'ಸೆಲ್ಫಿ' ಸಿನಿಮಾ ಮೊದಲ ದಿನ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡದ ಹಿನ್ನೆಲೆ, ಬಾಲಿವುಡ್ ಬೋಲ್ಡ್ ನಟಿ ಕಂಗನಾ ರಣಾವತ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಣ್ ಜೋಹರ್ ಅವರ ಚಲನಚಿತ್ರ ಸೆಲ್ಫಿ ಮೊದಲ ದಿನ ಹೆಚ್ಚೆಂದರೆ 10 ಲಕ್ಷ ರೂ. ಗಳಿಸಿರಬಹುದು. ಒಬ್ಬ ವ್ಯಾಪಾರಿ ಅಥವಾ ಮಾಧ್ಯಮದವರು ಅದರ ಬಗ್ಗೆ ಮಾತನಾಡುವುದನ್ನು ನಾನು ನೋಡಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದಾರೆ
ನಟಿ ಕಂಗನಾ ರಣಾವತ್ ಮತ್ತೊಂದು ಪೋಸ್ಟ್‌ನಲ್ಲಿ, ಮೇಲ್ ವರ್ಷನ್ ಆಫ್ ಕಂಗನಾ ರಣಾವತ್! ಎಂಬ ಶೀರ್ಷಿಕೆಯ ಸುದ್ದಿ ಲೇಖನವನ್ನು ಹಂಚಿಕೊಂಡಿದ್ದಾರೆ. ಆ ಸುದ್ದಿಯಲ್ಲಿ ಅಕ್ಷಯ್ ಅವರ 'ಸೆಲ್ಫಿ' ವೀಕ್ಷಕರನ್ನು ಮೆಚ್ಚಿಸಲು ವಿಫಲವಾದಾಗ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಅವರ ಸತತ ಆರನೇ ಫ್ಲಾಪ್ ಎಂದು ಹೇಳಿರುವ ಈ ಸುದ್ದಿಗೆ ನಟಿ ಕಂಗನಾ ಪ್ರತಿಕ್ರಿಯಿಸಿದ್ದಾರೆ. ನಾನು ಸೆಲ್ಫಿ ಫ್ಲಾಪ್ ಬಗ್ಗೆ ಸುದ್ದಿಗಾಗಿ ಹುಡುಕುತ್ತಿದ್ದೆ, ಆದ್ರೆ ನನಗೆ ಕೇವಲ ನನ್ನ ಬಗೆಗಿನ ಸುದ್ದಿಯೇ ಸಿಕ್ಕಿವೆ. ಇದು ಕೂಡ ನನ್ನದೇ ತಪ್ಪು ಎಂದು ಬರೆದುಕೊಂಡಿದ್ದಾರೆ.
ಕಂಗನಾ ಇನ್ನೂ ಕೆಲ ಸುದ್ದಿಗಳನ್ನು ಹಂಚಿಕೊಂಡು, ಒಂದು ಪ್ರತ್ಯೇಕ ಪೋಸ್ಟ್‌ನಲ್ಲಿ ಮುಕ್ತಾಯಗೊಳಿಸಿದರು. ನೂರಾರು ಸುದ್ದಿಗಳಿವೆ, ಆ ಸುದ್ದಿಯಲ್ಲಿ ಸೆಲ್ಫಿ ವೈಫಲ್ಯಕ್ಕೆ ನಾನೇ ಕಾರಣ ಎಂಬ ಆರೋಪವಿದೆ. ಅಕ್ಷಯ್ ಅಥವಾ ಕರಣ್ ಜೋಹರ್ ಹೆಸರನ್ನು ಉಲ್ಲೇಖಿಸಿಲ್ಲ. ಈ ಮಾಫಿಯಾ ಸುದ್ದಿಗಳನ್ನು ಮ್ಯಾನಿಪುಲೇಟ್ ಮಾಡುತ್ತದೆ ಎಂದು ಆರೋಪಿಸಿರುವ ಕಂಗನಾ, ಸೆಲ್ಫಿ ಚಿತ್ರ ಮೊದಲ ದಿನದ ಕಲೆಕ್ಷನ್‌ಗಾಗಿ ಕಾಯಲಾಗುತ್ತಿದೆ ಎಂದು ಬರೆದಿದ್ದಾರೆ.