ಕರ್ನಾಟಕ

karnataka

ETV Bharat / entertainment

'ವಿರುಷ್ಕಾ ಪವರ್​ಫುಲ್ ಕಪಲ್​': ಕಂಗನಾ ರಣಾವತ್ ಗುಣಗಾನ - anushka sharma

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಬಗ್ಗೆ ​ನಟಿ ಕಂಗನಾ ರಣಾವತ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Kangana Ranaut praises virushka
ವಿರುಷ್ಕಾ ಬಗ್ಗೆ ಕಂಗನಾ ರಣಾವತ್ ಗುಣಗಾನ

By

Published : Mar 5, 2023, 12:29 PM IST

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಶನಿವಾರ ಮಧ್ಯಪ್ರದೇಶದ ಉಜ್ಜಯಿನಿಯ ಬಾಬಾ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸ್ಟಾರ್​ ದಂಪತಿ ಮಹಾಕಾಳೇಶ್ವರನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಜೊತೆಗೆ ಹೇಳಿಕೆಗಳ ಮೂಲಕವೂ ಸದಾ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಸಹ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವುದರಿಂದ ಹಿಂದೆ ಸರಿದಿಲ್ಲ.

'ಪವರ್​​ಫುಲ್​ ಕಪಲ್':ನಟಿ ಕಂಗನಾ ರಣಾವತ್​​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿರುಷ್ಕಾ ಅವರ ವಿಡಿಯೋ ಶೇರ್ ಮಾಡಿಕೊಂಡು, ಪವರ್​​ಫುಲ್​ ಕಪಲ್​, ಉತ್ತಮ ಉದಾಹರಣೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಈ ದಂಪತಿ ಕೇವಲ ಮಹಾಕಾಳನ ಆಶೀರ್ವಾದ ಪಡೆದಿಲ್ಲ, ಸನಾತನ ಧರ್ಮ ಮತ್ತು ನಾಗರಿಕತೆಯನ್ನು ಒಂದಲ್ಲ ಒಂದು ರೀತಿಯಲ್ಲಿ ವೈಭವೀಕರಿಸಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ರಾಷ್ಟ್ರದ ಸ್ವಾಭಿಮಾನ ಮತ್ತು ಆರ್ಥಿಕತೆ ಎರಡಕ್ಕೂ ಸಹಾಯ ಮಾಡುತ್ತದೆ ಎಂದು ಬರೆದಿದ್ದಾರೆ.

ಮಹಾಕಾಳನ ಸನ್ನಿಧಿಯಲ್ಲಿ 'ವಿರುಷ್ಕಾ':ಭಾರತ ಕ್ರಿಕೆಟ್​ ತಂಡದ ಅನುಭವಿ ಆಟಗಾರ ಮತ್ತು ಬಾಲಿವುಡ್‌ನ ಬಹುಬೇಡಿಕೆಯ ನಟಿ ಅನುಷ್ಕಾ ಶರ್ಮಾ ದಂಪತಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಹಾಕಾಳನ​​​ ಭಸ್ಮಾರತಿಯಲ್ಲಿ ಅವರು ಭಾಗಿಯಾದರು. ನಂತರ ನಂದಿ ಸಭಾಂಗಣದಲ್ಲಿ ಕುಳಿತು ತಮ್ಮ ಪ್ರಾರ್ಥನೆ ಸಲ್ಲಿಸಿದರು. ಗರ್ಭಗುಡಿಗೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾಗವಹಿಸುವ ಸಲುವಾಗಿ ಇಂದೋರ್​ಗೆ ಭೇಟಿ ನೀಡಿದ್ದರು. ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನಲ್ಲಿ ಮಾರ್ಚ್ 1 ರಿಂದ 3ರವರೆಗೆ ನಡೆದಿದೆ. ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಬಳಿಕ ವಿರಾಟ್​ ತಮ್ಮ ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಉಳಿದಂತೆ ಅನೇಕ ಆಟಗಾರರು ಸಹ ಮಹಾಕಾಳೇಶ್ವರ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊರಳಲ್ಲಿ ರುದ್ರಾಕ್ಷಿ ಸರ, ಭಸ್ಮ ಆರತಿಯಲ್ಲಿ ವಿರುಷ್ಕಾ ಭಾಗಿ.. ಮಹಾಕಾಳೇಶ್ವರನ ದರ್ಶನ ಪಡೆದ ದಂಪತಿ

ಚಂದ್ರಮುಖಿ 2 ಶೂಟಿಂಗ್​ನಲ್ಲಿ ಕಂಗನಾ:ಕಂಗನಾ ರಣಾವತ್ ಈವರೆಗೆ ಎಮರ್ಜೆನ್ಸಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಎಮರ್ಜೆನ್ಸಿ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸ ಭರದಿಂದ ಸಾಗಿದೆ. ಸದ್ಯ ಚಂದ್ರಮುಖಿ 2 ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಜನವರಿಯಲ್ಲಿ ಚಂದ್ರಮುಖಿ 2ರ ಮೊದಲ ಶೆಡ್ಯೂಲ್​ನ ಚಿತ್ರೀಕರಣ​​ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್​​ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಪಿ.ವಾಸು ನಿರ್ದೇಶನದ ಚಂದ್ರಮುಖಿ 2ರಲ್ಲಿ ಕಂಗನಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:'ನಿಮ್ಮೆಲ್ಲರ ಆಶೀರ್ವಾದ ರಾದ್ಯಾಳ ಮೇಲಿರಲಿ..': ರಿಷಬ್​ ಶೆಟ್ಟಿ ಮುದ್ದು ಮಗಳ ವಿಡಿಯೋ ನೋಡಿ

ABOUT THE AUTHOR

...view details