'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಟಾಲಿವುಡ್ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಇದೀಗ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ 'ಸತ್ಯಭಾಮ'ದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆ್ಯಕ್ಷನ್ ಮೂಡ್ನಲ್ಲಿ ಬಂದಿರುವ ಟೀಸರ್ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.
ಟೀಸರ್ನಲ್ಲೇನಿದೆ?: ಹುಡುಗಿಯೊಬ್ಬಳ ಕೊಲೆ ಪ್ರಕರಣವನ್ನು ಭೇದಿಸುವಾಗ ದಕ್ಷ ಪೊಲೀಸ್ ಅಧಿಕಾರಿ ಸತ್ಯಭಾಮಾ (ಕಾಜಲ್) ಎದುರಿಸಿದ ಸವಾಲುಗಳೇನು? ಎಂಬುದನ್ನು ಟೀಸರ್ನಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ. ಕೊಲೆಗಡುಕರ ಕೈಗೆ ಸಿಕ್ಕ ಹುಡುಗಿಯ ಜೀವ ಉಳಿಸಲು ಸತ್ಯಭಾಮಾ ಪ್ರಯತ್ನಿಸುತ್ತಾಳೆ. ಆದರೆ, ಹುಡುಗಿ ಸಾಯುತ್ತಾಳೆ. ಹೀಗಾಗಿ ಸತ್ಯಭಾಮಾಳನ್ನು ಮತ್ತೊಂದೆಡೆ ವರ್ಗಾವಣೆ ಮಾಡಲಾಗುತ್ತದೆ.
ಈ ಪ್ರಕರಣ ನಿಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರಾಜ್. ಆದರೆ, ಹುಡುಗಿಯೊಬ್ಬಳು ತನ್ನ ಜೊತೆ ಇರುವಾಗಲೇ ಪ್ರಾಣ ಕಳೆದುಕೊಂಡಿರುವುದರಿಂದ ಸತ್ಯಭಾಮಾಗೆ ಪಾಪಪ್ರಜ್ಞೆ ಕಾಡುತ್ತದೆ. ಈ ಕ್ರಮದಲ್ಲಿ ಕೊಲೆಹಂತಕರನ್ನು ಹುಡುಕುವ ಕೆಲಸದಲ್ಲಿ ತೊಡಗುತ್ತಾಳೆ. ತನ್ನ ಹುಡುಕಾಟದ ದಾರಿಯಲ್ಲಿ ಅಡ್ಡ ಬಂದ ಖಳನಾಯಕರ ಜೊತೆ ಫೈಟ್ ಮಾಡುತ್ತಾಳೆ. ಫುಲ್ ಆ್ಯಕ್ಷನ್ ಮೂಡ್ನಲ್ಲಿ ಕಾಜಲ್ ಕಾಣಿಸಿಕೊಂಡಿದ್ದು, ಟೀಸರ್ ಪವರ್ ಫುಲ್ ಆಗಿದೆ.
ಇದನ್ನೂ ಓದಿ:'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್ನಲ್ಲಿ ವಿಕ್ಕಿ ಕೌಶಲ್ - ತರಬೇತಿಯ ವಿಡಿಯೋ ನೋಡಿ
ಚಿತ್ರತಂಡ : ಕ್ರೈಂ ಥ್ರಿಲ್ಲರ್ ಆಗಿ ಮೂಡಿ ಬಂದಿರುವ 'ಸತ್ಯಭಾಮ' ಸಿನಿಮಾವನ್ನು ಸುಮನ್ ಚಿಕ್ಕಾಲ ನಿರ್ದೇಶಿಸಿದ್ದಾರೆ. ಔರಂ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಾಬಿ ತಿಕ್ಕ ಮತ್ತು ಶ್ರೀನಿವಾಸ ರಾವ್ ಟಕ್ಕಲಪಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಚರಣ್ ಪಕಾಲ ಸಂಗೀತವಿದೆ. ಮುಂದಿನ ವರ್ಷದ ಬೇಸಿಗೆ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಕಾಜಲ್ 'ಸತ್ಯಭಾಮ' ಮಾತ್ರವಲ್ಲದೇ, 'ಇಂಡಿಯನ್ 2' ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಬಾಲಿವುಡ್ನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಈ ಎಲ್ಲ ಚಿತ್ರಗಳು ಸದ್ಯ ಶೂಟಿಂಗ್ ಹಂತದಲ್ಲಿದೆ.
ಇತ್ತೀಚೆಗೆ ಅವರು ನಟಿಸಿದ್ದ 'ಭಗವಂತ ಕೇಸರಿ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಕಂಡಿದೆ. ಅಕ್ಟೋಬರ್ 19ರಂದು ದಸರಾ ಉಡುಗೊರೆಯಾಗಿ ತೆರೆ ಕಂಡ ಚಿತ್ರ ತೆಲುಗು ರಾಜ್ಯಗಳಲ್ಲಿ ಈಗಲೂ ಸದ್ದು ಮಾಡುತ್ತಿದೆ. ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿನ ಬಾಲಯ್ಯ, ಶ್ರೀಲೀಲಾ ಮತ್ತು ಕಾಜಲ್ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇತ್ತೀಚೆಗಿನ ಮಾಹಿತಿಯಂತೆ ಸಿನಿಮಾ ಹಿಂದಿ ಭಾಷೆಗೂ ಡಬ್ ಆಗಲಿದೆ. ಈ ವಿಚಾರವನ್ನು ಇತ್ತೀಚೆಗೆ ನಡೆದ 'ಭಗವಂತ ಕೇಸರಿ' ಸಕ್ಸಸ್ ಮೀಟ್ನಲ್ಲಿ ನಂದಮೂರಿ ಬಾಲಕೃಷ್ಣ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ:ಹಿಂದಿ ಭಾಷೆಗೆ ಡಬ್ ಆಗಲಿದೆ ಬಾಲಯ್ಯ ನಟನೆಯ ಬ್ಲಾಕ್ಬಸ್ಟರ್ 'ಭಗವಂತ ಕೇಸರಿ'