ಕರ್ನಾಟಕ

karnataka

2 ವರ್ಷಗಳ ನಂತರ ಇಂಡಿಯನ್ 2 ಚಿತ್ರೀಕರಣ ಪುನರಾರಂಭ

By

Published : Aug 24, 2022, 1:56 PM IST

2 ವರ್ಷಗಳ ನಂತರ ಇಂಡಿಯನ್ 2 ಚಿತ್ರೀಕರಣ ಪುನರಾರಂಭ ಆಗುತ್ತಿರುವುದು ಖಷಿಯ ವಿಚಾರ ಎಂದು ನಿರ್ದೇಶಕ ಶಂಕರ್ ತಿಳಿಸಿದ್ದಾರೆ.

Kamal Haasan starrer Indian 2 film shooting resumes after 2 years
ಇಂಡಿಯನ್ 2 ಚಿತ್ರೀಕರಣ ಪುನರಾರಂಭ

ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರೀಕರಣ ಹಲವಾರು ಕಾರಣಗಳಿಂದಾಗಿ ವಿಳಂಬವಾಗುತ್ತಲೇ ಇತ್ತು. ಚಿತ್ರದ ಉಳಿದ ಭಾಗಗಳ ಚಿತ್ರೀಕರಣವನ್ನು ಚಿತ್ರ ತಂಡ ಇಂದಿನಿಂದ ಪ್ರಾರಂಭಿಸಲಿದೆ ಎಂದು ನಿರ್ದೇಶಕ ಶಂಕರ್ ಘೋಷಿಸಿದ್ದಾರೆ.

ಲಾಕ್‌ಡೌನ್‌ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ಈವರೆಗೆ ಚಿತ್ರೀಕರಣಕ್ಕೆ ಚಿತ್ರತಂಡ ಕೈ ಹಾಕಿರಲಿಲ್ಲ. ಚಿತ್ರೀಕರಣ ವಿಳಂಬವಾಗುತ್ತಲೇ ಇತ್ತು. ಇದೀಗ ಇಂಡಿಯನ್ 2 ಚಿತ್ರೀಕರಣಕ್ಕೆ ಸಮಯ ಕೂಡಿ ಬಂದಿದೆ. ಈ ಬಗ್ಗೆ ಸೋಶಿಯಲ್​ ವೀಡಿಯಾದಲ್ಲಿ ನಿರ್ದೇಶಕ ಶಂಕರ್ ಇಂಡಿಯನ್ 2 ಚಿತ್ರೀಕರಣ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಇಂಡಿಯನ್ 2 ಚಿತ್ರೀಕರಣ ಪುನರಾರಂಭ

ಶಂಕರ್ ಅವರು ಕಮಲ್ ಹಾಸನ್ ಒಳಗೊಂಡಿರುವ ಇಂಡಿಯನ್ 2 ಸಿನಿಮಾ ಪೋಸ್ಟರ್ ಅನ್ನು ಸಹ ಶೇರ್ ಮಾಡಿದ್ದಾರೆ. 'ಶುಭೋದಯ ಭಾರತೀಯರೇ, ಇಂಡಿಯನ್ 2 ಸಿನಿಮಾ ಸಂಬಂಧ ಉಳಿದಿರುವ ಚಿತ್ರೀಕರಣ ಇಂದು ಪ್ರಾರಂಭವಾಗುತ್ತಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಶುಭಾಶಯಗಳು ಬೇಕು' ಎಂದು ಬರೆದಿದ್ದಾರೆ.

ಕಮಲ್ ಹಾಸನ್ ಟ್ವೀಟ್:ಎಲ್ಲರೂ ಇಂಡಿಯನ್ 2 ಯಶಸ್ವಿ ಪ್ರಯಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಚಿತ್ರ ತಂಡದವರೊಂದಿಗೆ ಸೇರಿ ಕೆಲಸ ಮಾಡುವುದಾಗಿ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಚಿತ್ರೀಕರಣ ವೇಳೆ ಕ್ರೇನ್‌ ದುರಂತ:ಫೆಬ್ರವರಿ 19, 2020 ರಂದು ಇಂಡಿಯನ್​ 2 ಚಿತ್ರೀಕರಣ ವೇಳೆ ಕ್ರೇನ್‌ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕ್ರೇನ್‌ನಲ್ಲಿ ಕುಳಿತು ಮೂವರು ಸಹಾಯಕ ನಿರ್ದೇಶಕರು ಚಿತ್ರದ ಶೂಟಿಂಗ್ ನಡೆಸುತ್ತಿದ್ದರು. ಈ​ ವೇಳೆ ಕ್ರೇನ್ ದಿಢೀರನೆ ನೆಲಕ್ಕೆ ಬಿದ್ದಿತ್ತು. ಈ ಅವಘಡ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದರು. ಕ್ರೇನ್‌ ದುರಂತ ಮತ್ತು ಕೋವಿಡ್​ ಲಾಕ್​ಡೌನ್​ ಸೇರಿದಂತೆ ಹಲವು ಕಾರಣಗಳಿಂದ ಇಂಡಿಯನ್​ 2 ಚಿತ್ರೀಕರಣ ವಿಳಂಬವಾಗುತ್ತಲೇ ಬಂತು. ಇಂದಿನಿಂದ ಮತ್ತೆ ಶೂಟಿಂಗ್ ಆರಂಭವಾಗಿದೆ.

ಕಮಲ್​ ಹಾಸನ್, ಕಾಜಲ್ ಅಗರ್​​ವಾಲ್ ಜೊತೆಗೆ ಇಂಡಿಯನ್ 2 ಸಿನಿಮಾ ಸಿದ್ದಾರ್ಥ್, ವಿವೇಕ್, ರಕುಲ್​​ಪ್ರೀತ್ ಸಿಂಗ್​​, ಪ್ರಿಯಾ ಭವಾನಿ ಶಂಕರ್, ವಿದ್ಯುತ್ ಜಮ್ವಾಲ್​​ ಹಾಗೂ ಇನ್ನಿತರರ ತಾರಾ ಬಳಗ ಹೊಂದಿದೆ. ಲೈಕಾ ಪ್ರೊಡಕ್ಷನ್ ಬ್ಯಾನರ್‌ ಅಡಿ ಸುಭಾಷ್​ ಕರಣ್ ಚಿತ್ರವನ್ನು ನಿರ್ಮಿಸುತ್ತಿದ್ದು, ಎಸ್.ಶಂಕರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್​ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ:ಕಮಲ್​​ ಹಾಸನ್​​​ ಇಂಡಿಯನ್​​-2 ಚಿತ್ರದ ಶೂಟಿಂಗ್​​​​​​ ವೇಳೆ ಕುಸಿದು ಬಿದ್ದ ಕ್ರೇನ್‌: ಸ್ಥಳದಲ್ಲೇ ಮೂವರ ದುರ್ಮರಣ

ಕಾಜಲ್ ಅಗರ್​ವಾಲ್​ ಈ ಚಿತ್ರದಲ್ಲಿ 85 ವರ್ಷದ ವೃದ್ಧೆಯಾಗಿ ನಟಿಸುತ್ತಿದ್ದು, ಕಮಲ್​ ಹಾಸನ್ 90 ವರ್ಷದ ವೃದ್ಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 1996ರಲ್ಲಿ ಬಿಡುಗಡೆಯಾದ ಶಂಕರ್ ನಿರ್ದೇಶನದ ಇಂಡಿಯನ್ ಚಿತ್ರ ಬ್ಲಾಕ್ ಬಸ್ಟರ್ ಸಾಲಿಗೆ ಸೇರಿತ್ತು. ಇಂಡಿಯನ್ 2 ಅದರ ಮುಂದುವರಿದ ಭಾಗವಾಗಿದೆ.

ABOUT THE AUTHOR

...view details