ಕರ್ನಾಟಕ

karnataka

ETV Bharat / entertainment

ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ ರಣಾವತ್: ಪ್ರಸಿದ್ಧ ನೃತ್ಯಗಾರ್ತಿ ಪಾತ್ರಕ್ಕೆ ಜೀವ ತುಂಬಲಿರುವ ನಟಿ - ಚಂದ್ರಮುಖಿ

ದಕ್ಷಿಣದ ಚಂದ್ರಮುಖಿ 2 ಶೂಟಿಂಗ್​ನಲ್ಲಿ ನಟಿ ಕಂಗನಾ ರಣಾವತ್ ಬ್ಯುಸಿಯಾಗಿದ್ದಾರೆ.

Kangana Ranaut in Chandramukhi 2 shooting
ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ ರಣಾವತ್

By

Published : Mar 1, 2023, 3:41 PM IST

ಬಾಲಿವುಡ್​​ ನಟಿ ಕಂಗನಾ ರಣಾವತ್ ಸಿನಿಮಾ, ಶೂಟಿಂಗ್​ನಿಂದ ಬಿಡುವು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬಹು ನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ಚಿತ್ರೀಕರಣ ಮುಗಿಸಿರುವ ಕಂಗನಾ ರಣಾವತ್ ತಮ್ಮ ಮುಂದಿನ ಚಂದ್ರಮುಖಿ 2ಗೆ ಶೂಟಿಂಗ್​ ಆರಂಭಿಸಿದ್ದಾರೆ.

ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ:ಚಂದ್ರಮುಖಿ 2 ಶೂಟಿಂಗ್​ ಪ್ರಾರಂಭವಾಗಿದೆ. ಈವರೆಗೆ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿ ಇದ್ದರು. ಎಮರ್ಜೆನ್ಸಿ ಚಿತ್ರದ ಶೂಟಿಂಗ್​​ ಕಂಪ್ಲೀಟ್​ ಆಗಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಜನವರಿಯಲ್ಲಿ ಚಂದ್ರಮುಖಿ 2 ಚಿತ್ರದ ಮೊದಲ ಶೆಡ್ಯೂಲ್​ನ ಶೂಟಿಂಗ್​​ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್​​ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಚಂದ್ರಮುಖಿ 2ರ ಮಹತ್ವದ ದೃಶ್ಯವನ್ನು ಇಂದು ಚಿತ್ರೀಕರಿಸುವುದಾಗಿ ನಟಿ ಕಂಗನಾ ರಣಾವತ್​​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಂಗನಾ ರಣಾವತ್ ಟ್ವೀಟ್: ಟ್ವಿಟರ್‌ನಲ್ಲಿ ಚಂದ್ರಮುಖಿ 2ರ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಮಹತ್ವದ ದೃಶ್ಯಕ್ಕಾಗಿ ತಯಾರಾಗುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಕಂಗನಾ ರಣಾವತ್​​ ಹಂಚಿಕೊಂಡಿರುವ ಚಿತ್ರಗಳಲ್ಲಿ, ಕಾಸ್ಟ್ಯೂಮ್ ಡಿಸೈನರ್ ನೀತಾ ಲುಲ್ಲಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡ ಕಂಗನಾ, ತಾನು ಉತ್ಸುಕರಾಗಿರುವ ಅತ್ಯಂತ ಮಹತ್ವದ ದೃಶ್ಯಗಳ ಚಿತ್ರೀಕರಣವನ್ನು ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.

ಪ್ರಸಿದ್ಧ ನೃತ್ಯಗಾರ್ತಿ ಪಾತ್ರ: ಪಿ ವಾಸು ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಂದ್ರಮುಖಿ 2 ಸಿನಿಮಾ ಕಳೆದ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದೆ. ರಜನಿಕಾಂತ್ ಮತ್ತು ಜ್ಯೋತಿಕಾ ಅವರ ತಮಿಳಿನ ಬ್ಲಾಕ್​ಬಸ್ಟರ್ ಚಿತ್ರ ಚಂದ್ರಮುಖಿಯ ಸೀಕ್ವೆಲ್ ಇದು. ಸೌಂದರ್ಯ, ನಟನೆ ಮತ್ತು ನೃತ್ಯಕ್ಕೆ ಹೆಸರಾಗಿರುವ ನೃತ್ಯಗಾರ್ತಿಯ ಪಾತ್ರವನ್ನು ಕಂಗನಾ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಚಂದ್ರಮುಖಿ 2 ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ಮಾತು

ದಕ್ಷಿಣದ ಸಿನಿಮಾ ತಲೈವಿ ಬಳಿಕ ನಟಿ ಕಂಗನಾ ರಣಾವತ್ ಅವರ ಮತ್ತೊಂದು ತಮಿಳು ಚಿತ್ರ ಚಂದ್ರಮುಖಿ 2. ಪಿ ವಾಸು ನಿರ್ದೇಶನದ ಚಂದ್ರಮುಖಿ 2ರಲ್ಲಿ ಕಂಗನಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಚಂದ್ರಮುಖಿ 1 ಅನ್ನೂ ಸಹ 2005ರಲ್ಲಿ ಪಿ.ವಾಸು ಅವರೇ ನಿರ್ದೇಶಿಸಿದ್ದರು. ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜ್ಯೋತಿಕಾ ಅವರು ನಟಿಸಿದ್ದರು. ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಚಂದ್ರಮುಖಿ 2 ಮುಖ್ಯಪಾತ್ರದಲ್ಲಿ ಕಂಗನಾ ಮಿಂಚು: ದಕ್ಷಿಣದತ್ತ ಬಾಲಿವುಡ್ ಬೆಡಗಿ

ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ದಿ ಇನ್ಕಾರ್ನೇಶನ್: ಸೀತಾ ಚಿತ್ರದಲ್ಲಿಯೂ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಣದ ಕೆಲಸ ಗಮನಿಸುವುದಾದರೆ, ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ನಟಿಸಿರುವ ಟಿಕು ವೆಡ್ಸ್ ಶೇರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದ್ದು, ಎಮರ್ಜೆನ್ಸಿ ಅಕ್ಟೋಬರ್ 20ರಂದು ಬಿಡುಗಡೆ ಆಗಲಿದೆ.

ABOUT THE AUTHOR

...view details