ಕರ್ನಾಟಕ

karnataka

ETV Bharat / entertainment

ಮಧ್ಯಪ್ರದೇಶದ ಶಿವರಾಜ್‌ ಸಿಂಗ್ ಚೌಹಾಣ್ ಸರ್ಕಾರವನ್ನು ಕೊಂಡಾಡಿದ ಕಂಗನಾ ರಣಾವತ್: ಯಾಕೆ ಗೊತ್ತೇ? - ಈಟಿವಿ ಭಾರತ ಕನ್ನಡ

Kangana Ranaut: ಮಹಿಳಾ ಸಬಲೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದ್ದು, ಈ ಚಿಂತನೆಗೆ ಬಾಲಿವುಡ್​ ನಟಿ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kangana Ranaut
ನಟಿ ಕಂಗನಾ ರಣಾವತ್​

By ETV Bharat Karnataka Team

Published : Aug 28, 2023, 6:12 PM IST

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ 35% ಮೀಸಲಾತಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. 'ಲಾಡ್ಲಿ ಬೆಹ್ನಾ' ಯೋಜನೆಯಡಿ ಮಹಿಳೆಯರಿಗೆ ನೀಡುವ ಹಣಕಾಸು ನೆರವು ಹೆಚ್ಚಿಸಿದ್ದಾರೆ. ಅದರಂತೆ, ₹1000 ಹಣಕಾಸು ನೆರವನ್ನು ಈ ತಿಂಗಳು 1,250ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಎಂಪಿ ಸರ್ಕಾರ ಮುಂದಾಗಿದ್ದು, ಬಾಲಿವುಡ್​ 'ಲೇಡಿ ಡಾನ್'​ ಕಂಗನಾ ರಣಾವತ್​ ಶ್ಲಾಘಿಸಿದ್ದಾರೆ.

ಕಂಗನಾ ಪ್ರತಿಕ್ರಿಯೆ: ಶ್ರೇಷ್ಠ​ ಭಾರತೀಯ ಚಿಂತಕ ಚಾಣಕ್ಯನ ಮಾತುಗಳನ್ನು ಉಲ್ಲೇಖಿಸಿರುವ ಕಂಗನಾ ಇನ್​ಸ್ಟಾಗ್ರಾಮ್​ ಸ್ಟೋರಿ ಹಾಕಿಕೊಂಡಿದ್ದಾರೆ. "ಮಹಿಳೆಯರಿಗೆ ಹಸಿವು ಎರಡು ಪಟ್ಟು, ಸಂಕೋಚ ನಾಲ್ಕು ಪಟ್ಟು, ಕಾಮ ಎಂಟು ಪಟ್ಟು ಮತ್ತು ಪುರುಷರಿಗೆ ಹೋಲಿಸಿದರೆ ಧೈರ್ಯ ಹತ್ತು ಪಟ್ಟು- ಚಾಣಕ್ಯ" ಎಂದು ಬರೆದುಕೊಂಡಿದ್ದಾರೆ. 'ಉತ್ತಮ' ಎಂಬ ಸ್ಟಿಕ್ಕರ್​ ಅನ್ನು ಕೂಡ ಸೇರಿಸಿದ್ದಾರೆ.

ಇಸ್ರೋ ಮಹಿಳಾ ವಿಜ್ಞಾನಿಗಳನ್ನು ಶ್ಲಾಘಿಸಿದ ನಟಿ:ಇದಕ್ಕೂ ಮೊದಲು ಕಂಗನಾ ರಣಾವತ್​ ಇಸ್ರೋ ಮಹಿಳಾ ವಿಜ್ಞಾನಿಗಳನ್ನು ಕೊಂಡಾಡಿದ್ದರು. ಚಂದ್ರಯಾನ-3 ಮಿಷನ್​ನಲ್ಲಿ ಭಾಗವಹಿಸಿದ ಕೆಲವು ಮಹಿಳಾ ವಿಜ್ಞಾನಿಗಳು ಹಣೆಯಲ್ಲಿ ಸಿಂಧೂರ ಮತ್ತು ಸೀರೆಯಲ್ಲಿ ಧರಿಸಿದ್ದ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿ, "ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಾರಾಂಶ" ಎಂದು ಬಣ್ಣಿಸಿದ್ದರು. "ಭಾರತದ ಪ್ರಮುಖ ಮಹಿಳಾ ವಿಜ್ಞಾನಿಗಳು. ಇವರೆಲ್ಲರೂ ಬಿಂದಿ, ಸಿಂಧೂರ ಮತ್ತು ಮಂಗಳಸೂತ್ರ ಧರಿಸಿದ್ದಾರೆ. ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಾರಾಂಶ. ಭಾರತೀಯ ನಿಜವಾದ ಸಾರ" ಎಂದು ಫೋಟೋಗೆ ಕ್ಯಾಪ್ಶನ್​ ನೀಡಿದ್ದರು.

ಇದನ್ನೂ ಓದಿ:Chandramukhi 2: ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ 'ಸ್ವಾಗತಾಂಜಲಿ' ಹಾಡು ಬಿಡುಗಡೆ

ಕಂಗನಾ ಸಿನಿ ಪಯಣ:ಸಿನಿಮಾ ಮತ್ತು ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕಂಗನಾ ರಣಾವತ್​ ಸದ್ಯ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಮುಖಿ-2 ನಟಿಯ ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಗಣೇಶ್​ ಚತುರ್ಥಿಯ ಸಲುವಾಗಿ ಸೆಪ್ಟಂಬರ್​ 19ರಂದು ತೆರೆ ಕಾಣಲು ಸಜ್ಜಾಗಿದೆ. 'ಚಂದ್ರಮುಖಿ-2' ತಮಿಳಿನ ಬ್ಲಾಕ್​ ಬಸ್ಟರ್ ಕಾಮಿಡಿ ಹಾರರ್​ ಸಿನಿಮಾ ಚಂದ್ರಮುಖಿಯ ಮುಂದುವರಿದ ಭಾಗ.

ಸೂಪರ್‌ಸ್ಟಾರ್​ ರಜನಿಕಾಂತ್​, ಜ್ಯೋತಿಕಾ, ನಯನತಾರಾ ಅವರನ್ನೊಳಗೊಂಡ 'ಚಂದ್ರಮುಖಿ-1' ಅನ್ನು ನಿರ್ದೇಶಿಸಿದ್ದ ಪಿ.ವಾಸು ಅವರೇ ಚಂದ್ರಮುಖಿ ಸೀಕ್ವೆಲ್​ ಅನ್ನೂ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರು ರಾಜನ ಆಸ್ಥಾನದಲ್ಲಿನ ನೃತ್ಯಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್​ ಬರುತ್ತಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಇದನ್ನೂ ಓದಿ:'ಚಂದ್ರಮುಖಿ 2' ನನ್ನ ಕರಿಯರ್​ನ ಬೆಸ್ಟ್ ಸಿನಿಮಾವೆಂದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್

ABOUT THE AUTHOR

...view details