ಕರ್ನಾಟಕ

karnataka

ETV Bharat / entertainment

ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್​​ - ರಾಜಮೌಳಿ ನಾಸ್ತಿಕ

ತಾವು ನಾಸ್ತಿಕ ಎಂದು ನಿರ್ದೇಶಕ ಎಸ್‌ಎಸ್ ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅವರ ಬೆಂಬಲಕ್ಕೆ ಬಾಲಿವುಡ್​ ಕ್ವೀನ್​​ ಕಂಗನಾ ರಣಾವತ್​​ ಬಂದಿದ್ದಾರೆ.

Kangana Ranaut supports to Rajamouli statement
ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್

By

Published : Feb 18, 2023, 6:20 PM IST

Updated : Feb 18, 2023, 6:27 PM IST

ಭಾರತದ ಶ್ರೇಷ್ಠ, ಪ್ರತಿಭಾವಂತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಆ ವೇಳೆ ಧರ್ಮದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಬಳಿಕ ಸಮಾಜದ ಒಂದು ವರ್ಗದಿಂದ ಪರ-ವಿರೋಧ ಚರ್ಚೆ, ಟೀಕೆಗಳನ್ನು ಎದುರಿಸಿದರು. ಇದೀಗ ಸದಾ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಕಂಗನಾ ರಣಾವತ್ ಅವರು ರಾಜಮೌಳಿ ಪರ ಮಾತನಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಸರಣಿ ಟ್ವೀಟ್ ಮೂಲಕ ನಿರ್ದೇಶಕ ರಾಜಮೌಳಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

ರಾಜಮೌಳಿ ಅವರು ತಾವು ನಾಸ್ತಿಕ ಎಂದು ಹೇಳಿಕೊಂಡಿರುವ ಸುದ್ದಿಗೆ ಅತಿಯಾಗಿ ಪ್ರತಿಕ್ರಿಯಿಸಬೇಡಿ ಎಂದು ಟ್ವಿಟರ್‌ನಲ್ಲಿ ಕೇಳಿಕೊಂಡಿದ್ದಾರೆ. ರಣಾವತ್ ಸ್ವತಃ ದೇವರಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದು, ಎಲ್ಲೆಡೆ ಕೇಸರಿ ಧ್ವಜಗಳನ್ನು ಕೊಂಡೊಯ್ಯದಿರುವುದು ಕೂಡ ಸರಿ ಎಂದು ಹೇಳುವ ಮೂಲಕ ರಾಜಮೌಳಿ ಅವರ ನಿಲುವನ್ನು ಬೆಂಬಲಿಸಿದರು. ನಿರ್ದೇಶಕ ರಾಜಮೌಳಿ ಅವರ ರಾಷ್ಟ್ರೀಯತೆಯ ಚಲನಚಿತ್ರಗಳು ಮತ್ತು ಭಾರತೀಯ ಸಂಸ್ಕೃತಿಗೆ ಅವರು ತಂದಿರುವ ಗೌರವವನ್ನು ಸೂಚಿಸುವ ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ. ಮಾತಿಗಿಂತಲೂ ಕೃತಿ ಹೆಚ್ಚು ಸದ್ದು ಮಾಡುತ್ತದೆ ಎಂಬ ಅಂಶವನ್ನು ಕಂಗನಾ ಒತ್ತಿ ಹೇಳಿದ್ದಾರೆ.

ಅನಗತ್ಯವಾಗಿ (unduly) ಹಿಂದೂ ಆಗಿರುವುದು ವಿವಿಧ ರೀತಿಯ ದಾಳಿ ಮತ್ತು ಟ್ರೋಲಿಂಗ್‌ಗೆ ಗುರಿಯಾಗುತ್ತದೆ. ಬಲಪಂಥೀಯ ಸಮುದಾಯ ಎಂದೇ ಕರೆಯಲ್ಪಡುವವರು ಸಹ ಹೆಚ್ಚಿನ ಬೆಂಬಲವನ್ನು ನೀಡದ ಕಾರಣ ಕಲಾವಿದರು ದುರ್ಬಲರಾಗಿದ್ದಾರೆ ಎಂದು ಹೇಳುವ ಮೂಲಕ ಸೌತ್​ ಸ್ಟಾರ್​ ನಿರ್ದೇಶಕರನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ:17 ವರ್ಷದ ಸಂಭ್ರಮದಲ್ಲಿ 'ಮೈ ಆಟೋಗ್ರಾಫ್​'​​: ಹರ್ಷ ಹಂಚಿಕೊಂಡ ಅಭಿನಯ ಚಕ್ರವರ್ತಿ

ರಾಜಮೌಳಿ ಅವರ ಪರ-ವಿರೋಧದ ಪ್ರಕ್ರಿಯೆ ಎಡಪಂಥೀಯರ ಪ್ರಚಾರ ಎಂದು ಕರೆದ ನಟಿ, ಬಲಪಂಥೀಯ ಮೂರ್ಖರನ್ನು ಎಡಪಂಥೀಯರು ಪ್ರಬಲ ಮನಸ್ಸಿನ ರಾಷ್ಟ್ರೀಯವಾದಿಗಳ ನಂಬಿಕೆಗಳನ್ನು ವಿಘಟಿಸಲು ಮತ್ತು ಅಪಖ್ಯಾತಿಗೊಳಿಸಲು ಬಳಸುತ್ತಾರೆ ಎಂದು ಹೇಳಿದರು. ಅಲ್ಲದೇ ಎಡಪಂಥೀಯರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ನಟಿ, ರಾಜಮೌಳಿ ಅವರ ಮಾನಹಾನಿ ಮಾಡುವುದು ಎಡಪಂಥೀಯರ ಪಿತೂರಿಯಾಗಿದೆ ಎಂದು ಹೇಳಿದ್ದಾರೆ. ಬಲಪಂಥೀಯ ಜನರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಆದಿಯೋಗಿ ಪ್ರತಿಮೆಯ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್

ಹಳೆಯ ಸಂದರ್ಶನವನ್ನು ಇದ್ದಕ್ಕಿದ್ದಂತೆ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಲ್ಲೆಡೆ ಒಂದೇ ಅಜೆಂಡಾದೊಂದಿಗೆ ಅದೇ ಮುಖ್ಯಾಂಶಗಳೊಂದಿಗೆ ಹೇಗೆ ಪ್ರಕಟಿಸಲಾಗುತ್ತಿದೆ? ಎಂದು ಕೂಡ ಪ್ರಶ್ನಿಸಿದ್ದಾರೆ. ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ತಿಳಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ವೈಭವೀಕರಿಸಿದ್ದಕ್ಕಾಗಿ ಅವರ ಹಿಂದಿನ ಚಿತ್ರ 'ಬಾಹುಬಲಿ' ಅನ್ನು ಸಹ ಪ್ರಶಂಸಿಸಿದ್ದಾರೆ ನಟಿ ಕಂಗನಾ.

ಇದನ್ನೂ ಓದಿ:ಸ್ಮೃತಿ ಇರಾನಿ ಪುತ್ರಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಾರುಖ್​ ಖಾನ್​​

ಇತ್ತೀಚಿನ ಸಂದರ್ಶನವೊಂದರಲ್ಲಿ, ಆರ್​ಆರ್​ಆರ್​ ಖ್ಯಾತಿಯ ನಿರ್ದೇಶಕ ರಾಜಮೌಳಿ ನಾಸ್ತಿಕ ಎಂದು ಒಪ್ಪಿಕೊಂಡರು. ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಮ್ಮಲ್ಲೇ ಇಟ್ಟುಕೊಂಡು ಮನೋರಂಜನೆಗಾಗಿ ಸಿನಿಮಾ ಮಾಡುತ್ತೇನೆ ಎಂದು ಕೂಡ ತಿಳಿಸಿದರು.

Last Updated : Feb 18, 2023, 6:27 PM IST

ABOUT THE AUTHOR

...view details