ಕರ್ನಾಟಕ

karnataka

ETV Bharat / entertainment

ಆಕರ್ಷಕ ಭಂಗಿಯಲ್ಲಿ ಕಂಗನಾ ರಣಾವತ್​: ಚಂದ್ರಮುಖಿ 2ರ ಫಸ್ಟ್ ಲುಕ್​ಗೆ ಮನಸೋತ ಅಭಿಮಾನಿಗಳು - ಚಂದ್ರಮುಖಿ 2 ಫಸ್ಟ್ ಲುಕ್​

Kangana Ranaut Chandramukhi look: ಚಂದ್ರಮುಖಿ 2 ಸಿನಿಮಾದಿಂದ ನಟಿ ಕಂಗನಾ ರಣಾವತ್​ ಅವರ ಫಸ್ಟ್ ಲುಕ್​ ಅನಾವರಣಗೊಂಡಿದೆ.

Kangana Ranaut
ಕಂಗನಾ ರಣಾವತ್

By

Published : Aug 5, 2023, 3:41 PM IST

ಸಿನಿಮಾ ಮತ್ತು ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಮುಖಿ 2 ನಟಿಯ ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಚಿತ್ರ ತಯಾರಕರು ಇಂದು ನಟಿಯ ಫಸ್ಟ್ ಲುಕ್ ಅನಾವರಣಗೊಳಿಸಿ, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಶಾಸ್ತ್ರೀಯ ನೃತ್ಯಗಾರ್ತಿ ಆಗಿ ಫೋಟೋದಲ್ಲಿ ಪಾಸಿಟಿವ್​ ವೈಬ್​ ಬೀರಿದ್ದಾರೆ. ಆಕರ್ಷಕ ಭಂಗಿಯಲ್ಲಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದು, ಅಭಿಮಾನಿಗಳು ನಟಿಯ ನೋಟಕ್ಕೆ ಮನಸೋತಿದ್ದಾರೆ.

ಕಂಗನಾ ರಣಾವತ್​ ಫಸ್ಟ್ ಲುಕ್​:ಚಂದ್ರಮುಖಿ 2ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಇಂದು ನಟಿ ಕಂಗನಾ ರಣಾವತ್ ಅವರ ಮೊದಲ ನೋಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಚಾರದ ಭಾಗವಾಗಿ ಅನಾವರಣಗೊಂಡಿರುವ ಪೋಸ್ಟರ್​ನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಅವರು ಆಕರ್ಷಕ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಶಾಸ್ತ್ರೀಯ ನೃತ್ಯಗಾರ್ತಿಯಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ: ಅರಮನೆ ಹಿನ್ನೆಲೆಯ ವಾತಾವರಣದಲ್ಲಿ ನಟಿ ಸಖತ್ ರಾಯಲ್​ ಆಗಿ ಕಾಣಿಸಿಕೊಂಡಿದ್ದಾರೆ. ಶಾಸ್ತ್ರೀಯ ನೃತ್ಯದ ವೇಷಭೂಷಣ, ಅದಕ್ಕೆ ಹೊಂದಿಕೆಯಾಗುವ ಸುಂದರ ಆಭರಣ ತೊಟ್ಟು ಆಕರ್ಷಕ ಭಂಗಿಯಲ್ಲಿ ನಿಂತಿರುವ ಕಂಗನಾ ರಣಾವತ್ ಅವರ ನೋಟ ಅಭಿಮಾನಿಗಳ ಕಣ್ಮನ ಆವರಿಸಿದೆ.

'ಚಂದ್ರಮುಖಿ 2'.... ಈ ಮೊದಲೇ ತಿಳಿಸಿದಂತೆ, 'ಚಂದ್ರಮುಖಿ 2' ತಮಿಳಿನ ಬ್ಲಾಕ್​ ಬಸ್ಟರ್ ಕಾಮಿಡಿ ಹಾರರ್​ ಸಿನಿಮಾ ಚಂದ್ರಮುಖಿಯ ಮುಂದುವರಿದ ಭಾಗ. ಸೂಪರ್​ ಸ್ಟಾರ್​ ರಜನಿಕಾಂತ್​, ಜ್ಯೋತಿಕಾ, ನಯನತಾರಾ ಅವರನ್ನೊಳಗೊಂಡ 'ಚಂದ್ರಮುಖಿ 1' ಅನ್ನು ನಿರ್ದೇಶಿಸಿದ್ದ ಪಿ ವಾಸು ಅವರೇ ಚಂದ್ರಮುಖಿ ಸೀಕ್ವೆಲ್​ ಅನ್ನೂ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಅವರು ರಾಜನ ಆಸ್ಥಾನದಲ್ಲಿನ ನೃತ್ಯಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೌಂದರ್ಯ, ಸಿನಿಮಾ ಮಾತ್ರವಲ್ಲದೇ ನೃತ್ಯದಲ್ಲೂ ನಟಿ ಎತ್ತಿದ ಕೈ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.

ಇದನ್ನೂ ಓದಿ:ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಬಿಟೌನ್​ ಸ್ಟಾರ್ಸ್ - ಸಲ್ಲು, ಸಿದ್ ​ಕಿಯಾರಾ, ವಿಕ್ಕಿ ಫೋಟೋ ವೈರಲ್​!

ನಟ ರಾಘವ ಮತ್ತು ಕಂಗನಾರ ಹೊರತಾಗಿ ಚಂದ್ರಮುಖಿ 2 ಸಿನಿಮಾದಲ್ಲಿ ರಾಧಿಕಾ ಶರತ್​ ಕುಮಾರ್​, ವಡಿವೇಲು, ಲಕ್ಷ್ಮೀ ಮೆನನ್ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ನಾಟು ನಾಟು ಖ್ಯಾತಿಯ ಎಂ.ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ. ಸಿನಿಮಾವನ್ನು ಗಣೇಶ ಚತುರ್ಥಿ ಸಂದರ್ಭ ತಮಿಳು, ಕನ್ನಡ, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದು ಕಂಗನಾ ಅವರ ತಲೈವಿ ಚಿತ್ರದ ನಂತರ ದಕ್ಷಿಣ ಚಿತ್ರರಂಗದ ಪ್ರತಿಭೆಗಳೊಂದಿಗೆ ನಟಿಸುತ್ತಿರುವ ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾವಾಗಿದೆ.

ಇದನ್ನೂ ಓದಿ:ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ವದಂತಿ: 'ವೃತ್ತಿಜೀವನದಲ್ಲಿ ಸಾಕಷ್ಟು ಸಂಪಾದಿಸಿದ್ದೇನೆ' ಎಂದ ಸಮಂತಾ ರುತ್​ ಪ್ರಭು

ABOUT THE AUTHOR

...view details