ಕರ್ನಾಟಕ

karnataka

ETV Bharat / entertainment

ಸದ್ದಿಲ್ಲದೇ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದ ಲೀಲಾವತಿ: ಕಲಾವಿದರಿಗೆ ತಪ್ಪದೇ ಮಾಸಾಶನ ನೀಡುತ್ತಿದ್ದ ನಟಿ - ನಟಿ ಲೀಲಾವತಿ ಆಸ್ಪತ್ರೆ ನಿರ್ಮಾಣ

ಬಣ್ಣ ಹಚ್ಚಿದರೆ ಜೀವನ ಎನ್ನುವಂತಹ 150 ಕ್ಕೂ ಹೆಚ್ಚು ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನವನ್ನು ಲೀಲಾವತಿ ತಪ್ಪದೇ ನೀಡುತ್ತಿದ್ದಾರೆ ಎಂದು ಪುತ್ರ ವಿನೋದ್​ ರಾಜ್ ಹೇಳಿದ್ದರು.

Kannada Actress Leelavati done so much social service for others
Kannada Actress Leelavati done so much social service for others

By ETV Bharat Karnataka Team

Published : Dec 9, 2023, 12:46 PM IST

ಬೆಂಗಳೂರು: ನಟಿ ಲೀಲಾವತಿಯ ಅವರಲ್ಲಿ ಸಾಮಾನ್ಯರೊಳಗೆ ಒಂದಾಗುವ, ಬೇರೆಯವರ ಕಷ್ಟಕ್ಕೆ ಮಿಡಿಯುವ ಮಾತೃಗುಣ ಇತ್ತು. ಇದೆ ಕಾರಣದಿಂದ ಅವರು ಸದ್ದಿಲ್ಲದೇ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೇರೆಯವರ ಕಷ್ಟಕ್ಕ ಮುಂದಾಗುತ್ತಿದ್ದ ಅವರು ತಮ್ಮದೇ ಖರ್ಚಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಿದ್ದರು.

ಲೀಲಾವತಿ ಕೇವಲ ನಟಿಯಲ್ಲ ಅವರೊಬ್ಬ ಹೋರಾಟಗಾರ್ತಿ. ತಮ್ಮ ಬದುಕನ್ನು ತಾವೇ ಕಟ್ಟಿಕೊಂಡು ಹಲವರಿಗೆ ಸ್ಪೂರ್ತಿಯಾದವರು. ಕಷ್ಟದಲ್ಲಿಯೇ ಬೆಳೆದ ಅವರಿಗೆ ಕೈ ಹಿಡಿದು ಬದುಕು ರೂಪಿಸಿಕೊಟ್ಟಿದ್ದು ನಟನೆ. ತಮ್ಮ ಮನೋಜ್ಞ ಅಭಿನಯದ ಮೂಲಕ ಹೆಸರು ಮಾಡಿದ ನಟಿಗೆ ಇದಕ್ಕಿಂತ ಹೆಚ್ಚು ಕೊಟ್ಟಿದ್ದು, ಸಮಾಜ ಮುಖಿ ಕೆಲಸ ಮತ್ತು ಕೃಷಿ ಎನ್ನುತ್ತಾರೆ

ಸೋಲದೇನವಹಳ್ಳಿಯಲ್ಲಿ 6 ಬೆಡ್​​ಗಳ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿ, ಸುತ್ತಲಿನ ಜನರಿಗೆ ನೆರವಾದರು. ಈ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರು. ಕೊನೆಗೆ ತಾವೇ ವೈದ್ಯರಿಗೆ ವೇತನವನ್ನು ನೀಡಿದರು. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಪ್ರಾಣಿಗಳ ರಕ್ಷಣೆಗೆ ಪಶು ಆಸ್ಪತ್ರೆಗೆ ನಿರ್ಮಾಣ ಮಾಡಿದರು. ಇಳಿ ವಯಸ್ಸಿನಲ್ಲೂ ತಮ್ಮ ಸಂಪಾದನೆ ಮತ್ತು ಜಮೀನು ಮಾರಿದ ಹಣದಿಂದ ಅವರು ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಾ ಬಡ ಜನರ ಅಭಿವೃದ್ಧಿಗೆ ಮುಂದಾದರು. ಗ್ರಾಮೀಣ ಪ್ರದೇಶದ ಜನರ ಬದುಕು ಹಸನು ಮಾಡಲು ಇಳಿ ವಯಸ್ಸಿನಲ್ಲೂ ಅವಿರತ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದರು.

ಕೋವಿಡ್​ ಬಳಿಕ ಕಷ್ಟದಲ್ಲಿದ್ದ ಸಿನಿಮಾ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಿದರು. ಬಣ್ಣ ಹಚ್ಚಿದರೆ ಜೀವನ ಎನ್ನುವಂತಹ 150 ಕ್ಕೂ ಹೆಚ್ಚು ಕಲಾವಿದರಿಗೆ ಪ್ರತಿ ತಿಂಗಳು ಮಾಸಾಶನ ತಪ್ಪದೇ ನೀಡುತ್ತಿದ್ದಾರೆ. ಸಹ ಕಲಾವಿದರಿಗೆ, ತಂತ್ರಜ್ಞರಿಗೆ ಪಿಂಚಣಿ ಕೊಡಿಸಬೇಕು ಎಂಬುದು ಅವರ ಕನಸು ಅವರಿಗಿತ್ತು. ಇದಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.

ಸೋಲದೇವನಹಳ್ಳಿಯಲ್ಲಿ ತಾವಿದ್ದ ಸುತ್ತಮುತ್ತಲು ಕಷ್ಟ ಎಂದು ಬಂದವರಿಗೆ ನೆರವಿಗೆ ಆಗುವ ಮೂಲಕ ದೇವರಾಗಿದ್ದರು. ಅಲ್ಲಿದ್ದ ಸುತ್ತಮುತ್ತಲಿನ ರೈತರ ಕಷ್ಟಕ್ಕೆ ಮಿಡಿಯುತ್ತಿದ್ದರು. ಲೀಲಾವತಿ ಅಮ್ಮನಿಂದಲೇ ಊರಿಗೆ ರಸ್ತೆ, ವಿದ್ಯುತ್​​, ದೇವಸ್ಥಾನ ನಿರ್ಮಾಣ ಅವರಿಂದಲೇ ಆಯಿತು ಎನ್ನುತ್ತಾರೆ ಸೋಲದೇವನಹಳ್ಳಿ ಗ್ರಾಮಸ್ಥರು.

ನಟನೆ ಮೂಲಕ ಮನೆ ಮಾತಾಗಿದ್ದ ನಟಿ ಲೀಲಾವತಿ ಇಹಲೋಕ ತ್ಯಜಿಸಿದರೂ ಅವರ ಸಮಾಜ ಸೇವೆಯ ಕೆಲಸಗಳು ಅಜರಾಮರವಾಗಿದೆ. ಸದ್ದಿಲ್ಲದೇ ಮಾಡಿರುವ ಸೇವೆಗಳ ಮೂಲಕ ಅವರು ಅಮರ ಆಗಿದ್ದಾರೆ.

ಇದನ್ನೂ ಓದಿ: ತಮಗಿಲ್ಲದಿದ್ದರೂ ಪ್ರಾಣಿಗಳಿಗೆ ತಪ್ಪದೇ ಆಹಾರ ನೀಡುತ್ತಿದ್ದ ನಟಿ ಲೀಲಾವತಿ

ABOUT THE AUTHOR

...view details