ನಿನ್ನೆ ಬಿಗ್ ಬಾಸ್ ಮನೆ ಮಂದಿಗೆ ಗಂಧರ್ವರು ಮತ್ತು ರಾಕ್ಷಸರ ಟಾಕ್ಸ್ ನೀಡಿತ್ತು. ಆಟ ಮುಂದುವರಿದಿದ್ದು, ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಸೇರಿ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ, ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ ಸಂತೋಷ್, ಮೈಕಲ್, ಪವಿ ಸೇರಿ ಯಾರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.
ಬಿಗ್ ಬಾಸ್ ಪ್ರೋಮೋ: ಈ ಆಟದ ಮುಂದುವರಿದ ಭಾಗ ಇಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ಗಂಧರ್ವರು ರಾಕ್ಷಸರಾಗೋದು ಸುಲಭ; ಆದ್ರೆ ರಾಕ್ಷಸರು ಗಂಧರ್ವರಂತೆ ಆಗಬಹುದಾ?' ಮತ್ತು 'ಗಂಧರ್ವರನ್ನು ಸೋಲಿಸಿ ಮೇಲಗೈ ಸಾಧಿಸುತ್ತಾ ರಾಕ್ಷಸರ ಪಡೆ?' ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋಗಳನ್ನು ಅನಾವರಣಗೊಳಿಸಿದೆ.
ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರನ್ನು ಹೇಗಾದರೂ ಕುರ್ಚಿಯಿಂದ ಮೇಲೆಳುವಂತೆ ಮಾಡುವ ಸವಾಲನ್ನು ರಕ್ಕಸರ ಗುಂಪಿಗೆ ನೀಡಲಾಗಿತ್ತು. ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಎರೆಚಲಾರಂಭಿಸಿದರು. ಈ ಹಂತದಲ್ಲಿ ತುಕಾಲಿ ಕುರ್ಚಿಯಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು. ಆದರೆ ಎದ್ದಿಲ್ಲ, ಕೇವಲ ಸರಿದಿದ್ದಾರೆ ಎಂಬುದು ಗಂಧರ್ವರ ಗುಂಪಿನ ನಮ್ರತಾರ ವಾದ. ನಮ್ರತಾ ಅವರ ವಾದಕ್ಕೆ ಅನುಗುಣವಾಗಿಯೇ ಉಸ್ತುವಾರಿ ಸ್ನೇಹಿತ್ ತಮ್ಮ ನಿರ್ಧಾರವನ್ನು ತಿಳಿಸಿದಾಗ ರಕ್ಕಸರ ಗುಂಪಿನ ಸದಸ್ಯರು ಅಕ್ಷರಶಃ ರಕ್ಕಸರಾಗಿ ಬದಲಾಗಿದ್ದಾರೆ. ತನಿಷಾ ಅವರು, 'ನಮ್ರತಾ ಹೇಳಿದ ಮೇಲೆ ಉಸ್ತುವಾರಿಯ ನಿರ್ಧಾರ ಬದಲಾಗುತ್ತದೆ' ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಮ್ರತಾ, 'ಹೌದು, ಯಾಕಂದ್ರೆ ನಮ್ರತಾ ಇಂಪಾರ್ಟೆಂಟ್ ಇದ್ದಾಳೆ' ಎಂದು ಹೇಳಿ ಮತ್ತಷ್ಟು ಕೆಣಕಿದ್ದಾರೆ. ತನಿಷಾ ಮತ್ತು ನಮ್ರತಾ ನಡುವಿನ ಜಗಳ ಜಟಾಪಟಿಯ ಹಂತಕ್ಕೂ ಹೋಗಿದೆ.