ಬಾಲಿವುಡ್ ನಟಿ ಕಾಜೋಲ್ ತಮ್ಮ ಚೊಚ್ಚಲ ವೆಬ್ ಸೀರೀಸ್ 'ದಿ ಟ್ರಯಲ್' ಪ್ರಮೋಶನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಚಾರದ ಸಂದರ್ಶನವೊಂದರಲ್ಲಿ ರಾಜಕೀಯ ನಾಯಕರು ಮತ್ತು ಅವರ ಶೈಕ್ಷಣಿಕ ಹಿನ್ನೆಲೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನು ಮನಗಂಡ ಕಾಜೋಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಹೇಳಿಕೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ತಮ್ಮ ಕಾಮೆಂಟ್‌ಗಳು ಶೈಕ್ಷಣಿಕ ಕೊರತೆಯಿರುವ ರಾಜಕಾರಣಿಗಳಿಗೆ ಅಪಖ್ಯಾತಿ ಉಂಟು ಮಾಡುವ ಗುರಿ ಹೊಂದಿಲ್ಲ. ಇದಕ್ಕೆ ಬದಲಾಗಿ, ಪರಿಣಾಮಕಾರಿ ನಾಯಕತ್ವದ ಗುಣಗಳನ್ನು ರೂಪಿಸುವಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಒತ್ತಿ ಹೇಳುವುದೇ ಆಗಿತ್ತು ಎಂದು ತಿಳಿಸಿದ್ದಾರೆ. ರಾಜಕೀಯ ನಾಯಕರ ಸಾಮರ್ಥ್ಯ ಅಥವಾ ಸಾಧನೆಗಳನ್ನು ಹಾಳುಮಾಡುವ ಉದ್ದೇಶವೂ ನನ್ನದಲ್ಲ. ಅವರ ಮೇಲೆ ಮೇಲೆ ಗೌರವವಿದೆ. ಆದ್ರೆ ಶಿಕ್ಷಣದ ಪ್ರಾಮುಖ್ಯತೆಯನ್ನು ಉತ್ತೇಜಿಸುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಕಾಜೋಲ್, "ನಾನು ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಯಾವುದೇ ರಾಜಕೀಯ ನಾಯಕರನ್ನು ಕೀಳಾಗಿ ಕಾಣಲಾರೆ. ನಮ್ಮಲ್ಲಿ ದೇಶವನ್ನು ಸರಿಯಾದ ದಾರಿಯಲ್ಲಿ ನಡೆಸುತ್ತಿರುವ ಕೆಲವು ಶ್ರೇಷ್ಠ ನಾಯಕರಿದ್ದಾರೆ" ಎಂದು ತಿಳಿಸಿದ್ದಾರೆ.