ಕರ್ನಾಟಕ

karnataka

ETV Bharat / entertainment

ತ್ರಿವರ್ಣ ಧ್ವಜ ಹಿಡಿದು ದೇಶ ಪ್ರೇಮ ಮೆರೆದ ಕನ್ನಡ ತಾರೆಯರು - independence day

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ತಾರೆಯರು ಭಾಗಿಯಾಗಿದ್ದು, ತ್ರಿವರ್ಣ ಧ್ವಜ ಹಿಡಿದು ದೇಶಪ್ರೇಮ ಮೆರೆದಿದ್ದಾರೆ.

kannada-actors-carried-the-tricolor-flag-and-showed-their-love-for-the-country
ತ್ರಿವರ್ಣ ಧ್ವಜ ಹಿಡಿದು ದೇಶ ಪ್ರೇಮ ಮೆರೆದ ಕನ್ನಡ ಚಿತ್ರರಂಗದ ತಾರೆಯರು

By

Published : Aug 16, 2022, 7:34 AM IST

ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಕನ್ನಡ ಚಿತ್ರರಂಗ ಸ್ಟಾರ್ ನಟರು ಭಾಗಿಯಾಗಿದ್ದಾರೆ . ಈಗಾಗಲೇ ನವರಸ ನಾಯಕ ಜಗ್ಗೇಶ್ ನಿರ್ಮಾಣ ಮಾಡಿರೋ ವಂದೇ ಮಾತರಂ ಹಾಡಿನಲ್ಲಿ ಚಿತ್ರರಂಗದ ತಾರೆಯರು ಈ ತ್ರಿವರ್ಣ ಧ್ವಜ ಹಿಡಿದು ತಮ್ಮ ದೇಶಪ್ರೇಮ ಮೆರೆದಿದ್ದಾರೆ.

ನಟ ಯಶ್ ಹಾಗೂ ರಾಧಿಕಾ ಪಂಡಿತ್
ಅರ್ಜುನ್ ಸರ್ಜಾ
ಹರ್ಷಿಕಾ ಪೂಣಚ್ಚ

ಇದರ ಜೊತೆಗೆ ನಟ ಯಶ್, ಉಪೇಂದ್ರ, ಸಂಸದೆ ಸುಮಲತಾ ಅಂಬರೀಷ್, ಅರ್ಜುನ್ ಸರ್ಜಾ, ಧನಂಜಯ್, ಧೃವ ಸರ್ಜಾ, ವಸಿಷ್ಟ ಸಿಂಹ, ನೀನಾಸಂ ಸತೀಶ್ , ನಟ ಶ್ರೀಕಿ, ನಟಿಯರಾದ ಕಾರುಣ್ಯಾ ರಾಮ್, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ರಾಷ್ಟ್ರ ಪ್ರೇಮ ಮೆರೆದಿದ್ದಾರೆ.

ಕಾರುಣ್ಯಾ ರಾಮ್
ಧನಂಜಯ್
ನಟ ಶ್ರೀಕಿ

ನಟ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ತ್ರಿವರ್ಣ ಧ್ವಜ ಹಿಡಿದು, ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ ಹಿರಿಮೆ, ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಹೇಳಲಿ ಜೈ ಹಿಂದ್ ಎಂದು ಹೇಳಿದ್ದಾರೆ. ಇನ್ನು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುತ್ತಿರುವ ಮಾರ್ಟಿನ್ ಚಿತ್ರ ತಂಡ, ಹಾಗೂ ಧ್ರುವ ಸರ್ಜಾ ಕಾಶ್ಮೀರದ ಗಡಿಯಿಂದ 75ನೇ ಸ್ವಾತಂತ್ರ್ಯಕ್ಕೆ ಶುಭಾಶಯ ಕೋರಿದ್ದಾರೆ. ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಯು ಐ ಚಿತ್ರತಂಡದೊಂದಿಗೆ, ನಮ್ಮ ತ್ರಿವರ್ಣ ಧ್ವಜ ಹಿಡಿದು ಜೈ ಹಿಂದ್ ಘೋಷವಾಕ್ಯ ಮೊಳಗಿಸಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್
ನೀನಾಸಂ ಸತೀಶ್

ಇದರ ಜೊತೆಗೆ ಧನಂಜಯ್, ನೀನಾಸಂ ಸತೀಶ್ , ವಸಿಷ್ಠ ಸಿಂಹ, ಶ್ರೀಕಿ, ನಟಿಯರಾದ ಹರ್ಷಿಕಾ ಪೂಣಚ್ಚ, ಕಾರುಣ್ಯಾ ರಾಮ್ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶ ಪ್ರೇಮ ಮೆರೆದಿದ್ದಾರೆ. ಇನ್ನು ಮಲೆನಾಡಿ ಹುಡುಗಿ ಹರ್ಷಿಕಾ ಪೂಣಚ್ಚ ತ್ರಿವರ್ಣ ಧ್ವಜ ಹಿಡಿದು ವಿಧಾನಸೌಧದ ಮುಂದೆ ಕಲರ್ ಫುಲ್ ಫೋಟೋ ಶೂಟ್ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಸಿನಿಮಾ ತಾರೆಯರು 75ನೇ ವರ್ಷದ ಸ್ವಾತಂತ್ರ್ಯವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ತ್ರಿವರ್ಣ ಧ್ವಜ ಹಿಡಿದು ದೇಶ ಪ್ರೇಮ ಮೆರೆದ ಕನ್ನಡ ಚಿತ್ರರಂಗದ ತಾರೆಯರು

ಓದಿ :75ನೇ ಸ್ವಾತಂತ್ರ್ಯೋತ್ಸವ.. ವಂದೇ ಮಾತರಂ ಹಾಡಿನಲ್ಲಿ ಕನ್ನಡ ತಾರೆಯರ ಮೆರಗು

ABOUT THE AUTHOR

...view details