ಇದನ್ನೂ ಓದಿ:ಅನಿಮಲ್ ಬಿಡುಗಡೆ: ಪ್ರೇಕ್ಷಕರ ಮನ ಗೆದ್ದ ರಣಬೀರ್​ ಕಪೂರ್​; ನೆಟ್ಟಿಗರು ಹೇಳಿದ್ದೇನು?

ಹಾಗಾದರೆ ಈ ವಾರ ಉತ್ತಮ ಪಟ್ಟ ಯಾರಿಗೆ?, ಕ್ಯಾಪ್ಟನ್ಸಿ ಓಟದಲ್ಲಿ ಯಾರು ಗೆದ್ದಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲು ಜಿಯೋಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರ ಜಿಯೋಸಿನಿಮಾದಲ್ಲಿ ಉಚಿತವಾಗಿ ಲಭ್ಯವಿದ್ದು, ಹೆಚ್ಚಿನ ವೀಕ್ಷಣೆ ಪಡೆಯುತ್ತಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ:ಅಪ್ಪನ ಕಥೆಗೆ ಮಗನ ನಿರ್ದೇಶನ: ಇಂದು 'ರಾಪಟ' ತುಳು ಸಿನಿಮಾ ಬಿಡುಗಡೆ

ABOUT THE AUTHOR

...view details