ಬ್ಯೂಟಿಫುಲ್ ಮನಸುಗಳು ಹಾಗೂ ಬೆಲ್ ಬಾಟಮ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಜಯತೀರ್ಥ ಅವರು ಬನಾರಸ್ ಸಿನಿಮಾದ ಬಿಡುಗಡೆ ಮಧ್ಯೆ ಮಗದೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಜಾರ್ ಚಿತ್ರದ ಯುವನಟ ಧನ್ವೀರ್ ಜೊತೆ ಹೊಸ ಸಿನಿಮಾಗೆ ಕೈಹಾಕಿದ್ದು, ಅಕ್ಕೆ ಚಿತ್ರಕ್ಕೆ ಕೈವ ಅಂತಾ ಕ್ಯಾಚಿ ಟೈಟಲ್ ಇಡಲಾಡಗಿದೆ. ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಸದ್ಯ ಅವರ ಫಸ್ಟ್ ಲುಕ್ಗೆ ಜಾಲತಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ನಿರ್ದೇಶಕ ಜಯತೀರ್ಥ ಹೇಳುವ ಹಾಗೆ ಇದೊಂದು ನೈಜ ಘಟನೆಯ ಕಥೆಯಾಗಿದೆ. '1983ರ ಸೆಪ್ಟೆಂಬರ್ 13ರ ಮಧ್ಯಾಹ್ನ 3.20ಕ್ಕೆ ಒಂದು ದುರಂತವೊಂದು ನಡೆದಿತ್ತು. ಈ ಘಟನೆಯಿಂದ ಆಗ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಆದರೆ, ಕೈವ ಬಂದೇ ಬರುತ್ತಾನೆ ಎಂದು ಅವಳು ಕಾದಿದ್ದಳು. ಸತ್ಯಘಟನೆ.. ಪ್ರೇಮಕಥೆ.. ಮಾಸಿಗೆ ಮಾಸ್... ಕ್ಲಾಸಿಗೆ ಕ್ಲಾಸ್..' ಎಂದು ಅವರು ಬರೆದುಕೊಂಡಿದ್ದಾರೆ.