ಕಥೆ, ಕವಿತೆ, ಬರಹ ಹುಟ್ಟಲು ನಿರ್ದಿಷ್ಟ ಸ್ಥಳ ಅಥವಾ ಐಷಾರಾಮಿ ಜಾಗವೇ ಬೇಕಿಲ್ಲ. ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಇದ್ದರೆ ಸಾಕು ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಸತ್ಯವೆಂದು ಗೊತ್ತಿಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ. ಏನಿದು ಕವಿಸಮಯ?. ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡದ 'ಅನ್‌ಸೀನ್ ಕಥೆಗಳು' ಸೆಗ್ಮೆಂಟ್‌ನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.
ಬಿಗ್ ಬಾಸ್ ಸ್ಪರ್ಧಿಗಳ ಪೈಕಿ ರ‍್ಯಾಪ್ ಸಾಹಿತ್ಯ ಬರೆಯುವ ಕೌಶಲ್ಯ ಇರುವುದು ಇಶಾನಿ ಅವರಿಗೆ. ರ‍್ಯಾಪ್ ಹಾಡುಗಳನ್ನು ಕಟ್ಟಿ, ಹಾಡುತ್ತಲೇ ಮುನ್ನಲೆಗೆ ಬಂದಿರುವ ಇಶಾನಿ ಅವರು ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಜೋರು ದನಿ ಮತ್ತು ನಗುವಿನಿಂದಲೇ ಹೊರತು ರ‍್ಯಾಪ್ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ‍್ಯಾಪ್ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್‌ಗೇನೇ ಮುಗಿದುಹೋಯಿತು. ಆದರೆ ಇಶಾನಿ ತಮ್ಮ ಪ್ರಯತ್ನವನ್ನು ಅಷ್ಟಕ್ಕೇ ನಿಲ್ಲಿಸಿಲ್ಲ.
ಮತ್ತೆ ಮತ್ತೆ ಕನ್ನಡದಲ್ಲಿ ರ‍್ಯಾಪ್ ಸಾಂಗ್ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ. ಹೌದು, ಟಿಶ್ಯೂ ಪೇಪರ್ ಮೇಲೆ ಇಂಗ್ಲಿಷ್ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತಾ ರ‍್ಯಾಪ್ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲುಗಳೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ.
ಇಶಾನಿ ರ‍್ಯಾಪ್ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?
ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?
ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ
ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ
ತಿಳ್ಕೊಳ್ರೋ ಇನ್ನು ನೀವಲ್ಲ
ಇನ್ಮುಂದೆ ನಿಮ್ದು ಏನು ನಡೆಯಲ್ಲ
ಈ ರಾಜ್ಯಕ್ಕೆ ರಾಣಿನೇ ನಾನಲ್ವಾ
ತಲೆಬಗ್ಸೀನೇ ನಡೀಬೇಕು ಈಗೆಲ್ಲ
ಸುಮ್ನಿದ್ರೆ ಮಾಡ್ತೀರಾ ಸೈಕು