ಕರ್ನಾಟಕ

karnataka

ETV Bharat / entertainment

'ನಾನೆಂದಿಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ': ಕಂಗನಾ ರಣಾವತ್​ ಹೀಗಂದಿದ್ದೇಕೆ?! - ಕಂಗನಾ ರಣಾವತ್​ ಸಿನಿಮಾ ಸೋಲು

ಕಂಗನಾ ರಣಾವತ್​ ಇನ್​ಸ್ಟಾ ಸ್ಟೋರಿಯಲ್ಲಿ ಹಳೇ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ದೃಶ್ಯದಲ್ಲಿ ತಪ್ಪು ನಿರ್ಧಾರಗಳ ಬಗ್ಗೆ ನಟಿ ಮಾತನಾಡಿರೋದನ್ನು ಕಾಣಬಹುದು.

Kangana Ranaut
ಕಂಗನಾ ರಣಾವತ್​

By

Published : May 11, 2023, 4:17 PM IST

ಬಾಲಿವುಡ್​​ ಬೋಲ್ಡ್​ ಬ್ಯೂಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಉತ್ತಮ ಸಿನಿಮಾಗೂ ಸೈ, ಬೋಲ್ಡ್​ ಸ್ಟೇಟ್​ಮೆಂಟ್ಸ್​ಗೂ ಜೈ. ಸಿನಿಮಾಗಳ ಪಾತ್ರಗಳಿಗೆ ಜೀವ ತುಂಬಿ ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ಕಂಗನಾ ರಣಾವತ್ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಸದ್ದು ಮಾಡುತ್ತಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಎಂದಿಗೂ ಹಿಂಜರಿಯದ ಧೈರ್ಯವಂತೆ ಈಕೆ.

ರಾಸ್ಕಲ್ ಮತ್ತು ಡಬಲ್ ಧಾಮಾಲ್ ಚಿತ್ರಗಳ ಬಗ್ಗೆ ಮಾತನಾಡಿರುವ ಹಳೇ ವಿಡಿಯೋವೊಂದನ್ನು ನಟಿ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ ಸ್ಟೋರಿನಲ್ಲಿ ಶೇರ್ ಮಾಡಿದ್ದಾರೆ. ಆ ಸಿನಿಮಾ ಬಳಿಕದ ಸಂದರ್ಶನವೊಂದರ ವಿಡಿಯೋ ಇದು. ರಾಸ್ಕಲ್ ಮತ್ತು ಡಬಲ್ ಧಾಮಾಲ್ ಚಿತ್ರಗಳಲ್ಲಿ ಕಂಗನಾ ರಣಾವತ್​ ಪೋಷಕ ಪಾತ್ರ ವಹಿಸಿದ್ದರು. ನಾನು ಎಂದಿಗೂ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ನಟಿ ಹೇಳುವುದನ್ನು ನಾವು ಈ ವಿಡಿಯೋದಲ್ಲಿ ಕೇಳಬಹುದು.

ಕಂಗನಾ ರಣಾವತ್​ ಇನ್​ಸ್ಟಾ ಸ್ಟೋರಿ

ಆ ಹಳೇ ಸಂದರ್ಶನದ ವಿಡಿಯೋದಲ್ಲಿ, 'ಜೀವನದಲ್ಲಿ ಪ್ರತಿಯೊಬ್ಬರೂ ಕೆಲ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ನಾನು ಕೂಡ ತೆಗೆದುಕೊಂದಿದ್ದೇನೆ' ಎಂಬ ಪ್ರಶ್ನೆ ನಟಿ ಕಂಗನಾ ರಣಾವತ್​ ಅವರಿಗೆ ಎದುರಾಗುತ್ತದೆ. ಆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಿವುಡ್​ ಕ್ವೀನ್​​, ಅನೇಕರು ಅವು ತಪ್ಪು ನಿರ್ಧಾರಗಳು ಎಂದು ಹೇಳಿದರು, ಆದರೆ ನಾನು ಹಾಗೆ ಯೋಚಿಸುವುದಿಲ್ಲ. ಅನೇಕರು ರಾಸ್ಕಲ್​ ಮತ್ತು ಡಬಲ್ ಧಾಮಾಲ್‌ನಂತಹ ಚಿತ್ರಗಳಲ್ಲಿ ನಟಿಸಬಾರದಿತ್ತು, ಹೆಚ್ಚಿನದ್ದಕ್ಕೆ ಅರ್ಹರು ಎಂದು ತಿಳಿಸಿದರು. ಹೌದು, ಆದ್ರೆ ಆ ಸಂದರ್ಭದಲ್ಲಿ ನನಗೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಅಲ್ಲದೇ, ನಾನು ಯಾವುದೇ ಕೆಲಸಗಳನ್ನು ಚಿಕ್ಕ ಕೆಲಸ ಎಂದು ಭಾವಿಸುವುದಿಲ್ಲ. ಅಂದು ಆ ಪಾತ್ರ ನಿರ್ವಹಿಸಿದ್ದಕ್ಕೆ ಒಂದಿಷ್ಟು ಹಣ ಸಂಪಾದನೆ ಮಾಡಿದೆ. ಅದರಿಂದ ಕ್ಯಾಲಿಫೋರ್ನಿಯಾದಲ್ಲಿ ಶಾರ್ಟ್ ಫಿಲ್ಮ್ ಮಾಡಿದೆ. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಹೋಗುವಂತಹ ನನ್ನ ಚಿಕ್ಕ ಕನಸುಗಳನ್ನು ಈಡೇರಿಸಿಕೊಂಡೆ. ಇದನ್ನು "ತಪ್ಪು ನಿರ್ಧಾರ" ಎಂದು ಕರೆಯಲಾಗುವುದಿಲ್ಲ. ಎಲ್ಲವೂ "ಯೋಜನೆಯ ಒಂದು ಭಾಗ" ಎಂದು ತಿಳಿಸಿದರು.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೆ ಕಾಂತಾರ ಸ್ಟಾರ್​ ರಿಷಬ್​ ಕುಟುಂಬ ಭೇಟಿ, ಪೂಜೆ ಸಲ್ಲಿಕೆ

ಕಂಗನಾ ಶೇರ್ ಮಾಡಿರುವ ಈ ಹಳೇ ವಿಡಿಯೋದಲ್ಲಿ, "ನಾನು ಮತ್ತಷ್ಟು ಉತ್ತಮದ್ದಕ್ಕೆ ಅರ್ಹಳು ಎಂದು ನನಗೆ ತಿಳಿದಿದ್ದರೂ ಸಹ ನಾನು ಎಂದಿಗೂ ಹತಾಶಳಾಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಎಂದಿಗೂ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಈ ಸುಂದರವಾದ ಹಳೇ ನೆನಪಿನ ತುಣುಕುಗಳಿಗಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸೌಂದರ್ಯ ಮಾತ್ರವಲ್ಲ ಸಿರಿಯಲ್ಲೂ 'ಐಶ್ವರ್ಯಾ': ಈಕೆ ಬಳಿ ಇವೆ ದುಬಾರಿ ಬಂಗಲೆ, ಕಾರುಗಳು

ನಟಿಯ ಮುಂದಿನ ಸಿನಿಮಾ ಗಮನಿಸುವುದಾದರೆ, ಬಹುನಿರೀಕ್ಷಿತ ಎಮರ್ಜೆನ್ಸಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ತೇಜಸ್, ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ಚಂದ್ರಮುಖಿ 2, ದಿ ಇನ್​​​ಕರ್​​ನೇಶನ್​​: ಸೀತಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details