ಭಾರತದ ಬಹುನಿರೀಕ್ಷಿತ ಸಿನಿಮಾ 'ಪ್ರಾಜೆಕ್ಟ್ ಕೆ' ನ ಫಸ್ಟ್ ಗ್ಲಿಂಪ್ಸ್ ಈಗಾಗಲೇ ಅನಾವರಣಗೊಂಡು ಸಖತ್ ಸದ್ದು ಮಾಡುತ್ತಿದೆ. 'ಕಲ್ಕಿ 2898 ಎಡಿ' ('Kalki 2898 AD') ಸಿನಿಮಾದ ಫೈನಲ್ ಟೈಟಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಾಲಿವುಡ್ ಪ್ರತಿಭೆ ದೀಪಿಕಾ ಪಡುಕೋಣೆ, ಬಿಗ್ ಬಿ ಅಮಿತಾಭ್ ಬಚ್ಚನ್, ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ಬಾಲಿವುಡ್ ಫಿಟ್ನೆಸ್ ಐಕಾನ್ ದಿಶಾ ಪಟಾನಿ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಇತ್ತೀಚೆಗೆ ಚಿತ್ರತಂಡ ಸೇರಿದ್ದಾರೆ. ಸ್ಯಾನ್ ಡಿಯಾಗೋದಲ್ಲಿ ನಡೆಯುತ್ತಿರುವ ಕಾಮಿಕ್ ಕಾನ್ ಈವೆಂಟ್ನಲ್ಲಿಯೂ ನಟ ಕಮಲ್ ಹಾಸನ್ ಭಾಗವಹಿಸಿದ್ದರು. ಆದ್ರೆ ಚಿತ್ರದಲ್ಲಿ ನೆಗೆಟಿವ್ ಪಾತ್ರವನ್ನು ನಿರ್ವಹಿಸಲು ಕಮಲ್ ಒಪ್ಪಿಕೊಂಡಿದ್ದಾರೆ. ಇದರ ಹಿಂದಿನ ಕಾರಣವನ್ನು ಕೂಡ ಸೂಪರ್ ಸ್ಟಾರ್ ಬಹಿರಂಗಪಡಿಸಿದ್ದಾರೆ.
ನೆಗೆಟಿವ್ ರೋಲ್ ಪ್ರಮುಖ ಪಾತ್ರ:ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ನಲ್ಲಿ ಪ್ರಾಜೆಕ್ಟ್ ಕೆ ಚಿತ್ರದ ಫಸ್ಟ್ ಗ್ಲಿಂಪ್ಸ್ ಮತ್ತು ಟೈಟಲ್ ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಕಮಲ್ ಅವರು ನಾಗ್ ಅಶ್ವಿನ್ ಅವರ ಚಿತ್ರದಲ್ಲಿ ನಟಿಸಲು ಏಕೆ ಒಪ್ಪಿಕೊಂಡರು ಎಂಬುದರ ಕುರಿತು ಮಾತನಾಡಿದರು. "ನಾನು ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ, ನಾನು ಇದೇ ರೀತಿಯ ಸಿನಿಮಾದಿಂದ ಬಂದಿದ್ದೇನೆ. ನೆಗೆಟಿವ್ ಇಲ್ಲದೇ, ಯಾವುದೇ ಪಾಸಿಟಿವ್ ಇಲ್ಲ. ಹಾಗಾಗಿ, ಚಿತ್ರದಲ್ಲಿ ನಕಾರಾತ್ಮಕ ಪಾತ್ರ ಪ್ರಮುಖ ಪಾತ್ರವಾಗಿದೆ" ಎಂದು ತಿಳಿಸಿದರು. ಕಲ್ಕಿ 2898 ಎಡಿ ಚಿತ್ರದಲ್ಲಿ ಕಮಲ್ ಮಾತ್ರವಲ್ಲದೇ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.