ಕರ್ನಾಟಕ

karnataka

ETV Bharat / entertainment

Kangana Ranaut: ಕಂಗನಾ ಮುಂದಿನ ಸಿನಿಮಾ ಯಾವುದು? ನಿರ್ಮಾಪಕ ಸಂದೀಪ್​ ಸಿಂಗ್​ ಜೊತೆಗಂತೆ ಹೊಸ ಪ್ರಾಜೆಕ್ಟ್‌ - ಸಂದೀಪ್​ ಸಿಂಗ್​ ಜೊತೆ ಕೈಜೋಡಿಸಿದ ನಟಿ ಕಂಗನಾ ರಣಾವತ್​

ಕಂಗನಾ ರಣಾವತ್​ ನಿರ್ದೇಶಿಸಿ, ಅಭಿನಯಿಸಿರುವ ಎಮರ್ಜೆನ್ಸಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

Kangana Ranaut joined hands with producer Sandeep Singh
ಸಂದೀಪ್​ ಸಿಂಗ್​ ಜೊತೆ ಕೈಜೋಡಿಸಿದ ನಟಿ ಕಂಗನಾ ರಣಾವತ್​

By

Published : Jun 28, 2023, 6:34 PM IST

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಿರ್ದೇಶಿಸಿ, ಅಭಿನಯಿಸಿರುವ ಎಮರ್ಜೆನ್ಸಿ ಸಿನಿಮಾದ ಟ್ರೇಲರ್​ ಮೊನ್ನೆಯಷ್ಟೆ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರತಂಡ ಘೋಷಣೆ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಕಂಗನಾ ರಣಾವತ್​ ಅವರು ತಮ್ಮ ಮುಂದಿನ ಸಿನಿಮಾಗೆ ರೆಡಿಯಾಗಿದ್ದಾರೆ. ಈ ಬಾರಿ ತಮ್ಮ ಮುಂದಿನ ಸಿನಿಮಾಗೆ ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಂದೀಪ್​ ಸಿಂಗ್​ ಅವರ ಜೊತೆ ಕೈ ಜೋಡಿಸಿದ್ದಾರೆ.

ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿರುವ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ರನೌತ್ ಅವರು ಸಂದೀಪ್ ಸಿಂಗ್ ಅವರ ನಿರ್ಮಾಣದ ಸಿನಿಮಾದ ಚಿತ್ರೀಕರಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ. ಮುಂಬರುವ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೊಂಡ ಕಂಗನಾ, ಇದುವರೆಗಿನ ವೃತ್ತಿಜೀವನದ ಅತಿದೊಡ್ಡ ಚಿತ್ರವಾಗಲಿದೆ. ನಿರ್ಮಾಪಕರು ಶೀಘ್ರದಲ್ಲೇ ನಿರ್ದೇಶಕರು ಮತ್ತು ಸಿನಿಮಾದ ಶೀರ್ಷಿಕೆ, ಚಿತ್ರದ ಕುರಿತ ಉಳಿದ ಮಾಹಿತಿ ಪ್ರಕಟಿಸಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಫ್ಯಾಶನ್, ತನು ವೆಡ್ಸ್ ಮನು, ಕ್ವೀನ್ ಮತ್ತು 'ಪಂಗಾ'ದಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಕಂಗನಾ ರಣಾವತ್, ಹೊಸ ಯೋಜನೆಯು "ನನ್ನ ವೃತ್ತಿಜೀವನದ ದೊಡ್ಡ ಚಿತ್ರ. ಸಂದೀಪ್ ಸಿಂಗ್​ ಹಾಗೂ ನಾನು ಕಳೆದ 13 ವರ್ಷಗಳಿಂದ ಸ್ನೇಹಿತರಾಗಿದ್ದು, ಬಹಳ ಸಮಯದಿಂದ ಒಂದು ಸಿನಿಮಾ ಮಾಡಬೇಕೆಂದು ಅಂದುಕೊಳ್ಳುತ್ತಿದ್ದೆವು. ಈಗ ನಮಗೆ ಸರಿಯಾದ ವಿಷಯ ಮತ್ತು ಪಾತ್ರ ಸಿಕ್ಕಿರುವುದರಿಂದ ಶೀಘ್ರದಲ್ಲೇ ನಾವು ಸಿನಿಮಾ ಮಾಡಲು ಮಾಡಲು ಸಿದ್ಧರಾಗಿದ್ದೇವೆ. ಇದು ನನ್ನ ವೃತ್ತಿಜೀವನದ ದೊಡ್ಡ ಚಿತ್ರವಾಗಲಿದೆ ಮತ್ತು ಅದ್ಭುತ ಪಾತ್ರ ಸಿಕ್ಕಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ನಟಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

"ಈ ಬಾರಿ ನಾನು ಇಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ. ಈ ಚಿತ್ರ ಮತ್ತು ನನ್ನ ಪಾತ್ರ ಅತ್ಯಂತ ಗೌರವಾನ್ವಿತ ಮತ್ತು ಸ್ಮರಣೀಯವಾಗಿರುತ್ತದೆ. ಇದು ಜಗತ್ತಿನಾದ್ಯಂತ ಪ್ರತಿಯೊಬ್ಬ ಭಾರತೀಯರಿಂದ ಪ್ರೀತಿಸಲ್ಪಡುತ್ತದೆ" ಎಂದು ಕಂಗನಾ ಹೇಳಿದ್ದಾರೆ.

ನಿರ್ಮಾಪಕ ಸಂದೀಪ್​ ಸಿಂಗ್​ ಅವರೂ ಈ ಬಗ್ಗೆ ಟ್ವೀಟ್​ ಮಾಡಿದ್ದು, ಕಂಗನಾ ರಣಾವತ್ ಅವರಂಥ ರಾಷ್ಟ್ರ ಪ್ರಶಸ್ತಿ ವಿಜೇತ ಮತ್ತು ಪದ್ಮಶ್ರೀ ಗೌರವಾನ್ವಿತ ನಟಿಯ ಜೊತೆ ಸಿನಿಮಾ ಮಾಡುವುದು ಯಾವುದೇ ಚಲನಚಿತ್ರ ನಿರ್ಮಾಪಕರ ಕನಸು ನನಸಾದಂತೆ. ಒಂದು ದಶಕದಿಂದ ನಾನು ಕಂಗನಾ ಜೊತೆ ಕೆಲಸ ಮಾಡಲು ಕಾತುರದಿಂದ ಕಾಯುತ್ತಿದ್ದೆ. ಕೊನೆಗೂ ಈ ಚಿತ್ರದಿಂದ ನನ್ನ ಕನಸು ನನಸಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ರಣಾವತ್ ಎಮರ್ಜೆನ್ಸಿ ಸಿನಿಮಾದಲ್ಲಿ ಅಭಿನಯಿಸಿರುವುದು ಮಾತ್ರವಲ್ಲದೇ ಬಂಡವಾಳವನ್ನೂ ಹೂಡಿದ್ದಾರೆ. ಸಿನಿಮಾ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:Emergency Teaser: 'ಇಂಡಿಯಾ ಈಸ್​ ಇಂದಿರಾ, ಇಂದಿರಾ ಈಸ್​ ಇಂಡಿಯಾ'- ಎಮರ್ಜೆನ್ಸಿ ಟೀಸರ್ ರಿಲೀಸ್

ABOUT THE AUTHOR

...view details