ಕರ್ನಾಟಕ

karnataka

ETV Bharat / entertainment

'ನನ್ನ ದೇಹದ ಪ್ರತೀ ಜೀವಕೋಶವೂ ಇಂದಿರಾ ಗಾಂಧಿಯಾಗಿತ್ತು, ಮುಂದಿನ ಚಿತ್ರಕ್ಕೆ ತಯಾರಿ ಆರಂಭ': ಕಂಗನಾ - Kangana Ranaut upcoming movie

'ಎಮರ್ಜೆನ್ಸಿ' ಸಿನಿಮಾ ಕೆಲಸ ಪೂರ್ಣಗೊಂಡಿದ್ದು, ಮುಂದಿನ ಆ್ಯಕ್ಷನ್​ ಕಾಮಿಡಿ ಚಿತ್ರಕ್ಕೆ ತಯಾರಿ ಆರಂಭವಾಗಿದೆ ಎಂದು ನಟಿ ಕಂಗನಾ ರಣಾವತ್​​ ತಿಳಿಸಿದ್ದಾರೆ.

Kangana Ranaut
ಕಂಗನಾ ರಣಾವತ್​​

By

Published : Jun 13, 2023, 12:51 PM IST

Updated : Jun 13, 2023, 1:22 PM IST

ಸಿನಿಮಾ ಜೊತೆಗೆ ಬೋಲ್ಡ್​​ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್​​​ನ ಪ್ರತಿಭಾನ್ವಿತ ನಟಿ ಕಂಗನಾ ರಣಾವತ್​​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ತಮ್ಮ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಕೆಲಸ​ ಪೂರ್ಣಗೊಳಿಸಿದ್ದು, ಮುಂದಿನ ಚಿತ್ರಕ್ಕೆ ತಯಾರಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್,​​ ''ಕಳೆದ ಎರಡು ವರ್ಷಗಳಿಂದ ನನ್ನ ದೇಹದ ಪ್ರತೀ ಜೀವಕೋಶವೂ ಶ್ರೀಮತಿ ಗಾಂಧಿಯಾಗಿತ್ತು. ಈಗ ಮುಂದಿನ ಪಾತ್ರಕ್ಕೆ ತೆರಳುವ ಸಮಯ ಬಂದಿದೆ. ಮುಂದಿನ ಆ್ಯಕ್ಷನ್​, ಕಾಮಿಡಿ ಚಿತ್ರಕ್ಕಾಗಿ ನನ್ನ ಫಿಟ್ನೆಸ್​​ ದಿನಚರಿಗೆ ಮರಳಲು ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದಾರೆ. ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದಾಗಿದೆ. ನಟಿಯ ಮುಂದಿನ ಚಿತ್ರದ ಘೋಷಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

'ಎಮರ್ಜೆನ್ಸಿ' ಈ ಸಾಲಿನ ಬಹುನಿರೀಕ್ಷಿತ ಚಿತ್ರ. ರಾಜಕೀಯ ಕಥೆಯಾಧಾರಿತ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜನವರಿಯಲ್ಲಿಯೇ ಶೂಟಿಂಗ್​ ಪೂರ್ಣಗೊಂಡಿರುವ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್​ ಹಂತದಲ್ಲಿದೆ. ಈ ಸಿನಿಮಾ ಶೂಟಿಂಗ್​ ಪೂರ್ಣಗೊಂಡ ವೇಳೆ, ಚಿತ್ರಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟಿರುವುದಾಗಿ ಕಂಗನಾ ಹೇಳಿಕೊಂಡಿದ್ದರು. 'ನನ್ನ ಆಸ್ತಿಯನ್ನು ಅಡವಿಟ್ಟಿದ್ದೇನೆ, ಅನಾರೋಗ್ಯವಿದ್ದರೂ ಸಿನಿಮಾ ಚಿತ್ರೀಕರಣ​ ಮುಗಿಸಿದ್ದೇನೆ' ಎಂದು ತಿಳಿಸಿದ್ದರು.

ಅಕ್ಟೋಬರ್​ 20ರಂದು ತೆರೆಕಾಣಲು ಸಜ್ಜಾಗಿರುವ 'ಎಮರ್ಜೆನ್ಸಿ' ಚಿತ್ರ ಕಂಗನಾ ಅವರಿಗೆ ದೊಡ್ಡ ಪರೀಕ್ಷೆ ಅಂದ್ರೆ ತಪ್ಪಾಗಲ್ಲ. ಈ ಚಿತ್ರದಲ್ಲಿ ಕೇವಲ ನಟಿಯಾಗಿ ಕೆಲಸ ಮಾಡಿಲ್ಲ. 'ಎಮರ್ಜೆನ್ಸಿ' ಮೂಲಕ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಹೊರ ಹೊಮ್ಮಲಿದ್ದಾರೆ. ಆಸ್ತಿ ಅಡವಿಟ್ಟು ಸಿನಿಮಾ ಮಾಡಿರುವ ಹಿನ್ನೆಲೆ ಕಂಗನಾ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ:Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್​ಗಳ ಮಾರಾಟ.. ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಉಡೀಸ್​!

ಸಿನಿಮಾ ಮಾತ್ರವಲ್ಲದೇ ಬೋಲ್ಡ್​ ಹೇಳಿಕೆಗಳಿಗೂ ಹೆಸರುವಾಸಿಯಾಗಿರುವ ಕಂಗನಾ ರಣಾವತ್​ ಇತ್ತೀಚೆಗೆ ರಾಮಾಯಣ ಆಧಾರಿತ ಸಿನಿಮಾ ಬಗ್ಗೆ ಮಾತನಾಡಿದ್ದರು. ಇನ್‌ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ, ಬಾಲಿವುಡ್​ ನಟ ರಣ್​ಬೀರ್​ ಕಪೂರ್​ ಅವರ ಬಗ್ಗೆ ಟೀಕಿಸಿದ್ದರೆ, ಕನ್ನಡ ನಟ ಯಶ್​​ ಬಗ್ಗೆ ಗುಣಗಾನ ಮಾಡಿದ್ದರು. ಬಾಲಿವುಡ್​ನಲ್ಲಿ ರಾಮಾಯಣ ಆಧಾರಿತ ಸಿನಿಮಾಗೆ ತಯಾರಿ ಆರಂಭಗೊಂಡಿದ್ದು, ಬಹುಬೇಡಿಕೆ ತಾರೆಯರಾದ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ರಾಮ ಸೀತೆ ಪಾತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​​ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಯಶ್​ ರಾವಣನ ಪಾತ್ರವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದ ಕಂಗನಾ, ತೆಳು ಬಿಳಿ ಇಲಿ ರಾಮನ ಪಾತ್ರಕ್ಕೆ, ಶ್ರೀರಾಮನಂತೆ ಕಾಣುವ ದಕ್ಷಿಣದ ಸೂಪರ್​ ಸ್ಟಾರ್​ಗೆ ರಾವಣನ ಪಾತ್ರವೇ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ:Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್​ನಂತೆ ಯಶ್​ ಕಾಣುತ್ತಾರೆಂದ ಕಂಗನಾ

Last Updated : Jun 13, 2023, 1:22 PM IST

ABOUT THE AUTHOR

...view details