ಹಲವು ದಾಖಲೆಗಳನ್ನು ಸೃಷ್ಟಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾ ಕ್ರೇಜ್ ಮುಂದುವರಿದಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಬಾಕ್ಸ್ ಆಫೀಸ್ ಸಂಖ್ಯೆ ಮಾತ್ರವಲ್ಲದೇ ಚಿತ್ರ ತಂಡದವರಿಗೆ ನಿರ್ಮಾಪಕರು ನೀಡುತ್ತಿರುವ ಟ್ರೀಟ್ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರತಂಡದವರಿಗೆ ಸನ್ ಪಿಕ್ಚರ್ಸ್ ಗೌರವ: ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ನಿರ್ಮಿಸಿದ್ದು, ಸದ್ಯ ಯಶಸ್ಸಿನಲೆಯಲ್ಲಿ ತೇಲುತ್ತಿದೆ. ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರ ತಂಡದವರನ್ನು ಗುರುತಿಸಿ, ಅವರಿಗೆ ಕೊಡುಗೆಗಳನ್ನು ನೀಡುವ ಮೂಲಕ ಗಮನ ಸೆಳೆದಿದೆ.
ಅನಿರುದ್ಧ್ ರವಿಚಂದರ್‌ಗೆಕಾರ್ ಗಿಫ್ಟ್, ಚೆಕ್ ವಿತರಣೆ:ನಾಯಕ ನಟ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಬಳಿಕ ಸನ್ ಪಿಕ್ಚರ್ಸ್ ಗಾಯಕ, ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ರವಿಚಂದರ್ ಮೇಲೆ ಪ್ರೀತಿ ಹರಿಸಿದೆ. ಅನಿರುಧ್ ರವಿಚಂದರ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಅವರು ಹೊಸ Porsche car ಜೊತೆಗೆ ಚೆಕ್ ವಿತರಿಸಿದ್ದಾರೆ. ಚೆಕ್ ಅಮೌಂಟ್ ಅನ್ನು ಬಹಿರಂಗಪಡಿಸಿಲ್ಲ. ಚೆಕ್ ನೀಡಿದ ಮತ್ತು ಕಾರ್ ಗಿಫ್ಟ್ ಮಾಡಿದ ಕುತೂಹಲಕಾರಿ ವಿಷಯವನ್ನು ಸನ್ ಪಿಕ್ಚರ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ.
ಮಾಹಿತಿ ಹಂಚಿಕೊಂಡ ಸನ್ ಪಿಕ್ಚರ್ಸ್:ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ಮ್ಯೂಸಿಕ್ ಡೈರೆಕ್ಟರ್, ಖ್ಯಾತ ಗಾಯಕ ಅನಿರುಧ್ ರವಿಚಂದರ್ ಅವರಿಗೆ ಸನ್ ಪಿಕ್ಚರ್ಸ್ನ ಕಲಾನಿಧಿ ಮಾರನ್ ಅವರು ಚೆಕ್ ವಿತರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಕ್ಯಾಪ್ಷನ್ನಲ್ಲಿ, ''ಅನಿರುಧ್ ರವಿಚಂದರ್ ಅವರನ್ನು ಕಲಾನಿಧಿ ಮಾರನ್ ಅಭಿನಂದಿಸಿದರು ಮತ್ತು ಚೆಕ್ ಹಸ್ತಾಂತರಿಸಿದರು. ಜೈಲರ್ ಯಶಸ್ಸನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಹೊಚ್ಚ ಹೊಸ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡುತ್ತಿರುವ ಕ್ಷಣವನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡೂ ಕ್ಷಣಗಳ ಫೋಟೋ, ವಿಡಿಯೋಗಳು ಆನ್ಲೈನ್ನಲ್ಲಿ ಸದ್ದು ಮಾಡುತ್ತಿವೆ.
ಇದನ್ನೂ ಓದಿ:Jawan: ತಿರುಪತಿಯಲ್ಲಿ ಜವಾನ್ ಜೋಡಿ.. ಚಿತ್ರ ಬಿಡುಗಡೆಗೂ ಮುನ್ನ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್, ನಯನತಾರಾ
ಜೈಲರ್ ಸಿನಿಮಾ ನಿರ್ಮಾಪಕರು ಮ್ಯೂಸಿಕ್ ಡೈರೆಕ್ಟರ್ ಅನಿರುಧ್ ರವಿಚಂದರ್ ಅವರಿಗೆ ಮಾತ್ರವಲ್ಲದೇ ಚಿತ್ರಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳಿಗೂ ಈಗಾಗಲೇ ಉಡುಗೊರೆಗಳನ್ನು ನೀಡಿದೆ. ಚಿತ್ರದ ನಾಯಕ ನಟ ರಜನಿಕಾಂತ್ ಅವರಿಗೆ ಹೊಸ BMW X7 ಜೊತೆಗೆ ಚೆಕ್ ವಿತರಿಸಿದ್ದಾರೆ. ಚಿತ್ರದ ಲಾಭದ ಹಂಚಿಕೆಯ ಚೆಕ್ ಅದಾಗಿತ್ತು. ಇನ್ನು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ನೆಲ್ಸನ್ ದಿಲೀಪ್ ಕುಮಾರ್ ಅವರಿಗೆ ಹಣದ ಜೊತೆಗೆ Porsche car ನೀಡಲಾಗಿದೆ.
ಇದನ್ನೂ ಓದಿ:'ಉಸಿರೇ ಉಸಿರೇ' ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ