ಟಾಲಿವುಡ್ ಎವರ್ಗ್ರೀನ್ ಬ್ಯೂಟಿಫುಲ್, ಮಗಧೀರ ಸಿನಿಮಾದ ಅಭಿನೇತ್ರಿ ಕಾಜಲ್ ಅಗರ್ವಾಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. 'ಭಗವಂತ ಕೇಸರಿ' ಚಿತ್ರತಂಡ ಕಾಜಲ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಟ ನಂದಮೂರಿ ಬಾಲಕೃಷ್ಣ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಭಗವಂತ ಕೇಸರಿ' ಸಿನಿಮಾಗೆ ಕಾಜಲ್ ಅಗರ್ವಾಲ್ ನಾಯಕಿ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದೀಗ ನಿರ್ಮಾಪಕರು ಕಾಜಲ್ ಹುಟ್ಟುಹಬ್ಬದ ಸಲುವಾಗಿ ಅವರ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಪೋಸ್ಟರ್ನಲ್ಲಿ ನಟಿ ಫೋನ್ನಲ್ಲಿ ಮಾತನಾಡುತ್ತಾ, ಮುದ್ದಾಗಿ ಪುಸ್ತಕ ಓದುತ್ತಿರುವುದನ್ನು ಕಾಣಬಹುದು. ಬಾಲಯ್ಯ ಮತ್ತು ಕಾಜಲ್ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು.
ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ': ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ವಿಜಯ ದಶಮಿಯ ಉಡುಗೊರೆಯಾಗಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಆಕರ್ಷಕವಾಗಿದ್ದು, ಫುಲ್ ರಗಡ್ ಅವತಾರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ತೆಲಂಗಾಣ ಆಡುಭಾಷೆಯಲ್ಲಿರುವ ಬಾಲಯ್ಯ ಅವರ ಡೈಲಾಗ್‌ಗಳು ಪ್ರೇಕ್ಷಕರನ್ನು ಸೆಳೆದಿವೆ. ಮಾಸ್ ಅವತಾರದಲ್ಲಿರುವ ಬಾಲಯ್ಯ ಚಿತ್ರದಲ್ಲಿ ಕಾಮಿಡಿ ಮಾಡುವ ಮೂಲಕ ಮನರಂಜನೆ ಕೂಡ ಕೊಡಲಿದ್ದಾರೆ.