ಕರ್ನಾಟಕ

karnataka

ETV Bharat / entertainment

ಕಂಗನಾ ರಣಾವತ್ 'ತೇಜಸ್', ಟೈಗರ್ ಶ್ರಾಫ್ 'ಗಣಪತ್ ಭಾಗ-1' ಸಿನಿಮಾ ಒಂದೇ ದಿನ ತೆರೆಗೆ - ಚಿತ್ರ ಬಿಡುಗಡೆ ದಿನಾಂಕ

Tejas Vs Ganesha Part 1 film: ನಟಿ ಕಂಗನಾ ರಣಾವತ್ ಮುಂದಿರುವ 'ತೇಜಸ್' ನಿರ್ಮಾಪಕರು ಬುಧವಾರ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕಂಗನಾ ರಣಾವತ್ 'ತೇಜಸ್' ಚಿತ್ರ ಹಾಗೂ ಟೈಗರ್ ಶ್ರಾಫ್ ಅಭಿನಯದ 'ಗಣಪತ್ ಭಾಗ-1' ಸಿನಿಮಾ ಒಂದೇ ದಿನ ತೆರೆಗೆ ಬರಲಿವೆ.

Tejas Vs Ganesha Part 1 film
ಕಂಗನಾ ರಣಾವತ್ ಹಾಗೂ ಟೈಗರ್ ಶ್ರಾಫ್

By

Published : Jul 5, 2023, 3:54 PM IST

ಮುಂಬೈ:ತೇಜಸ್ ಚಿತ್ರದ ಮೂಲಕ ಕಂಗನಾ ರಣಾವತ್ ಮತ್ತೆ ದೊಡ್ಡ ಪರದೆಯ ಮೇಲೆ ಬರಲು ಸಜ್ಜಾಗಿದ್ದಾರೆ. ತಯಾರಕರು ಬುಧವಾರ ತೇಜಸ್‌ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಕಂಗನಾ ವಾಯುಪಡೆಯ ಸೇನಾ ಸಮವಸ್ತ್ರದಲ್ಲಿರುವ ಕೆಲವು ಗ್ಲಿಂಪ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅಭಿನಯದ ಆಕ್ಷನ್ ಥ್ರಿಲ್ಲರ್ 'ಗಣಪತ್ ಭಾಗ-1' ಚಿತ್ರದೊಂದಿಗೆ ಕಂಗನಾ ಅವರ 'ತೇಜಸ್' ಸಿನಿಮಾ ಒಂದೇ ದಿನ ಬಿಡುಗಡೆಯಾಗಲಿದೆ.

ಕಂಗನಾ ನಾಯಕತ್ವದ ತೇಜಸ್ ಅಕ್ಟೋಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ಬುಧವಾರ ಪ್ರಕಟಿಸಿದ್ದಾರೆ. ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ ಮುಂಬರುವ ಚಲನಚಿತ್ರದಲ್ಲಿ ಕಂಗನಾ ರಣಾವತ್ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೊಡಕ್ಷನ್ ಹೌಸ್ ಆರ್​ಎಸ್​ವಿಪಿ ಮೂವೀಸ್ ತನ್ನ ಅಧಿಕೃತ ಟ್ವಿಟರ್​​ ಪುಟದಲ್ಲಿ ಬಿಡುಗಡೆ ದಿನಾಂಕದ ಪ್ರಕಟಣೆಯನ್ನು ಹಂಚಿಕೊಂಡಿದೆ.

"ಅಡ್ರಿನಾಲಿನ್ ತುಂಬಿದ ಸಾಹಸಕ್ಕೆ ಸಿದ್ಧರಾಗಿ! ತೇಜಸ್ ಚಿತ್ರದಲ್ಲಿ ನಟಿಸಿರುವ ಕಂಗನಾ ಟೀಮ್ ಅಕ್ಟೋಬರ್ 20 ರಂದು ನಿಮ್ಮ ಹತ್ತಿರದ ಚಿತ್ರ ಮಂದಿರದಲ್ಲಿ ಟೇಕ್ ಆಫ್ ಆಗಲು ಸಿದ್ಧವಾಗಿದೆ ಎಂದು @sarveshmewara1 @varunmitra19 @anshul14chauhan @RonnieScrewvala #RSVPMovies ನಿಂದ ಟ್ವೀಟ್ಟರ್​ನಲ್ಲಿ ತಿಳಿಸಲಾಗಿದೆ.

'ತೇಜಸ್' ಚಿತ್ರದಲ್ಲಿ ರಾಷ್ಟಾಭಿಮಾನ ಸಂದೇಶ:ಸಿನಿಮಾ ತಯಾರಕರ ಪ್ರಕಾರ, ತೇಜಸ್ ರನೌತ್ ಅವರ ತೇಜಸ್ ಗಿಲ್ ಸುತ್ತ ಸುತ್ತುತ್ತದೆ. ಅವರು ನಮ್ಮ ರಾಷ್ಟ್ರವನ್ನು ದಣಿವರಿಯಿಲ್ಲದೇ ರಕ್ಷಿಸುವ, ದಾರಿ ಉದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸುವ ಧೀರ ಸೈನಿಕರಲ್ಲಿ ಆಳವಾದ ಹೆಮ್ಮೆಯ ಭಾವನೆಯನ್ನು ತುಂಬುವ ಗುರಿಯನ್ನು ಹೊಂದಿದ್ದಾರೆ. ಚಿತ್ರವು ಈ ಹಿಂದೆ ಅಕ್ಟೋಬರ್ 5, 2022ರಂದು ಚಿತ್ರಮಂದಿರಗಳಲ್ಲಿ ಬರಲು ಯೋಜಿಸಲಾಗಿತ್ತು. ಆದರೆ, ಅಕ್ಟೋಬರ್ 20, 2023ಕ್ಕೆ ಮುಂದೂಡಲಾಯಿತು.

ಎರಡು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್:ತೇಜಸ್ ತಯಾರಕರು ಅಕ್ಟೋಬರ್ 20ರಂದು ಚಿತ್ರದ ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನೂ ವಿಕಾಸ್ ಬಹಲ್ ಹೆಲ್ಮ್ ಗಣಪತ್ ಭಾಗ -1ರ ನಿರ್ಮಾಪಕರು ಈಗಾಗಲೇ ಬುಕ್ ಮಾಡಿದ್ದಾರೆ. ಟೈಗರ್ ಮತ್ತು ಕೃತಿ ಅಭಿನಯದ ಸಾಹಸಮಯ ಸಿನಿಮಾವನ್ನು ವಿಕಾಸ್, ಜಾಕಿ ಭಗ್ನಾನಿ, ವಶು ಭಗ್ನಾನಿ, ದೀಪಶಿಖಾ ದೇಶಮುಖ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅಬ್ಬರ: ಇತ್ತೀಚೆಗೆ ಕಂಗನಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಿದ್ದರು. ಪ್ರಸ್ತುತ ನೂನತ ಚಿತ್ರದ ಬಗ್ಗೆ ಅಪ್​ಡೇಟ್ ಕೊಟ್ಟು ತುಂಬಾ ಸದ್ದು ಮಾಡಿದ್ದಾರೆ. ಕಂಗನಾ ಅವರ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮುಗ್ಗರಿಸಿವೆ. ಇನ್ನೂ ತೇಜಸ್ ಚಿತ್ರವಾದರೂ ಗೆಲ್ಲಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆಯಾಗಿದೆ.

ಕಂಗನಾ ರಣಾವತ್ ತಾವೇ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡುತ್ತಿರುವ ಎಮರ್ಜೆನ್ಸಿ ಚಿತ್ರ ಕೂಡ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಅದರ ತಯಾರಿಯಲ್ಲೂ ಕಂಗನಾ ನಿರತರಾಗಿದ್ದಾರೆ. ರಾಜಕೀಯ ಹಿರಿಯ ನಾಯಕಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ತೆರೆಯ ಮೇಲೆ ಬರುತ್ತಿದ್ದು, ಎಮರ್ಜೆನ್ಸಿಯ ಕರಾಳತೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರಂತೆ ಕಂಗನಾ.

ಇದನ್ನೂ ಓದಿ:ನಿರ್ಮಾಪಕರಿಗೆ ಅಡ್ವಾನ್ಸ್ ಹಣ​ ವಾಪಸ್​ ಕೊಟ್ಟ ನಟಿ ಸಮಂತಾ.. ಸಿನಿಮಾಗಳಿಂದ ಬ್ರೇಕ್​!

ABOUT THE AUTHOR

...view details