ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಈ ಸಾಲಿನಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಭರ್ಜರಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅವರ ಬಹುನಿರೀಕ್ಷಿತ ರಾಜಕೀಯ ಸಿನಿಮಾ 'ಎಮರ್ಜೆನ್ಸಿ' ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು (ಶನಿವಾರ, ಜನವರಿ 21) ಎಮರ್ಜೆನ್ಸಿ ಶೂಟಿಂಗ್ ಮುಗಿಸಿದ ಬಳಿಕ ಕಂಗನಾ ರಣಾವತ್ ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ, ಈ ಸಿನಿಮಾಗಾಗಿ ಎಲ್ಲವನ್ನೂ ಪಣಕ್ಕಿಟ್ಟಿರುವುದಾಗಿ ತಿಳಿಸಿದ್ದಾರೆ.
ಎಮರ್ಜೆನ್ಸಿ ಶೂಟಿಂಗ್ ಕಂಪ್ಲೀಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಮರ್ಜೆನ್ಸಿ ಶೂಟಿಂಗ್ ಸೆಟ್ನ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ನಾನು ನಟಿಯಾಗಿ ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಇದು ನನ್ನ ಜೀವನದ ಹೆಮ್ಮೆಯ ಕ್ಷಣ. ನಾನು ಸಿನಿಮಾ ಶೂಟಿಂಗ್ ಅನ್ನು ಸುಲಭವಾಗಿ ಮುಗಿಸಿದ್ದೇನೆ. ಆದ್ರೆ ವಾಸ್ತವವಾಗಿ ಕಥೆ ಬೇರೇಯೇ. ಈ ಚಿತ್ರಕ್ಕಾಗಿ ನಾನು ನನ್ನ ಆಸ್ತಿಯನ್ನು ಅಡವಿಟ್ಟಿರುವೆ. ಅನಾರೋಗ್ಯದ ಹೊರತಾಗಿಯೂ ಸಿನಿಮಾ ಶೂಟಿಂಗ್ ಮುಗಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕಂಗನಾ ರಣಾವತ್ ಜವಾಬ್ದಾರಿಗಳು?ಈ 'ಎಮರ್ಜೆನ್ಸಿ' ಚಿತ್ರ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರಿಗೆ ದೊಡ್ಡ ಪರೀಕ್ಷೆ ಅಂದ್ರೆ ತಪ್ಪಾಗಲ್ಲ. ಅವರು ಕೇವಲ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಹೊರ ಹೊಮ್ಮಲಿದ್ದಾರೆ. ಈ ಚಿತ್ರದಲ್ಲಿ ಅವರ ಜವಾಬ್ದಾರಿ ಹೆಚ್ಚಿದೆ. ಈ ಹಿನ್ನೆಲೆ ತಮ್ಮ ಆಸ್ತಿ ಅಡವಿಟ್ಟು ಸಿನಿಮಾಗಾಗಿ ದುಡಿದಿರುವುದಾಗಿ ಹೇಳಿಕೊಂಡಿದ್ದಾರೆ.
ಕಂಗನಾಸೋಶಿಯಲ್ ಮೀಡಿಯಾ ಪೋಸ್ಟ್:ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಅವರು, ''ಸಾಮಾಜಿಕ ಮಾಧ್ಯಮದಲ್ಲಿ ನನ್ನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದೇನೆ. ಈ ಮೊದಲು ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ, ನನ್ನನ್ನು ಕೆಳಗಿಳಿಸಲು ಪ್ರಯತ್ನಿಸುವ ಜನರು ನನಗೆ ಬೇಕಾಗಿರಲಿಲ್ಲ. ನನ್ನನ್ನು ನಿಂದಿಸಲು ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಇದೀಗ ನನ್ನ ನೋವಿನಿಂದ ಅವರಿಗೆ ಖುಷಿ ಕೊಡಲು ಬಯಸಿದ್ದೇನೆ'' ಎಂದು ತಿಳಿಸಿದ್ದಾರೆ.