ಕರ್ನಾಟಕ

karnataka

ETV Bharat / entertainment

'ಚಂದ್ರಮುಖಿ 2'ಗೆ ರಜನಿಕಾಂತ್ ಪ್ರಶಂಸೆ; ತಲೈವಾಗೆ ಧನ್ಯವಾದ ತಿಳಿಸಿದ ಕಂಗನಾ, ರಾಘವ ಲಾರೆನ್ಸ್​ - ಈಟಿವಿ ಭಾರತ ಕನ್ನಡ

'ಚಂದ್ರಮುಖಿ 2' ಸಿನಿಮಾವನ್ನು ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಪ್ರಶಂಸಿಸಿದ್ದಾರೆ. ​​

Kangana Ranaut shares Rajinikanth's appreciation note for Chandramukhi 2, Raghav Lawrence says 'Your encouragement means world'
'ಚಂದ್ರಮುಖಿ 2'ಗೆ ರಜನಿಕಾಂತ್ ಪ್ರಶಂಸೆ; ತಲೈವಾಗೆ ಧನ್ಯವಾದ ತಿಳಿಸಿದ ಕಂಗನಾ, ರಾಘವ ಲಾರೆನ್ಸ್​

By ETV Bharat Karnataka Team

Published : Sep 30, 2023, 9:58 PM IST

2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ 'ಚಂದ್ರಮುಖಿ 2' ಸೆಪ್ಟೆಂಬರ್​ 28 ರಂದು ತೆರೆಕಂಡು ಉತ್ತಮ ಪ್ರದರ್ಶನ ಮುಂದುವರೆಸಿದೆ. ನಟ, ನಿರ್ದೇಶಕ, ಕೊರಿಯೋಗ್ರಾಫರ್ ರಾಘವ ಲಾರೆನ್ಸ್ ಹಾಗೂ ಬಾಲಿವುಡ್​​ ಕ್ವೀನ್​ ಖ್ಯಾತಿಯ ಕಂಗನಾ ರಣಾವತ್ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾಗೆ ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಪಿ. ವಾಸು ಆಕ್ಷನ್​ ಕಟ್​ ಹೇಳಿದ್ದಾರೆ. ಸಿನಿಮಾವನ್ನು ವೀಕ್ಷಿಸಿದ ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ಕೂಡ ಚಿತ್ರವನ್ನು ಪ್ರಶಂಸಿಸಿದ್ದಾರೆ. ​​

'ಚಂದ್ರಮುಖಿ 2' ಚಿತ್ರತಂಡಕ್ಕೆ ದೀರ್ಘ ಬರಹದ ಪ್ರಶಂಸೆಯನ್ನು ರಜನಿಕಾಂತ್​ ಕಳುಹಿಸಿದ್ದಾರೆ. ಇದನ್ನು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ ನಟಿ ಕಂಗನಾ ರಣಾವತ್​ ಕೂಡ ರಜನಿ ಹೊಗಳಿಕೆಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ರಜನಿ ಪತ್ರವನ್ನು ಹಂಚಿಕೊಂಡಿರುವ ಅವರು, "ಚಂದ್ರಮುಖಿ 2 ಯಶಸ್ಸಿಗಾಗಿ ತಲೈವರ್​ ರಜನಿಕಾಂತ್​ ಅವರಿಂದ ಮೆಚ್ಚುಗೆ ಪತ್ರ" ಎಂದು ಬರೆದುಕೊಂಡಿದ್ದಾರೆ.

ರಜನಿ ಕಳುಹಿಸಿದ ಪತ್ರ ತಮಿಳು ಭಾಷೆಯಲ್ಲಿದೆ. "ತಮ್ಮ ಅತಿ ದೊಡ್ಡ ಯಶಸ್ಸಿನ ಚಿತ್ರವನ್ನು ಸಂಪೂರ್ಣವಾಗಿ ಹೊಸ ದಿಕ್ಕಿನಲ್ಲಿ ಕೊಂಡೊಯ್ದು, ಸಿನಿ ಪ್ರಿಯರಿಗೆ ಮತ್ತಷ್ಟು ಮನರಂಜನೆ ನೀಡಿದ ಪಿ. ವಾಸು ಮತ್ತು ಅದ್ಭುತವಾಗಿ ನಟಿಸಿರುವ ನನ್ನ ಸಹೋದರ ರಾಘವ ಲಾರೆನ್ಸ್​ ಹಾಗೂ ಇಡೀ ಚಿತ್ರತಂಡವನ್ನು ನಾನು ಹೃತ್ಫೂರ್ವಕವಾಗಿ ಅಭಿನಂದಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಚಂದ್ರಮುಖಿ 2 ಎಂಬುದು ರಜನಿಕಾಂತ್ ಹಾಗೂ ಜ್ಯೋತಿಕಾ ಮುಖ್ಯಭೂಮಿಕೆಯ ಸೂಪರ್​ ಹಿಟ್​ ಸಿನಿಮಾ ಚಂದ್ರಮುಖಿಯ ಸೀಕ್ವೆಲ್​​.

ಕಂಗನಾ ರಣಾವತ್​ ಇನ್​ಸ್ಟಾ ಸ್ಟೋರಿ

ನಟ ರಾಘವ ಲಾರೆನ್ಸ್​ ಕೂಡ ಈ ಪ್ರಶಂಸೆಯ ಪತ್ರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ರಜನಿಕಾಂತ್​ ಅವರಿಗೆ ಪ್ರೀತಿಯ ಧನ್ಯವಾದವನ್ನು ತಿಳಿಸಿದ್ದಾರೆ. ಸೂಪರ್​ಸ್ಟಾರ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿರುವ ಅವರು, "ಈ ವಿಚಾರ ನನ್ನ ಈ ದಿನವನ್ನು ಖುಷಿಯಾಗಿಸಿತು. ನನ್ನ ಸಹೋದರ, ಗುರು ತಲೈವಾರ್​ ಸೂಪರ್​ಸ್ಟಾರ್​ ರಜನಿಕಾಂತ್​ ಅವರಿಂದ ಹೊಗಳಿಕೆಯ ಪತ್ರವನ್ನು ಪಡೆದೆ. ಚಂದ್ರಮುಖಿ 2, ನಮಗೆ ಇನ್ನೇನು ಪ್ರಶಂಸೆ ಬೇಕು. ನಿಮ್ಮ ಪ್ರೋತ್ಸಾಹ ನಮಗೆ ಜಗತ್ತು ಎಂದರ್ಥ. ಧನ್ಯವಾದ ತಲೈವಾ! ಗುರುವೇ ಶರಣಂ" ಎಂದು ಬರೆದುಕೊಂಡಿದ್ದಾರೆ.

ಚಂದ್ರಮುಖಿ 2 ಗುರುವಾರದಂದು ಬಿಡುಗಡೆಯಾಯಿತು. ಎರಡು ಹಿಂದಿ ಸಿನಿಮಾಗಳಾದ ದಿ ವ್ಯಾಕ್ಸಿನ್ ವಾರ್ ಮತ್ತು ಫುಕ್ರೆ 3 ಕೂಡ ಅಂದೇ ತೆರೆ ಕಂಡಿದೆ. ಈ ವೇಳೆ ಈದ್ ಮತ್ತು ಗಣಪತಿ ನಿಮಜ್ಜನದ ಸಲುವಾಗಿ ಹಲವೆಡೆ ರಜೆ ಇದ್ದ ಹಿನ್ನೆಲೆ ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಈ ಮೊದಲು ಸೆಪ್ಟೆಂಬರ್ 15 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ತಾಂತ್ರಿಕ ಸಮಸ್ಯೆಗಳ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಆರ್​ಆರ್​ಆರ್​ ಖ್ಯಾತಿಯ ಎಂಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಚಿತ್ರದ ಹೈಲೆಟ್ಸ್​​ಗಳಲ್ಲೊಂದು.

ಇದನ್ನೂ ಓದಿ:'ಚಂದ್ರಮುಖಿ 2' ಬಿಡುಗಡೆ: ಕಂಗನಾ ರಣಾವತ್​ ನಟನೆಗೆ ಮನಸೋತ ಸೌತ್​ ಪ್ರೇಕ್ಷಕರು

ABOUT THE AUTHOR

...view details