ಕರ್ನಾಟಕ

karnataka

ETV Bharat / entertainment

ಧನ್ವೀರ್ 'ಕೈವ' ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್: ಟೀಸರ್ ರಿಲೀಸ್ - Dhanveer upcoming movie

ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೈವ'ದ ಟೀಸರ್ ಅನಾವರಣಗೊಂಡಿದೆ.

Kaiva teaser release
ಕೈವ ಟೀಸರ್ ರಿಲೀಸ್

By ETV Bharat Karnataka Team

Published : Nov 15, 2023, 2:21 PM IST

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಸಿನಿಮಾ 'ಕೈವ'. ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಟನೆಯ ಸಿನಿಮಾಗೆ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಹುಡುಗ ಅಭಿಷೇಕ್ ಅಂಬರೀಶ್ ಸಾಥ್ ಸಿಕ್ಕಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಧನ್ವೀರ್ ನಟನೆಯ 'ಕೈವ' ಚಿತ್ರದ 'ಆ್ಯಕ್ಷನ್ ಟೀಸರ್' ಅನಾವರಣಗೊಂಡಿದೆ.

'ಕೈವ' ಟೀಸರ್ ರಿಲೀಸ್:ಅಭಿಷೇಕ್ ಅಂಬರೀಶ್ ಟೀಸರ್​ ಬಿಡುಗಡೆ ಮಾಡಿ ಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ಅಭಿಷೇಕ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ‌. ಈ ಸಂದರ್ಭದಲ್ಲಿ ನಿರ್ದೇಶಕ ಮದಗಜ ಮಹೇಶ್ ಕುಮಾರ್ ಅವರು ಅಭಿಷೇಕ್ ಅಂಬರೀಶ್ ಅವರಿಗೆ ಸಾಥ್ ನೀಡಿದರು‌.

ಬನಾರಸ್ ಬಳಿಕ ನಿರ್ದೇಶಕ ಜಯತೀರ್ಥ ಆ್ಯಕ್ಷನ್​​ ಕಟ್​​ ಹೇಳಿರುವ ಮಾಸ್ ಚಿತ್ರವೇ 'ಕೈವ'. ಈ ಚಿತ್ರದ ಬಗ್ಗೆ ಮಾತು ಶುರು ಮಾಡಿದ ನಿರ್ದೇಶಕ ಜಯತೀರ್ಥ, 'ಕೈವ' ಎಂಬುದು ಒಬ್ಬ ವ್ಯಕ್ತಿಯ ಹೆಸರು. 1983ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರವಿದು. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆ ನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕಶವಾಗಿ ತಿಳಿದುಕೊಂಡೆ.

ಧನ್ವೀರ್ ಜೊತೆ ಮೇಘಾ ಶೆಟ್ಟಿ

ಈ ಘಟನೆ ಕಂಡ ಅನೇಕರು ಈಗಲೂ ಇದ್ದಾರೆ. ಆ ಸಂದರ್ಭ ನಡೆದ ಗಂಗಾರಾಮ್ ಕಟ್ಟಡ ದುರಂತಕ್ಕೂ, ಈ ಚಿತ್ರದ ಕಥೆಗೂ ಸಂಬಂಧವಿದೆ. ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಘು ಶಿವಮೊಗ್ಗ ನಟಿಸಿದ್ದಾರೆ. ಐವರು ನಿರ್ದೇಶಕರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮೈಸೂರಿನಲ್ಲಿ 48 ದಿನಗಳ ಚಿತ್ರೀಕರಣ ನಡೆದಿದೆ. ಕೆಲ ದೃಶ್ಯಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್‌: ಭಾರತ-ನ್ಯೂಜಿಲೆಂಡ್‌ ಹೈವೋಲ್ಟೇಜ್​ ಸೆಮಿ ಫೈನಲ್‌​ ವೀಕ್ಷಿಸಲಿರುವ ರಜಿನಿಕಾಂತ್

ಬಜಾರ್ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ನಲ್ಲಿ ಭರವಸೆ ಮೂಡಿಸಿರುವ ಧನ್ವೀರ್ ಮಾತನಾಡಿ, ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ 'ಕೈವ'. ಈ ಕಥೆ ಎಲ್ಲಾ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎಂದು ತಿಳಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

'ಕೈವ' ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್

ಇದನ್ನೂ ಓದಿ:ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಿವುಡ್​ ಬೆಡಗಿಯರು: ಕತ್ರಿನಾ, ಸಾರಾ ಟ್ರೆಡಿಶನಲ್​​ ಲುಕ್​​ಗೆ ಫ್ಯಾನ್ಸ್​​ ಕೊಟ್ರು ಫುಲ್​ ಮಾರ್ಕ್ಸ್

ಧನ್ವೀರ್ ಜೊತೆ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ರಘು ನಿಡವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ರವೀಂದ್ರಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಬಾಲಕೃಷ್ಣ ಕೆಲಸ‌ ಮಾಡಿದ್ದಾರೆ. ಸದ್ಯ ಟೀಸರ್​​ನಿಂದ ಗಮನ ಸೆಳೆಯುತ್ತಿರುವ 'ಕೈವ' ಡಿಸೆಂಬರ್​​ನಲ್ಲಿ ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ABOUT THE AUTHOR

...view details