ಸಿನಿಮಾ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಕನ್ನಡದ ಹೆಸರಾಂತ ಚಿತ್ರನಟಿ ಕಂ ರಾಜಕಾರಣಿ ರಮ್ಯಾ ಸ್ಪಂದನ ಅವರು ತಮ್ಮ ಹಳೆಯದ್ದೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಅವರು 18 ನೇ ವಯಸ್ಸಿನಲ್ಲಿದ್ದಾಗ ತೆಗೆದಿರುವ ಫೋಟೋ.
ಇಲ್ಲಿ ನೀವು ನೋಡುತ್ತಿರುವ ಈ ಫೋಟೋ ಅವರ ಕಾಲೇಜು ದಿನಗಳದ್ದಾಗಿದೆ. '18ನೇ ವಯಸ್ಸಿನಲ್ಲಿ ನಾನು..' ಎಂಬ ಅಡಿ ಬರಹದೊಂದಿಗೆ ರಮ್ಯಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
21ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿರಿಸಿರುವ ಇವರು 'ಅಭಿ' ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದಾದ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮೋಹಕ ತಾರೆ ಮತ್ತೆ ಚಿತ್ರರಂಗಕ್ಕೆ ಬರ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಕನ್ನಡ ಚಿತ್ರರಂಗದ ಯುವನಟರಿಂದ ಹಿಡಿದು, ಸ್ಟಾರ್ ನಟರ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಚಿತ್ರರಂಗದ ಪರವಾಗಿ ಇವರು ಕೆಲಸ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟ ಧನಂಜಯ ಅವರ ಹೊಯ್ಸಳ ಚಿತ್ರದ ಸೆಟ್ಗೆ ಭೇಟಿ ನೀಡಿದ್ದರು. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನೆಮಾ ನೋಡಿ ಭಾವುಕರಾಗಿದ್ದರು. 'ವಿಕ್ರಾಂತ್ ರೋಣ' ಸಿನಿಮಾಕ್ಕೂ ಶುಭಾಶಯ ತಿಳಿಸಿದ್ದರು.
ಇದನ್ನೂ ಓದಿ :'ಮ್ಯಾನ್ಷನ್ ಹೌಸ್ ಮುತ್ತು' ಮೂಲಕ ನಾಯಕ ನಟನಾಗಲಿದ್ದಾರೆ ಗಾಯಕ ನವೀನ್ ಸಜ್ಜು